T20 World Cup- ಸಿಎಸ್​ಕೆ ಜೊತೆ ಆಡಿದ್ದಕ್ಕೆ ಇದೆಲ್ಲಾ ಸಾಧ್ಯವಾಯಿತು: ಕೃತಜ್ಞತೆ ಸಲ್ಲಿಸಿದ ಮೊಯೀನ್ ಅಲಿ

T20 World Cup, England vs West Indies- Player of the match Moeen Ali: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾದ ಮೊಯೀನ್ ಅಲಿ, ತಮ್ಮ ಉತ್ತಮ ಪ್ರದರ್ಶನಕ್ಕೆ ಸಿಎಸ್​ಕೆಯಲ್ಲಿನ ಅನುಭವ ಕಾರಣ ಎಂದಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡ

ಇಂಗ್ಲೆಂಡ್ ಕ್ರಿಕೆಟ್ ತಂಡ

  • Share this:
    ದುಬೈ, ಅ. 23: ಇಂಗ್ಲೆಂಡ್ ತಂಡದ ಆಲ್​ರೌಂಡರ್ ಮೊಯೀನ್ ಅಲಿ ಇಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿ ಎನಿಸಿದರು. ವೆಸ್ಟ್ ಇಂಡೀಸ್ ತಂಡ 55 ರನ್​ಗೆ ಆಲೌಟ್ ಆಗಲು ಪ್ರಮುಖ ಕಾರಣರಲ್ಲಿ ಮೊಯೀನ್ ಅಲಿ ಕೂಡ ಒಬ್ಬರು. ಈ ಪಂದ್ಯದಲ್ಲಿ ಮೊಯೀನ್ ಅಲಿ 27 ರನ್​ಗೆ 2 ವಿಕೆಟ್ ಪಡದರು. ಅದಿಲ್ ರಷೀದ್ 2 ರನ್​ಗೆ 4 ವಿಕೆಟ್ ಪಡೆದರೂ ಪಂದ್ಯಶ್ರೇಷ್ಠ ಗೌರವ ಮೊಯೀನ್ ಅಲಿಗೆ ಸಿಕ್ಕಿದೆ. ಅದಕ್ಕೆ ಕಾರಣವೂ ಇದೆ. ಮೊಯೀನ್ ಅಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್​ನ ಆರಂಭಿಕ ಕುಸಿತಕ್ಕೆ ಗುಂಡಿನ ತೋಡಿದರು. ಮೊದಲ ಮೂರು ವಿಕೆಟ್ ಬೀಳಲು ಅಲಿಯೇ ಕಾರಣ. ಲೆಂಡಲ್ ಸಿಮನ್ಸ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರನ್ನ ಅಲಿ ಔಟ್ ಮಾಡಿದರು. ಎವಿನ್ ಲೆವಿಸ್ ಅವರು ನೀಡಿದ ಕಷ್ಟಕರ ಕ್ಯಾಚನ್ನ ಅಲಿ ಹಿಡಿದರು. ಈ ಮೂರು ವಿಕೆಟ್​ಗಳು ವೆಸ್ಟ್ ಇಂಡೀಸ್​ನ ಇಡೀ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು. ಅದೂ ಅವರು ಬೌಲಿಂಗ್ ಮಾಡಿದ್ದು ಪವರ್ ಪ್ಲೇ ಸಂದರ್ಭದಲ್ಲಿ. ಹೀಗಾಗಿ ಪಂದ್ಯ ಶ್ರೇಷ್ಠ ಗೌರವ ಮೊಯೀನ್ ಅವರಿಗೆ ಸಿಕ್ಕಿತು.

    ಸಿಎಸ್​ಕೆಗೆ ಕೃತಜ್ಞತೆ: ಪಂದ್ಯದ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೊಯೀನ್ ಅಲಿ, ತಮ್ಮ ಈ ಯಶಸ್ಸಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಸಿಎಸ್​ಕೆ ತಂಡದಲ್ಲಿ ನನ್ನ ಪಾತ್ರ ಬಹಳ ಮುಖ್ಯವಾಗಿತ್ತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರರಲ್ಲಿ ನಾನು ಯಾವಾಗಲು ತೊಡಗಿಸಿಕೊಂಡಿರುವಂತೆ ತೋರುತ್ತಿತ್ತು. ವಿಶ್ವಕಪ್​ಗೆ ಸಿದ್ಧಗೊಳ್ಳಲು ಅದು ಅತಿ ಸೂಕ್ತ ವೇದಿಕೆಯಾಗಿತ್ತು ಎಂದು ಮೊಯೀನ್ ಅಲಿ ಅಭಿಪ್ರಾಯಪಟ್ಟರು.

    ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಲವೇ ಆಟಗಾರರಲ್ಲಿ ಮೊಯೀನ್ ಅಲಿ ಅವರೂ ಒಬ್ಬರು. ಸಾಧಾರಣ ಸ್ಕೋರ್ ಪೇರಿಸುತ್ತಿದ್ದರೂ ತಮ್ಮ ಬೌಲಿಂಗ್ ಮೂಲಕ ಸಿಎಸ್​ಕೆ ಗೆಲುವಿನಲ್ಲಿ ಮೊಯೀನ್ ಕೊಡುಗೆ ಬಹಳ ಹೆಚ್ಚಾಗಿಯೆ ಇರುತ್ತಿತ್ತು.

    ಲೆವಿಸ್ ಕ್ಯಾಚ್ ಹಿಡಿದದ್ದು ಆತ್ಮವಿಶವಾಸ ಹೆಚ್ಚಿಸಿತು:

    ಇನ್ನು, ಇವತ್ತಿನ ಈ ಪಂದ್ಯದಲ್ಲಿ ಎವಿನ್ ಲೆವಿಸ್ ಕೊಟ್ಟ ಕ್ಯಾಚನ್ನು ತಾನು ಹಿಡಿದದ್ದನ್ನ ಸ್ಮರಿಸಿದ ಮೊಯೀನ್ ಅಲಿ, ಇಂಥ ಕ್ಯಾಚ್ ಹಿಡಿದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆ ಕ್ಯಾಚ್ ಹಿಡಿದ ಮೇಲೆ ನನ್ನ ತುಮುಲ ಕಡಿಮೆ ಆಯಿತು ಎಂದು ಹೇಳಿದರು.

    ವೆಸ್ಟ್ ಇಂಡೀಸ್ ತಂಡದ ಅಗ್ರಕ್ರಮಾಂಕದಲ್ಲಿ ಎಡಗೈ ಬ್ಯಾಟರ್ಸ್ ಹೆಚ್ಚಿದ್ದಾರೆ. ಹೀಗಾಗಿ, ನಾನು ಬೇಗನೇ ಬೌಲಿಂಗ್ ಮಾಡಬೇಕಾಗಬಹುದು ಎಂದು ಎಣಿಸಿದ್ದೆ. ಹಾಗೆಯಾ ಅಯಿತು ಎಂದವರು ತಿಳಿಸಿದರು.

    ಮಾರ್ಗನ್ ಮೆಚ್ಚುಗೆ: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅವರೂ ಕೂಡ ಮೊಯೀನ್ ಅಲಿ ಆಟವನ್ನು ಶ್ಲಾಘಿಸಿದರು. ಮೊಯೀನ್ ಅಲಿ ಅವರು ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಅಂದಾಜು ಮಾಡಿದ್ದರು. ಐಪಿಎಲ್​ನಲ್ಲಿ ದೊರೆತ ಯಶಸ್ಸಿನಿಂದಾಗಿ ಇಂದು ಸಿಕ್ಕ ಅವಕಾಶವನ್ನು ಮೊಯೀನ್ ಚೆನ್ನಾಗಿ ಬಳಸಿಕೊಂಡಿದ್ಧಾರೆ ಎಂದರು.

    ಇದನ್ನೂ ಓದಿ: England beat WI- ಮೊಯೀನ್, ರಷೀದ್ ಅಮೋಘ ಆಟ; ವಿಂಡೀಸ್ ವಿರುದ್ಧ ಇಂಗ್ಲೆಂಡ್ ಜಯಭೇರಿ

    ವಿಂಡೀಸ್ ಕ್ಯಾಪ್ಟನ್ ಹೇಳಿಕೆ: ಈ ಪಂದ್ಯದಲ್ಲಿ ಸೋತ ವೆಸ್ಟ್ ಇಂಡೀಸ್ ತಂಡದ ಕ್ಯಾಪ್ಟನ್ ಕೀರಾನ್ ಪೊಲಾರ್ಡ್, ಮುಂದಿನ ಪಂದ್ಯಗಳಲ್ಲಿ ತಮ್ಮ ತಂಡ ಪುಟಿದೆದ್ದು ಆಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಸೋಲು ಸ್ವೀಕಾರರ್ಹವಲ್ಲ ಎಂಬುದನ್ನು ಒಪ್ಪುತ್ತೇನೆ. ಆದರೆ, ಇಂಥ ಫಲಿತಾಂಶ ಕೆಲವೊಮ್ಮೆ ಬಂದುಬಿಡುತ್ತದೆ. ನಮ್ಮ ಗೆಲುವಿನ ಲಯ ಶೀಘ್ರದಲ್ಲೇ ಕಂಡುಕೊಳ್ಳುತ್ತೇವೆ. ನಮ್ಮ ಮೂರು ಪಂದ್ಯಗಳಲ್ಲಿ ನಾವು ಸರಿಯಾಗಿ ಬ್ಯಾಟಿಂಗ್ ಮಾಡಿಲ್ಲ. ಆಟಗಾರರು ತಮ್ಮ ಶಾಟ್​ಗಳನ್ನ ಪ್ರಯತ್ನಿಸಿ ವಿಫಲರಾಗಿದ್ದಾರೆ. ಇದನ್ನ ಮರೆತು ನಾವು ಮುನ್ನಡೆಯಬೇಕು ಎಂದು ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್ ಕೂಡ ಆಗಿರುವ ಪೊಲಾರ್ಡ್ ಹೇಳಿದರು.
    Published by:Vijayasarthy SN
    First published: