ಮಾಜಿ ಕ್ರಿಕೆಟಿಗ ಅಜರ್ ಮಗನ ಮದುವೆಗೆ ತೆಲಂಗಾಣ ಮುಖ್ಯಮಂತ್ರಿಗೆ ವಿಶೇಷ ಆಮಂತ್ರಣ

25 ವರ್ಷದ ಆನಮ್ 2016ರಲ್ಲಿ ಅಖ್ತರ್ ರಶೀದ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ಒಂದೂವರೆ ವರ್ಷಗಳ ನಂತರ ಅವರ ಮದುವೆ ಮುರಿದುಬಿದ್ದಿತ್ತು. ಇದೀಗ ಅಸಾದುದ್ದೀನ್ ಜೊತೆಗೆ ಆನಮ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

news18-kannada
Updated:December 10, 2019, 6:07 PM IST
ಮಾಜಿ ಕ್ರಿಕೆಟಿಗ ಅಜರ್ ಮಗನ ಮದುವೆಗೆ ತೆಲಂಗಾಣ ಮುಖ್ಯಮಂತ್ರಿಗೆ ವಿಶೇಷ ಆಮಂತ್ರಣ
.
  • Share this:
ಖ್ಯಾತ ಕ್ರಿಕೆಟಿಗ ಮತ್ತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಮನೆಯಲ್ಲೀಗ ಮದುವೆ ಸಂಭ್ರಮ. ಪ್ರಸಿದ್ಧ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಅವರನ್ನು ಅಜರ್ ಮಗ ಅಸಾದುದ್ದೀನ್ ವಿವಾಹವಾಗಲಿದ್ದಾರೆ.

ಈ ನಿಮಿತ್ತ ಇಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾದ ಅಜರ್ ಹಾಗೂ ಸಾನಿಯಾ ಕುಟುಂಬ ವಿಶೇಷ ಮದುವೆ ಆಮಂತ್ರಣ ನೀಡಿದರು.

ಮುಖ್ಯಮಂತ್ರಿ ಅವರ ಪ್ರಗತಿ ಭವನ್​ಗೆ ಭೇಟಿ ನೀಡಿದ ಅಜರುದ್ದೀನ್, ಅಸಾದುದ್ದೀನ್ ಹಾಗೂ ಸಾನಿಯಾ ಕುಟುಂಬ ಮದುವೆ ಸಮಾರಂಭಕ್ಕೆ ಆಮಂತ್ರಿಸಿದರು. ಆನಮ್ ಮಿರ್ಜಾ ಮದುವೆ ತಯಾರಿ ಜೋರಾಗಿದ್ದು, ಸೋಮವಾರ ಮೆಹಂದಿ ಕಾರ್ಯಕ್ರಮ ನಡೆದಿದೆ.

ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ವಿನ್ನರ್ ಶಶಿ ಕುಮಾರ್ ಈಗೇನು ಮಾಡುತ್ತಿದ್ದಾರೆ?

25 ವರ್ಷದ ಆನಮ್ 2016ರಲ್ಲಿ ಅಖ್ತರ್ ರಶೀದ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ಒಂದೂವರೆ ವರ್ಷಗಳ ನಂತರ ಅವರ ಮದುವೆ ಮುರಿದುಬಿದ್ದಿತ್ತು. ಇದೀಗ ಅಸಾದುದ್ದೀನ್ ಜೊತೆಗೆ ಆನಮ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ಡಿಸೆಂಬರ್ 12 ರಂದು ಹೈದರಾಬಾದ್​ನಲ್ಲಿ ಅದ್ದೂರಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ರಾಜಕೀಯ ನೇತಾರರು, ಸೆಲೆಬ್ರಿಟಿಗಳು ಹಾಗೂ ಕ್ರಿಕೆಟ್ ತಾರೆಯರು ಅಸಾದ್-ಆನಮ್ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ
First published:December 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ