ಟೀಂ ಇಂಡಿಯಾ ಕೋಚ್ ಹುದ್ದೆಗೆ ಆರು ಮಂದಿ ಫೈನಲ್; ಯಾರೆಲ್ಲಾ ಗೊತ್ತಾ?

ಆ. 16 ರಂದು ಈ ಆರು ಜನರ ಸಂದರ್ಶನ ನಡೆಯಲಿದ್ದು, ಒಬ್ಬರು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗಲಿದ್ದಾರೆ.

Vinay Bhat | news18
Updated:August 13, 2019, 9:37 AM IST
ಟೀಂ ಇಂಡಿಯಾ ಕೋಚ್ ಹುದ್ದೆಗೆ ಆರು ಮಂದಿ ಫೈನಲ್; ಯಾರೆಲ್ಲಾ ಗೊತ್ತಾ?
ಟೀಂ ಇಂಡಿಯಾ
  • News18
  • Last Updated: August 13, 2019, 9:37 AM IST
  • Share this:
ಬೆಂಗಳೂರು (. 13): ಟೀಂ ಇಂಡಿಯಾಕ್ಕೆ ನೂತನ ಪ್ರಧಾನ ಕೋಚ್ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರತವಾಗಿದ್ದು, ಕಪೀಲ್ ದೇವ್ ನೇತೃತ್ವದಲ್ಲಿ ಮುಖ್ಯ ಕೋಚ್ ಹುದ್ದೆಗೆ 6 ಜನರ ಹೆಸರನ್ನು ಶಾರ್ಟ್​ಲಿಸ್ಟ್ ಮಾಡಿದೆ.

ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾದ ಕೋಚ್ ಬದಲಾಗಲಿದ್ದು, ಈ ಹಿಂದೆ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಸದ್ಯ ಇದರಲ್ಲಿ ಆರು ಜನರನ್ನು ಫೈನಲ್ ಮಾಡಲಾಗಿದ್ದು, ಆಗಸ್ಟ್​​ 16ರಂದು ಇವರ ಸಂದರ್ಶನ ನಡೆಯಲಿದೆ.

ಈಗಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಅವರೇ ಭಾರತ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ ಎಂದು ಹೇಳಿದ್ದರು. ಹೀಗಾಗಿ ರವಿಶಾಸ್ತ್ರಿ ಕೂಡ ರೇಸ್​ನಲ್ಲಿದ್ದಾರೆ.

ಏಕದಿನದಲ್ಲಿ ಕೊಹ್ಲಿ ಒಟ್ಟು ಎಷ್ಟು ಶತಕ ಸಿಡಿಸಬಹುದು?; ಮಾಜಿ ಆಟಗಾರ ಕೊಟ್ಟ ಉತ್ತರ ನೀವೆ ಕೇಳಿ

ಇವರ ಜೊತೆಗೆ ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​​ ಮೈಕ್​ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಹಾಗೂ ಶ್ರೀಲಂಕಾ ಕೋಚ್​ ಟಾಮ್​ ಮೊಡಿ, ಆಫ್ಘಾನಿಸ್ತಾನದ ಕೋಚ್​​ ಸಿಮನ್ಸ್​​, ಟೀಂ ಇಂಡಿಯಾ ಮಾಜಿ ಮ್ಯಾನೇಜರ್​ ಲಾಲ್​ಚಂದ್​ ರಜಪೂತ್​, ರಾಬಿನ್​​ ಸಿಂಗ್​​ ಹೆಸರುಗಳು ಪಟ್ಟಿಯಲ್ಲಿವೆ.

ಆ. 16 ರಂದು ಇವರ ಸಂದರ್ಶನ ನಡೆಯಲಿದ್ದು, ಒಬ್ಬರು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗಲಿದ್ದಾರೆ.

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...