ಪಾಕ್ ತಂಡಕ್ಕೆ ನೂತನ ಕೋಚ್ ಆಗಿ ಮಿಸ್ಬಾ ಆಯ್ಕೆ, ವಕಾರ್ ಯೂನಿಸ್ ಬೌಲಿಂಗ್ ಕೋಚ್!

ಮಿಸ್ಬಾ ಉಲ್ ಹಕ್ ಒಟ್ಟು 75 ಟೆಸ್ಟ್, 162 ಏಕದಿನ ಹಾಗೂ 39 ಟಿ-20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

Vinay Bhat | news18-kannada
Updated:September 5, 2019, 10:37 AM IST
ಪಾಕ್ ತಂಡಕ್ಕೆ ನೂತನ ಕೋಚ್ ಆಗಿ ಮಿಸ್ಬಾ ಆಯ್ಕೆ, ವಕಾರ್ ಯೂನಿಸ್ ಬೌಲಿಂಗ್ ಕೋಚ್!
ಮಿಸ್ಬಾ ಉಲ್ ಹಖ್
Vinay Bhat | news18-kannada
Updated: September 5, 2019, 10:37 AM IST
ಬೆಂಗಳೂರು (ಸೆ. 04): ಅಂದುಕೊಂಡಂತೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನೂತನ ತರಬೇತುದಾರನಾಗಿ ಮಾಜಿ ನಾಯಕ ಮಿಸ್ಬಾ ಉಲ್ ಹಖ್​ರನ್ನು ಪಿಸಿಬಿ ಆಯ್ಕೆ ಮಾಡಿದೆ. ಮುಖ್ಯ ಕೋಚ್ ಜೊತೆಗೆ ಮಿಸ್ಬಾ ಅವರಿಗೆ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಪಟ್ಟವನ್ನು ನೀಡಿದೆ.

ಮುಖ್ಯ ಕೋಚ್ ಜೊತೆಗೆ ವಕಾರ್ ಯೂನಿಸ್ ಬೌಲಿಂಗ್ ಕೋಚ್ ಆಗಿ ಆಯ್ಕೆ ಆಗಿದ್ದಾರೆ. ವಕಾರ್ ಈ ಹಿಂದೆ ತಂಡದ ಪ್ರಧಾನ ಕೋಚ್ ಜೊತೆಗೆ ಬೌಲಿಂಗ್ ಕೋಚ್ ಆಗಿದ್ದರು. ಮೂರು ವರ್ಷದ ಅವಧಿಗೆ ಮಿಸ್ಬಾ ಪಾಕಿಸ್ತಾನ ತಂಡದ ಹೆಡ್ ಕೋಚ್ ಹಾಗೂ ವಕಾರ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

45 ವರ್ಷ ಪ್ರಾಯದ ಮಿಸ್ಬಾ ಉಲ್ ಹಖ್ 2017 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡಿದ್ದರು. ಕೋಚ್ ಆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಿಸ್ಬಾ, 'ಆಯ್ಕೆ ಸಮಿತಿ ಮತ್ತು ಕೋಚ್ ಆಗಿ ಕಾರ್ಯನಿರ್ವಹಿಸಲು ತುಂಬಾ ಉತ್ಸುಕನಾಗಿದ್ದೇನೆ. ನನ್ನ ಮೇಲೆ ಸಾಕಷ್ಟು ಭರವಸೆಯಿದೆ. ಎರಡೂ ಹುದ್ದೆ ಹೆಗಲ ಮೇಲಿರುವುದರಿಂದ ಹೆಚ್ಚಿನ ಜವಾಬ್ದಾರಿಯಿದ್ದು, ಎಲ್ಲ ಸವಾಲುಗಳಿಗೂ ಸಿದ್ಧವಿದ್ದೇನೆ' ಎಂದು ಮಿಸ್ಬಾ ಹೇಳಿದ್ದಾರೆ.

ಕೊಹ್ಲಿ, ಧೋನಿ ಅಲ್ಲ!: ಈ ಆಟಗಾರನನ್ನು ಪಡೆಯಲು ಭಾರತ ಪುಣ್ಯ ಮಾಡಿರಬೇಕು ಎಂದ ಪಠಾಣ್

 ಮಿಸ್ಬಾ ಉಲ್ ಹಕ್ ಒಟ್ಟು 75 ಟೆಸ್ಟ್, 162 ಏಕದಿನ ಹಾಗೂ 39 ಟಿ-20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

2019 ಏಕದಿನ ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಪಾಕಿಸ್ತಾನ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಇದಾದ ಬಳಿಕ ಪಾಕಿಸ್ತಾನ ತಂಡದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಂತೆ ನೂತನ ಕೋಚ್ ಆಯ್ಕೆ ಮಾಡಲಾಗಿದ್ದು, ಪಾಕ್ ಮುಂದಿನ ದಿನಗಳಲ್ಲಿ ಯಾವರೀತಿ ಪ್ರದರ್ಶನ ನೀಡಲಿದೆ ಎಂಬುದು ಕಾದುನೋಡಬೇಕಿದೆ.

First published:September 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...