HOME » NEWS » Sports » CRICKET MICHAEL CLARKE WARNS INDIA WILL GET SMOKED 4 0 IN ABSENCE OF VIRAT KOHLI ZP

Virat Kohli: ವಿರಾಟ್ ಕೊಹ್ಲಿ ಮಿಂಚದಿದ್ರೆ ಟೀಮ್ ಇಂಡಿಯಾ 4-0 ಅಂತರದಿಂದ ಸೋಲಲಿದೆ..!

ಡಿಸೆಂಬರ್ 17 ರಿಂದ ಶುರುವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಪಿತೃತ್ವದ ರಜೆ ತೆಗೆದುಕೊಂಡಿದ್ದು, ಹೀಗಾಗಿ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

news18-kannada
Updated:November 24, 2020, 4:47 PM IST
Virat Kohli: ವಿರಾಟ್ ಕೊಹ್ಲಿ ಮಿಂಚದಿದ್ರೆ ಟೀಮ್ ಇಂಡಿಯಾ 4-0 ಅಂತರದಿಂದ ಸೋಲಲಿದೆ..!
Virat Kohli
  • Share this:
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಸರಣಿಯ ದಿನಗಣನೆ ಶುರುವಾಗಿದೆ. ಈಗಾಗಲೇ ಯುವ ಪಡೆಯೊಂದಿಗೆ ಕಾಂಗರೂ ನಾಡಿನಲ್ಲಿ ಬೀಡು ಬಿಟ್ಟಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಮೊದಲ ಏಕದಿನ ಪಂದ್ಯವನ್ನು ನವೆಂಬರ್ 27 ರಂದು ಆಡಲಿದೆ. ಏಕದಿನ ಸರಣಿ ಬಳಿಕ 3 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಪ್ರತಿಷ್ಠಿತ 4 ಪಂದ್ಯಗಳ ಗವಾಸ್ಕರ್-ಬಾರ್ಡರ್ ಟೆಸ್ಟ್ ಸರಣಿ ಶುರುವಾಗಲಿದೆ. ಈಗಾಗಲೇ ಕ್ರಿಕೆಟ್ ಅಂಗಳದ ಮದಗಜಗಳ ಕಾಳಗವನ್ನು ವಿಶ್ವದ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಆದರೆ ಪ್ರತಿಷ್ಠೆಯ ಕಣವಾಗಿದ್ದ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ.

ಡಿಸೆಂಬರ್ 17 ರಿಂದ ಶುರುವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಪಿತೃತ್ವದ ರಜೆ ತೆಗೆದುಕೊಂಡಿದ್ದು, ಹೀಗಾಗಿ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆದರೆ ಈ ಅನುಪಸ್ಥಿತಿಯೇ ಟೀಮ್ ಇಂಡಿಯಾಗೆ ಮುಳುವಾಗಲಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್​ ಎಚ್ಚರಿಸಿದ್ದಾರೆ.

ವಿರಾಟ್ ಕೊಹ್ಲಿ ತವರಿಗೆ ಮರಳುವ ಮುನ್ನ ಆಸೀಸ್ ನೆಲದಲ್ಲಿ ಭಾರತ ತಂಡವನ್ನು ಜಯದ ಲಯದಲ್ಲಿರಿಸಬೇಕು. ಏಕೆಂದರೆ ಆಟಗಾರದಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕಾಗುತ್ತದೆ. ಹೀಗಾಗಿ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಕೊಹ್ಲಿ ನಾಯಕನ ಆಟವಾಡುವ ಮೂಲಕ ತಂಡಕ್ಕೆ ಹುರುಪು ತುಂಬಬೇಕು. ಹೀಗಾದ್ರೆ ಮಾತ್ರ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದು ಕ್ಲಾರ್ಕ್ ಹೇಳಿದ್ದಾರೆ.

ಒಂದು ವೇಳೆ ಟೀಮ್ ಇಂಡಿಯಾ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸೋತರೆ ಟೆಸ್ಟ್​ ಸರಣಿಯಲ್ಲಿ ಒತ್ತಡಕ್ಕೆ ಸಿಲುಕಲಿದೆ. ಇಂತಹ ಒತ್ತಡದಲ್ಲಿ ಟೀಮ್ ಇಂಡಿಯಾವನ್ನು ಆಸ್ಟ್ರೇಲಿಯಾ 4-0 ಅಂತರದಿಂದ ವೈಟ್​ವಾಶ್ ಮಾಡಲಿದೆ ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಿದ್ರೆ ಮೊದಲ ಟೆಸ್ಟ್​ ಪಂದ್ಯದಲ್ಲಿ ನಾಯಕ ಕೊಹ್ಲಿ ಅದ್ಭುತ ಪ್ರದರ್ಶನ ನೀಡಬೇಕು. ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರ, ಕೊಹ್ಲಿ ಅನುಪಸ್ಥಿತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಆಸೀಸ್ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
Published by: zahir
First published: November 24, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading