ಬ್ರಿಟಿಷ್ ಪೌರತ್ವಕ್ಕೆ ಪಾಕ್ ಆಟಗಾರ ಅರ್ಜಿ; ಐಪಿಎಲ್​ನತ್ತ ಅಮೀರ್ ಕಣ್ಣು..?

ಅಮೀರ್ ಐಪಿಎಲ್ ಆಡುವ ಇರಾದೆ ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದೆ. 2008 ರಲ್ಲಿ ಮುಂಬೈ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನ ಆಟಗಾರರು ಐಪಿಎಲ್​ನಲ್ಲಿ ಆಡದಂತೆ ನಿರ್ಬಂಧ ಹೇಳಲಾಗಿತ್ತು.

Vinay Bhat | news18
Updated:July 28, 2019, 4:06 PM IST
ಬ್ರಿಟಿಷ್ ಪೌರತ್ವಕ್ಕೆ ಪಾಕ್ ಆಟಗಾರ ಅರ್ಜಿ; ಐಪಿಎಲ್​ನತ್ತ ಅಮೀರ್ ಕಣ್ಣು..?
ಮೊಹಮ್ಮದ್ ಅಮೀರ್
  • News18
  • Last Updated: July 28, 2019, 4:06 PM IST
  • Share this:
ಬೆಂಗಳೂರು (ಜು. 28): ಶುಕ್ರವಾರವಷ್ಟೆ ಅಂತರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತಿ ಪಡೆದ ಪಾಕಿಸ್ತಾನ ಪ್ರಮುಖ ಬೌಲರ್ ಮೊಹಮ್ಮದ್ ಅಮೀರ್ ಬ್ರಿಟನ್ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಆಡುವತ್ತ ಚಿತ್ತ ನೆಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇವಲ 27 ವರ್ಷಕ್ಕೆ ಟೆಸ್ಟ್​ ಕ್ರಿಕೆಟ್​ಗೆ ಅಮೀರ್ ನಿವೃತ್ತಿ ನೀಡಿದ ಬಗ್ಗೆ ಶೋಯೆಬ್ ಅಖ್ತರ್ ಸೇರಿ ಅನೇಕ ಪಾಕ್ ಮಾಜಿ ಆಟಗಾರರು ಬೇಸರ ವ್ಯಕ್ತ ಪಡಿಸಿದ್ದರು. ಇದೀಗ ಬ್ರಿಟನ್ ಪೌರತ್ವಕ್ಕೆ ಅರ್ಜಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೊಹ್ಲಿ-ರೋಹಿತ್ ಜಗಳದಲ್ಲಿ ಮತ್ತೊಂದು ಟ್ವಿಸ್ಟ್​; ಇನ್ನೂ ನಿಲ್ಲದ ನಾಯಕ-ಉಪ ನಾಯಕನ ಶೀತಲ ಸಮರ

ಅಮೀರ್ ಈಗಾಗಲೇ ಬ್ರಿಟನ್ ಮೂಲದ ನರ್ಗಿಸ್ ಮಲಿಕ್ ಎಂಬವರನ್ನು 2016ರಲ್ಲಿ ವಿವಾಹವಾಗಿದ್ದರು. ಹೀಗಾಗಿ ಇವರಿಗೆ ಅಲ್ಲಿ ನೆಲೆಸಲು ಕೇವಲ 30 ತಿಂಗಳ ವೀಸಾ ಪಡೆದಿದ್ದಾರೆ. ಇದೀಗ ಸಂಪೂರ್ಣವಾಗಿ ಇಂಗ್ಲೆಂಡ್​ನಲ್ಲೇ ನೆಲೆಸಲು, ಅಲ್ಲಿನ ಪೌರತ್ವ ಪಡೆಯಲು ಮುಂದಾಗಿದ್ದಾರೆ.

ಇದರ ಬೆನ್ನಲ್ಲೆ ಅಮೀರ್ ಐಪಿಎಲ್ ಆಡುವ ಇರಾದೆ ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದೆ. 2008 ರಲ್ಲಿ ಮುಂಬೈ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನ ಆಟಗಾರರು ಐಪಿಎಲ್​ನಲ್ಲಿ ಆಡದಂತೆ ನಿರ್ಬಂಧ ಹೇಳಲಾಗಿತ್ತು. ಅಲ್ಲಿಂದ ಯಾವೊಬ್ಬ ಪಾಕಿಸ್ತಾನ ದೇಶದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ.

First published:July 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ