HOME » NEWS » Sports » CRICKET MOEEN ALI DISMISSES VIRAT KOHLI FOR 9TH TIME ZP

Virat Kohli: ಕೊಹ್ಲಿಯನ್ನು ಕಾಡುತ್ತಿರುವ ಮೊಯೀನ್ ಅಲಿ..!

ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರುಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅಗ್ರಸ್ಥಾನದಲ್ಲಿದ್ದಾರೆ. ಸೌಥಿ ಕೊಹ್ಲಿಯನ್ನು 10 ಬಾರಿ ಔಟ್ ಮಾಡಿದ್ದಾರೆ.

news18-kannada
Updated:March 28, 2021, 9:56 PM IST
Virat Kohli: ಕೊಹ್ಲಿಯನ್ನು ಕಾಡುತ್ತಿರುವ ಮೊಯೀನ್ ಅಲಿ..!
ali-kohli
  • Share this:
ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಮೊಯೀನ್ ಅಲಿ ಎಸೆದ ಚೆಂಡು ಅದ್ಭುತವಾಗಿ ಸ್ಪಿನ್ ಆಗಿ ಲೆಗ್ ಸ್ಟಂಪ್​ಗೆ ಬಡಿಯಿತು. ಈ ರೀತಿಯಾಗಿ ಬೌಲ್ಡ್ ಆಗಿದ್ದನ್ನು ಕಂಡು ಖುದ್ದು ಕೊಹ್ಲಿ ಕೂಡ ದಂಗಾಗಿ ನಿಂತಿದ್ದರು. ಇದರೊಂದಿಗೆ ವಿರಾಟ್ ಕೊಹ್ಲಿಯನ್ನು 9ನೇ ಬಾರಿ ಔಟ್ ಮಾಡಿದ ಕೀರ್ತಿಗೆ ಮೊಯೀನ್ ಅಲಿ ಪಾತ್ರರಾದರು.

ಈ ಹಿಂದೆ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊಯೀನ್ ಅಲಿ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿಯನ್ನು ಸೊನ್ನೆ ಸುತ್ತಿಸುವಲ್ಲಿ ಯಶಸ್ವಿಯಾದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಕೊಹ್ಲಿ ಮುಂದೆ ತಮ್ಮ ಸ್ಪಿನ್ ಮೋಡಿಯನ್ನು ಮುಂದುವರೆಸಿರುವ ಅಲಿ, ಟೀಮ್ ಇಂಡಿಯಾ ನಾಯಕನನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರುಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅಗ್ರಸ್ಥಾನದಲ್ಲಿದ್ದಾರೆ. ಸೌಥಿ ಕೊಹ್ಲಿಯನ್ನು 10 ಬಾರಿ ಔಟ್ ಮಾಡಿದ್ದರು. ನಂತರದ ಸ್ಥಾನದಲ್ಲಿರುವುದು ಇಬ್ಬರು ಇಂಗ್ಲೆಂಡ್​ ಸ್ಪಿನ್ನರ್​ಗಳು ಎಂಬುದು ವಿಶೇಷ.

ಹೌದು, 2ನೇ ಸ್ಥಾನದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದೀಲ್ ರಶೀದ್ ಹಾಗೂ ಮೊಯೀನ್ ಅಲಿ ಇದ್ದು, ಇವರು 9 ಬಾರಿ ಕೊಹ್ಲಿಯನ್ನು ಬಲಿ ಪಡೆದಿದ್ದಾರೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ಮಾಜಿ ಸ್ಪಿನ್ನರ್​ ಗೇಮ್ ಸ್ವಾನ್ ಹಾಗೂ ವೇಗಿ ಜೇಮ್ಸ್ ಅ್ಯಂಡರ್ಸನ್ ಇದ್ದು, ಇವರುಗಳು 8 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ.
Published by: zahir
First published: March 28, 2021, 9:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories