ಕೊನೆಯ 6 ಇನ್ನಿಂಗ್ಸ್​​ನಲ್ಲಿ ಶಮಿ ಗಳಿಸಿದ ರನ್ ಕೇಳಿದರೆ ಶಾಕ್ ಆಗೋದು ಗ್ಯಾರೆಂಟಿ!

ಶಮಿ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಭಾಗವತ್ ಚಂದ್ರಶ್ರೇಖರ್​​ರ ಅನಗತ್ಯ ಕೆಟ್ಟ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

  • Share this:
ಬೆಂಗಳೂರು (ಸೆ. 01): ವೇಗಿ ಮೊಹಮ್ಮದ್ ಶಮಿಯಿಂದ ಭಾರತ ಕ್ರಿಕೆಟ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಸಾಮಾನ್ಯವಾಗಿ ಹೆಚ್ಚಿನ ನಿರೀಕ್ಷೆ ಇಟ್ಟಿರುವುದಿಲ್ಲ. 10ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬ್ಯಾಟ್ಸ್​ಮನ್​​ ಕಷ್ಟದ ಸಂದರ್ಭದಲ್ಲಿ ರನ್ ಕಲೆಹಾಕಿಲ್ಲವಾದರು ಕನಿಷ್ಠ ಸ್ಟ್ಯಾಂಡಿಂಗ್​ ನೀಡಬೇಕೆಂದು ಬ್ಯಾಟಿಂಗ್ ಅಭ್ಯಾಸ ಮಾಡುತ್ತಾರೆ. ಆದರೆ, ಶಮಿ ಬ್ಯಾಟಿಂಗ್ ನೋಡಿದರೆ, ಅವರು ಕಲೆಹಾಕಿದ ರನ್ ನೋಡಿದರೆ ಶಾಕ್ ಆಗುವುದು ಗ್ಯಾರೆಂಟಿ.

ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಭಾರತ ಪರ ಮೊಹಮ್ಮದ್ ಶಮಿ ಅವರು ರಖೀಮ್ ಕಾರ್ನ್​ವೆಲ್ ಬೌಲಿಂಗ್​ನಲ್ಲಿ ಶೂನ್ಯ ರನ್​ಗೆ ಔಟ್ ಆದರು. 28 ವರ್ಷ ಪ್ರಾಯದ ಶಮಿ ಟೆಸ್ಟ್​ ಕ್ರಿಕೆಟ್​ನಲ್ಲಿ ಒಟ್ಟು 433 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ.

ಆದರೆ, ಇತ್ತೀಚೆಗೆ ಶಮಿ ಅವರ ಟೆಸ್ಟ್​​ ಬ್ಯಾಟಿಂಗ್ ಪ್ರದರ್ಶನ ನೋಡುವುದಾದರೆ, ಕಳೆದ 6 ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿದ್ದಾರೆ. 8 ಎಸೆತಗಳಲ್ಲಿ ನಾಲ್ಕು ಬಾರಿ ಶೂನ್ಯ ರನ್​ಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಇಶಾಂತ್ ಶರ್ಮಾ ಚೊಚ್ಚಲ ಅರ್ಧಶತಕ; ಡ್ರೆಸ್ಸಿಂಗ್ ರೂಮ್​ನಲ್ಲಿ ಕೊಹ್ಲಿ ಮಾಡಿದ್ದೇನು ನೋಡಿ!

ಮೊಹಮ್ಮದ್ ಶಮಿ ಕೊನೆಯ 6 ಇನ್ನಿಂಗ್ಸ್​:

0(2) vs ವೆಸ್ಟ್​ ಇಂಡೀಸ್

0(1) vs ವೆಸ್ಟ್​ ಇಂಡೀಸ್

0*(3) vs ಆಸ್ಟ್ರೇಲಿಯಾ

0*(0) vs ಆಸ್ಟ್ರೇಲಿಯಾ

0(1) vs ಆಸ್ಟ್ರೇಲಿಯಾ

0(1) vs ಆಸ್ಟ್ರೇಲಿಯಾ

ಈ ಮೂಲಕ ಶಮಿ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಭಾಗವತ್ ಚಂದ್ರಶ್ರೇಖರ್​​ರ ಅನಗತ್ಯ ಕೆಟ್ಟ ದಾಖಲೆಯನ್ನು ಸರಿಗಟ್ಟಿದ್ದಾರೆ. ಚಂದ್ರಶ್ರೇಖರ್ ಕೂಡ 6 ಟೆಸ್ಟ್​ ಇನ್ನಿಂಗ್ಸ್​ನಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡಿದ್ದರು. ಸದ್ಯ ಶಮಿ ಕೂಡ ಇದೇ ಸಾಲಿಗೆ ಸೇರಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಹಿಟ್​ಮ್ಯಾನ್ ಮತ್ತೆ ಎಡವಟ್ಟು; ಈ ಬಾರಿ ರೋಹಿತ್ ಮಾಡಿದ್ದೇನು ಗೊತ್ತಾ?

ಸದ್ಯ ಸಾಗುತ್ತಿರುವ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಹನುಮಾ ವಿಹಾರಿಯ 111 ಹಾಗೂ ಇಶಾಂತ್ ಶರ್ಮಾರ 57 ರನ್​ಗಳ ನೆರವಿನಿಂದ 416 ರನ್ ಕಲೆಹಾಕಿದೆ. ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ವೆಸ್ಟ್​ ಇಂಡೀಸ್ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 87 ರನ್​ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

First published: