Ind vs Aus: ಜನಾಂಗೀಯ ನಿಂದನೆ ಮುಂದುವರೆಸಿದ ಆಸ್ಟ್ರೇಲಿಯನ್ನರು: ಸ್ಟೇಡಿಯಂನಿಂದ 6 ಮಂದಿ ಹೊರಕ್ಕೆ..!

ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಅಂಪೈರ್ ಮೂಲಕ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ. ಇದೇ ವೇಳೆ ಕಾರ್ಯಪ್ರವೃತರಾದ ಸಿಡ್ನಿ ಕ್ರಿಕೆಟ್ ಮೈದಾನದ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದ 6 ಮಂದಿಯನ್ನು ಮೈದಾನದಿಂದ ಹೊರ ಹೋಗುವಂತೆ ತಿಳಿಸಿದ್ದಾರೆ.

Ind vs Aus

Ind vs Aus

 • Share this:
  ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಮುಂದುವರೆದಿದೆ. ಪಂದ್ಯದ 4ನೇ ದಿನ ಟೀಮ್ ಇಂಡಿಯಾ ಫೀಲ್ಡಿಂಗ್ ಮಾಡುವ​ ​ವೇಳೆ ಮತ್ತೊಮ್ಮೆ ಮೊಹಮ್ಮದ್ ಸಿರಾಜ್ ನಿಂದನೆಗೆ ಗುರಿಯಾಗಿದ್ದಾರೆ. ಪಂದ್ಯದ ಮೂರನೇ ದಿನ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜಸ್​ಪ್ರೀತ್ ಬುಮ್ರಾ ಹಾಗೂ ಸಿರಾಜ್ ಅವರನ್ನು ಪ್ರೇಕ್ಷಕರು ನಿಂದಿಸಿದ್ದರು. ಈ ಬಗ್ಗೆ ಭಾರತೀಯ ಆಟಗಾರರು ಅಂಪೈರ್ ಗಮನಕ್ಕೆ ತಂದು, ದೂರು ದಾಖಲಿಸಿದ್ದರು.

  ಇದೀಗ ನಾಲ್ಕನೇ ದಿನವೂ ಅನುಚಿತ ವರ್ತನೆ ಮುಂದುವರೆದಿದ್ದು, ಬೌಂಡರಿ ಲೈನ್​ನಲ್ಲಿದ್ದ ಸಿರಾಜ್ ಅವರನ್ನು ಜನಾಂಗೀಯ ನಿಂದನೆ ಮಾಡಲಾಗಿದೆ. ಈ ಬಗ್ಗೆ ಸಿರಾಜ್ ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಅಂಪೈರ್ ಮೂಲಕ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ. ಇದೇ ವೇಳೆ ಕಾರ್ಯಪ್ರವೃತರಾದ ಸಿಡ್ನಿ ಕ್ರಿಕೆಟ್ ಮೈದಾನದ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದ 6 ಮಂದಿಯನ್ನು ಮೈದಾನದಿಂದ ಹೊರ ಹೋಗುವಂತೆ ತಿಳಿಸಿದ್ದಾರೆ.

  ಇದೇ ವೇಳೆ ಆಕ್ರೋಶಗೊಂಡ ಆರು ಮಂದಿಯ ಗುಂಪು, ತಮ್ಮ ಕೈಯಲ್ಲಿದ್ದ ಕೆಲ ವಸ್ತುಗಳನ್ನು ಮೈದಾನಕ್ಕೆ ಎಸೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಕ್ರಿಕೆಟ್​ನಲ್ಲಿ ಜನಾಂಗೀಯ ನಿಂದನೆ ಚರ್ಚೆಗಳು ಮುನ್ನಲೆಗೆ ಬಂದಿದೆ.  ಘಟನೆ ವರದಿಯಾದ ತಕ್ಷಣ, ಐಸಿಸಿ ಸಹ ಕಾರ್ಯಪ್ರವೃತ್ತವಾಗಿದ್ದು, ಆರೋಪಿಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಆಸಿಸ್ ಪತ್ರಿಕೆ 'ಸಿಡ್ನಿ ಮಾರ್ನಿಗ್ ಹೆರಾಲ್ಡ್' ವರದಿ ಮಾಡಿದೆ. ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ ನಿರ್ವಾಹಕರು, ನ್ಯೂ ಸೌತ್ ವೇಲ್ಸ್ ಅಧಿಕಾರಿಗಳು ಹಾಗೂ ಐಸಿಸಿ, ಘಟನೆಗೆ ಕಾರಣವಾದ ಜನರನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿವೆ. ಬೌಂಡರಿ ಬಳಿ ನಿಂತಿದ್ದ ಓರ್ವ ಸಿಬ್ಬಂದಿ ಸಹ ನಿಂದನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
  Published by:zahir
  First published: