ತಂಡದಿಂದ ಅಫ್ಘಾನಿಸ್ತಾನ ಧೋನಿ ಸಸ್ಪೆಂಡ್: ಸದ್ಯ ಪಾಕ್ನಲ್ಲಿ ಕ್ರಿಕೆಟ್ ಅಭ್ಯಾಸ..!
Mohammad Shahzad : ವಿಶ್ವಕಪ್ ಟೂರ್ನಿಯ ಮಧ್ಯದಲ್ಲಿ ಮೊಹಮ್ಮದ್ ಶಹಜಾದ್ ಅವರನ್ನು ತಂಡದಿಂದ ಕೈ ಬಿಟ್ಟು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು. ಈ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಶಹಜಾದ್ಗೆ ಮೊಣಕಾಲಿನ ಗಾಯವಾಗಿದ್ದು, ಹೀಗಾಗಿ ಅವರನ್ನು ತವರಿಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿತ್ತು.

ಧೋನಿ
- News18 Kannada
- Last Updated: August 11, 2019, 6:59 PM IST
ಅಫ್ಘಾನಿಸ್ತಾನದ ಧೋನಿ ಖ್ಯಾತಿಯ ಮೊಹಮ್ಮದ್ ಶಹಜಾದ್ ಅವರ ಒಪ್ಪಂದವನ್ನುಅನಿರ್ದಿಷ್ಟಾವಧಿಗೆ ರದ್ದುಗೊಳಿಸಿರುವುದಾಗಿ ಅಫ್ಘಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ. ವಿಶ್ವಕಪ್ ಪಂದ್ಯದ ವೇಳೆ ಅರ್ಧದಲ್ಲೇ ಶಹಜಾದ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಯ್ಕೆದಾರರ ವಿರುದ್ಧ ಹೇಳಿಕೆಯನ್ನು ನೀಡಿದ್ದರು.
ಈ ಕುರಿತು ಜುಲೈ 20 ಮತ್ತು 24 ರಂದು ಮಂಡಳಿಯ ಶಿಸ್ತು ಸಮಿತಿಯು ಕರೆದರೂ ಶಹಜಾದ್ ಹಾಜರಾಗಿರಲಿಲ್ಲ. ಇನ್ನು ಐಸಿಸಿ ಕ್ರಿಕೆಟ್ ವಿಶ್ವಕಪ್ಗೆ ಸಂಬಂಧಿಸಿದ ಶಿಸ್ತು ಪ್ರಕರಣದ ವಿಚಾರಣೆಗಾಗಿ ಈ ಸಭೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಕೂಡ ಯಾವುದೇ ಮಾಹಿತಿ ನೀಡದಿರುವ ಕಾರಣ ಮೊಹಮ್ಮದ್ ಶಹಜಾದ್ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಪಾಕಿಸ್ತಾನದಲ್ಲಿದ್ದಾರೆ ಮೊಹಮ್ಮದ್ ಶಹಜಾದ್
ಇಎಸ್ಪಿಎನ್ ಕ್ರಿನ್ಫೊ ಮಾಹಿತಿ ಪ್ರಕಾರ, ಮೊಹಮ್ಮದ್ ಶಹಜಾದ್ ಪ್ರಸ್ತುತ ಪಾಕಿಸ್ತಾನದ ಪೇಶಾವರದಲ್ಲಿದ್ದಾರೆ. ಅಫ್ಘಾನ್ ಆಟಗಾರನಾಗಿದ್ದರೂ ಅಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ವರ್ಷ, ಅಫ್ಘಾನ್ ಕ್ರಿಕೆಟ್ ಮಂಡಳಿ ಎಲ್ಲಾ ಆಟಗಾರರು ಅಫ್ಘಾನಿಸ್ತಾನದಲ್ಲಿ ಶಾಶ್ವತವಾಗಿ ಉಳಿದು ಇಲ್ಲಿಯೇ ಅಭ್ಯಾಸ ಮಾಡಬೇಕೆಂದು ಎಚ್ಚರಿಸಿತ್ತು. ಮಂಡಳಿಯ ಈ ನಿಯಮವನ್ನು ಮೀರುವ ಆಟಗಾರರ ಒಪ್ಪಂದವನ್ನು ಕೊನೆಗೊಳಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಪಾಕಿಸ್ತಾನದ ನಂಟು ಶಹಜಾದ್ ಮೂಲತಃ ಅಫ್ಘಾನಿಸ್ತಾನದ ನಂಗರ್ಹಾರ್ ಪ್ರದೇಶದವರಾಗಿದ್ದರು ತಮ್ಮ ಬಾಲ್ಯವನ್ನು ಪಾಕ್ ಪೇಶಾವರದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಕಳೆದಿದ್ದರು. ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಬಳಿ ಅನೇಕ ಅಫ್ಘಾನ್ ಕ್ರಿಕೆಟಿಗರು ಬೆಳೆದಿದ್ದಾರೆ. ಶಹಜಾದ್ ಕೂಡ ಅಂತವರಲ್ಲಿ ಒಬ್ಬರಾಗಿದ್ದು, ಕೆಲ ವರ್ಷಗಳ ಹಿಂದೆ ಪೇಶಾವರದ ಯುವತಿಯನ್ನು ವಿವಾಹವಾಗಿದ್ದರು. ಹೀಗಾಗಿ ಪೇಶಾವರದಲ್ಲಿ ತಾತ್ಕಾಲಿಕ ಪ್ರಜೆಯಾಗಿ ಶಹಜಾದ್ ನೆಲೆಸಿದ್ದಾರೆ.
ವಿಶ್ವಕಪ್ ಕಹಿ ಅನುಭವ:
ವಿಶ್ವಕಪ್ ಟೂರ್ನಿಯ ಮಧ್ಯದಲ್ಲಿ ಮೊಹಮ್ಮದ್ ಶಹಜಾದ್ ಅವರನ್ನು ತಂಡದಿಂದ ಕೈ ಬಿಟ್ಟು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು. ಈ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಶಹಜಾದ್ಗೆ ಮೊಣಕಾಲಿನ ಗಾಯವಾಗಿದ್ದು, ಹೀಗಾಗಿ ಅವರನ್ನು ತವರಿಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಸೋಷಿಯಲ್ ಮೀಡಿಯಾದಲ್ಲಿ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅಫ್ಘಾನ್ ಕ್ರಿಕೆಟಿಗ, ನಾನು ಫಿಟ್ ಆಗಿದ್ದರೂ ಕ್ಯಾಪ್ಟನ್ ಮತ್ತು ಮ್ಯಾನೇಜರ್ ಗಾಯದ ನೆಪ ಹೇಳಿ ತನ್ನನ್ನು ಹೊರಗಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಫ್ಘಾನಿಸ್ತಾನದ ಯಶಸ್ವಿ ಬ್ಯಾಟ್ಸ್ಮನ್
ಶಹಜಾದ್ 84 ಏಕದಿನ ಪಂದ್ಯಗಳಲ್ಲಿ 33.66 ಸರಾಸರಿಯಲ್ಲಿ 2727 ರನ್ ಗಳಿಸಿದ್ದಾರೆ. ಅಲ್ಲದೆ ಬಹುಕಾಲದವರೆಗೆ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮಿಂಚಿದ್ದು, ಇದರೊಂದಿಗೆ ಕೆಲ ವಿದೇಶಿ ಲೀಗ್ನಲ್ಲೂ ಮಿಂಚಿದ್ದರು. ಆದರೆ ವಿಶ್ವಕಪ್ ವೇಳೆ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿದಿದ್ದ ಶಹಜಾದ್ ಕೇವಲ 7 ರನ್ ಮಾತ್ರ ಗಳಿಸಲು ಶಕ್ತರಾಗಿದ್ದರು.

ಧೋನಿಯ ಅಭಿಮಾನಿ:
ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ದೊಡ್ಡ ಅಭಿಮಾನಿ ಎಂದು ಹಿಂದೊಮ್ಮೆ ಶಹಜಾದ್ ಹೇಳಿಕೊಂಡಿದ್ದರು. ಅನೇಕ ಬಾರಿ ಧೋನಿ ಶೈಲಿಯಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿ ಮಿಂಚಿದ್ದರು. ಹೀಗಾಗಿ ಅಫ್ಘಾನಿಸ್ತಾನ ಧೋನಿ ಎಂದು ಮೊಹಮ್ಮದ್ ಶಹಜಾದ್ರನ್ನು ಬಣ್ಣಿಸಲಾಗುತ್ತದೆ.
ಈ ಕುರಿತು ಜುಲೈ 20 ಮತ್ತು 24 ರಂದು ಮಂಡಳಿಯ ಶಿಸ್ತು ಸಮಿತಿಯು ಕರೆದರೂ ಶಹಜಾದ್ ಹಾಜರಾಗಿರಲಿಲ್ಲ. ಇನ್ನು ಐಸಿಸಿ ಕ್ರಿಕೆಟ್ ವಿಶ್ವಕಪ್ಗೆ ಸಂಬಂಧಿಸಿದ ಶಿಸ್ತು ಪ್ರಕರಣದ ವಿಚಾರಣೆಗಾಗಿ ಈ ಸಭೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಕೂಡ ಯಾವುದೇ ಮಾಹಿತಿ ನೀಡದಿರುವ ಕಾರಣ ಮೊಹಮ್ಮದ್ ಶಹಜಾದ್ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಶಹಜಾದ್
ಇಎಸ್ಪಿಎನ್ ಕ್ರಿನ್ಫೊ ಮಾಹಿತಿ ಪ್ರಕಾರ, ಮೊಹಮ್ಮದ್ ಶಹಜಾದ್ ಪ್ರಸ್ತುತ ಪಾಕಿಸ್ತಾನದ ಪೇಶಾವರದಲ್ಲಿದ್ದಾರೆ. ಅಫ್ಘಾನ್ ಆಟಗಾರನಾಗಿದ್ದರೂ ಅಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ವರ್ಷ, ಅಫ್ಘಾನ್ ಕ್ರಿಕೆಟ್ ಮಂಡಳಿ ಎಲ್ಲಾ ಆಟಗಾರರು ಅಫ್ಘಾನಿಸ್ತಾನದಲ್ಲಿ ಶಾಶ್ವತವಾಗಿ ಉಳಿದು ಇಲ್ಲಿಯೇ ಅಭ್ಯಾಸ ಮಾಡಬೇಕೆಂದು ಎಚ್ಚರಿಸಿತ್ತು. ಮಂಡಳಿಯ ಈ ನಿಯಮವನ್ನು ಮೀರುವ ಆಟಗಾರರ ಒಪ್ಪಂದವನ್ನು ಕೊನೆಗೊಳಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಶಹಜಾದ್
ಪಾಕಿಸ್ತಾನದ ನಂಟು
Loading...
ವಿಶ್ವಕಪ್ ಕಹಿ ಅನುಭವ:
ವಿಶ್ವಕಪ್ ಟೂರ್ನಿಯ ಮಧ್ಯದಲ್ಲಿ ಮೊಹಮ್ಮದ್ ಶಹಜಾದ್ ಅವರನ್ನು ತಂಡದಿಂದ ಕೈ ಬಿಟ್ಟು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು. ಈ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಶಹಜಾದ್ಗೆ ಮೊಣಕಾಲಿನ ಗಾಯವಾಗಿದ್ದು, ಹೀಗಾಗಿ ಅವರನ್ನು ತವರಿಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಸೋಷಿಯಲ್ ಮೀಡಿಯಾದಲ್ಲಿ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅಫ್ಘಾನ್ ಕ್ರಿಕೆಟಿಗ, ನಾನು ಫಿಟ್ ಆಗಿದ್ದರೂ ಕ್ಯಾಪ್ಟನ್ ಮತ್ತು ಮ್ಯಾನೇಜರ್ ಗಾಯದ ನೆಪ ಹೇಳಿ ತನ್ನನ್ನು ಹೊರಗಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಫ್ಘಾನಿಸ್ತಾನದ ಯಶಸ್ವಿ ಬ್ಯಾಟ್ಸ್ಮನ್
ಶಹಜಾದ್ 84 ಏಕದಿನ ಪಂದ್ಯಗಳಲ್ಲಿ 33.66 ಸರಾಸರಿಯಲ್ಲಿ 2727 ರನ್ ಗಳಿಸಿದ್ದಾರೆ. ಅಲ್ಲದೆ ಬಹುಕಾಲದವರೆಗೆ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮಿಂಚಿದ್ದು, ಇದರೊಂದಿಗೆ ಕೆಲ ವಿದೇಶಿ ಲೀಗ್ನಲ್ಲೂ ಮಿಂಚಿದ್ದರು. ಆದರೆ ವಿಶ್ವಕಪ್ ವೇಳೆ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿದಿದ್ದ ಶಹಜಾದ್ ಕೇವಲ 7 ರನ್ ಮಾತ್ರ ಗಳಿಸಲು ಶಕ್ತರಾಗಿದ್ದರು.

ಧೋನಿ ಜತೆ ಶಹಜಾದ್