Dravid Alert- ದ್ರಾವಿಡ್ ಬರ್ತಾರೆ, ಹುಷಾರ್…. ಇತರ ಕ್ರಿಕೆಟ್ ತಂಡಗಳಿಗೆ ಮಾಜಿ ಕ್ರಿಕೆಟಿಗ ವಾನ್ ಎಚ್ಚರಿಕೆ

Michael Vaughan on Rahul Dravid- ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆದರೆ ವಿಶ್ವದ ಇತರೆ ಕ್ರಿಕೆಟ್ ತಂಡಗಳು ಹುಷಾರ್ ಆಗಿ ಇರಬೇಕು ಎಂದು ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಮೈಕೇಲ್ ವಾನ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

 • Share this:
  ನವದೆಹಲಿ, ಅ. 16: ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತಗೊಂಡಿದೆ. ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹೌದಾದರೆ ರಾಹುಲ್ ದ್ರಾವಿಡ್ ಅವರು ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಜವಾಬ್ದಾರಿ ಸ್ವೀಕರಿಸಲಿದ್ಧಾರೆ. ಎರಡು ವರ್ಷದ ಅವಧಿಗೆ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಲಿದೆ. ವಿಶ್ವ ಕ್ರಿಕೆಟ್​ನ ಇತರ ದೇಶಗಳು ಈ ಬೆಳವಣಿಗೆಯನ್ನ ಕುತೂಹಲದಿಂದ ವೀಕ್ಷಿಸುತ್ತಿವೆ. ರಾಹುಲ್ ಕೋಚ್ ಆಗುವ ಸುದ್ದಿ ಬಗ್ಗೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಮೈಕೇಲ್ ವಾನ್ ಅವರು ನೀಡಿರುವ ಪ್ರತಿಕ್ರಿಯೆ ಇದಕ್ಕೆ ಸಾಕ್ಷಿ.

  ವಿಶ್ವದ ಇತರ ಕ್ರಿಕೆಟ್ ದೇಶಗಳು ಹುಷಾರ್ ಆಗಿ ಇರಿ ಎಂದು ಮೈಕೇಲ್ ವಾನ್ ಟ್ಟಿಟ್ಟರ್​ನಲ್ಲಿ ವಾರ್ನಿಂಗ್ ಸಂದೇಶ ಕೊಟ್ಟಿದ್ದಾರೆ. “ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಮುಂದಿನ ಕೋಚ್ ಆಗುವುದು ನಿಜವೇ ಆದರೆ ವಿಶ್ವದ ಇತರರು ಹುಷಾರಾಗಿರುವುದು ಒಳ್ಳೆಯದು ಎಂಬುದು ನನ್ನ ಭಾವನೆ” ಎಂದು ವಾನ್ ಟ್ವೀಟ್ ಮಾಡಿದ್ದಾರೆ.

  ರಾಹುಲ್ ದ್ರಾವಿಡ್ ದಿ ವಾಲ್:

  ರಾಹುಲ್ ದ್ರಾವಿಡ್ ಅವರು ಆಟಗಾರರಾಗಿ ಸಾಕಷ್ಟು ಪಂದ್ಯಗಳನ್ನ ಟೀಮ್ ಇಂಡಿಯಾಗೆ ಗೆಲ್ಲಿಸಿಕೊಟ್ಟಿದ್ದಾರೆ. ತಂಡದ ಉಳಿದ ಬ್ಯಾಟರ್ಸ್ ತರಗೆಲೆಗಳಂತೆ ಉದುರಿದರೂ ದ್ರಾವಿಡ್ ಗೋಡೆಯಂತೆ ನಿಂತು ಎದುರಾಳಿ ಬೌಲರ್​ಗಳನ್ನ ಎದುರಿಸುತ್ತಿದ್ದವರು. ದಿ ವಾಲ್ ಎಂದೇ ಖ್ಯಾತರಾದವರು. ಭಾರತ ಕಂಡ ಸರ್ವಶ್ರೇಷ್ಠ ಬ್ಯಾಟರ್ಸ್ ಪೈಕಿ ಅವರು ಪ್ರಮುಖರು. ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಬಳಿಕ ರಾಹುಲ್ ದ್ರಾವಿಡ್ ಎಳೆಯ ಪ್ರತಿಭೆಗಳನ್ನ ಹೆಕ್ಕಿ ತೆಗೆಯುವ ಕೆಲಸ ಮಾಡುತ್ತಿದ್ಧಾರೆ.

  ಕಿರಿಯರಿಗೆ ಗಾಡ್ ಫಾದರ್:

  ಕ್ರಿಕೆಟ್ ಬೆಳವಣಿಗೆಗೆ ಬಹಳ ಅಗತ್ಯ ಇರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಆಗಿ ಗುರುತರ ಜವಾಬ್ದಾರಿ ಹೊತ್ತಿದ್ದಾರೆ. ಎಳೆಯ ಪ್ರತಿಭೆಗಳು ತುಂಬಿರುವ ಕಿರಿಯರ ಟೀಮ್ ಇಂಡಿಯಾಗೆ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಭಾರತ ಎ ತಂಡಕ್ಕೂ ಕೋಚ್ ಆಗಿದ್ದಾರೆ. ರವಿಶಾಸ್ತ್ರಿ ಅನುಪಸ್ಥಿತಿಯಲ್ಲಿ ಶ್ರೀಲಂಕಾ ಪ್ರವಾಸ ಹೋದ ಭಾರತ ಕ್ರಿಕೆಟ್ ತಂಡಕ್ಕೂ ಕೋಚ್ ಆಗಿ ಕೆಲಸ ಮಾಡಿದ್ದಾರೆ.

  ಇದನ್ನೂ ಓದಿ: CSK Success Secret- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಕಾರಣವಾದ ಅಂಶಗಳು

  ಈಗಿರುವ ಟೀಮ್ ಇಂಡಿಯಾದ ಬಹುತೇಕ ಯುವ ಆಟಗಾರರು ಜೂನಿಯರ್ ಕ್ರಿಕೆಟ್​ನಲ್ಲಿದ್ದಾಗ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲೇ ಬೆಳೆದವರು. ಹೀಗಾಗಿ, ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾ ಕೋಚ್ ಆದರೆ ಆಟಗಾರರ ನಿರ್ವಹಣೆ ಕಷ್ಟಕರವಾಗಲಾರದು ಎಂಬ ಭಾವನೆ ಇದೆ.

  ಪರಸ್ ಮಾಂಬ್ರೆ ಬೌಲಿಂಗ್ ಕೋಚ್:

  ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆದರೆ ಪರಸ್ ಮಾಂಬ್ರೆ ಅವರು ತಂಡದ ಬೌಲಿಂಗ್ ಕೋಚ್ ಆಗಲಿದ್ದಾರೆ. ಭರತ್ ಅರುಣ್ ಸದ್ಯ ಬೌಲಿಂಗ್ ಕೋಚ್ ಆಗಿದ್ದಾರೆ. ಅವರ ಸ್ಥಾನಕ್ಕೆ ಪರಸ್ ಮಾಂಬ್ರೆ ಬರುವ ಸಾಧ್ಯತೆ ಇದೆ. ಜೂನಿಯರ್ ಕ್ರಿಕೆಟ್ ತಂಡಕ್ಕೆ ದ್ರಾವಿಡ್ ಕೋಚ್ ಆಗಿದ್ದಾಗ ಪರಸ್ ಮಾಂಬ್ರೆ ಅವರೇ ಬೌಲಿಂಗ್ ಕೋಚ್ ಆಗಿದ್ದರು. ಬೌಲರ್ ಆಗಿದ್ದ ಪರಸ್ ಮಾಂಬ್ರೆ ಈ ಹಿಂದೆ ಟೀಮ್ ಇಂಡಿಯಾ ಆಟಗಾರರಾಗಿ ಹಲವು ಪಂದ್ಯಗಳನ್ನ ಆಡಿದ್ದಾರೆ.

  ವಿಕ್ರಂ ರಾಥೋಡ್ ಬ್ಯಾಟಿಂಗ್ ಕೋಚ್:

  ಟೀಮ್ ಇಂಡಿಯಾದ ಈಗಿನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಭಾರತ ತಂಡದ ಕೋಚ್ ಆಗಲು ಆಸಕ್ತಿ ತೋರಿರುವ ಹಲವರಲ್ಲಿ ವಿಕ್ರಮ್ ಅವರೂ ಒಬ್ಬರು. ಈಗ ರಾಹುಲ್ ದ್ರಾವಿಡ್ ಕೋಚ್ ಆದರೆ ಇವರು ಬ್ಯಾಟಿಂಗ್ ಕೋಚ್ ಸ್ಥಾನದಲ್ಲೇ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಈಗಿನ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು ಮುಂದುವರಿಯುತ್ತಾರಾ ಎಂಬುದು ಗೊತ್ತಾಗಿಲ್ಲ.
  Published by:Vijayasarthy SN
  First published: