MI vs RR: ಮುಂಬೈ ಇಂಡಿಯನ್ಸ್​ಗೆ ಸ್ಪರ್ಧಾತ್ಮಕ ಸವಾಲು ನೀಡಿದ ರಾಜಸ್ಥಾನ್ ರಾಯಲ್ಸ್​

ಕೊನೆಯ ನಾಲ್ಕು ಓವರ್​ನಲ್ಲಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದ ರಾಜಸ್ಥಾನ್​ ರಾಯಲ್ಸ್​ಗೆ ಆಘಾತ ನೀಡುವಲ್ಲಿ ಮುಂಬೈ ಬೌಲರುಗಳು ಯಶಸ್ವಿಯಾದರು. 27 ಎಸೆತಗಳಲ್ಲಿ 42 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್​ರನ್ನು ಕ್ಲೀನ್ ಬೌಲ್ಡ್ ಮಾಡಿ ಟ್ರೆಂಟ್ ಬೌಲ್ಟ್ ಮುಂಬೈಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.

RR

RR

 • Share this:
  ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 24ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್​ ತಂಡ ಮುಂಬೈ ಇಂಡಿಯನ್ಸ್​ಗೆ 172 ರನ್​ಗಳ ಗುರಿ ನೀಡಿದೆ. ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು.

  ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್​ ಆರ್​ಆರ್​ಗೆ ಭರ್ಜರಿ ಆರಂಭ ಒದಗಿಸಿದ್ದರು. ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 47ಕ್ಕೇರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 66 ರನ್​ಗಳ ಜೊತೆಯಾಟವಾಡಿದರು. ಈ ವೇಳೆ 32 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದ್ದ ಜೋಸ್ ಬಟ್ಲರ್ (41) ರಾಹುಲ್ ಚಹರ್ ಎಸೆತದಲ್ಲಿ ಸ್ಟಂಪ್ ಔಟ್ ಆದರು.

  ಈ ವೇಳೆ ಜೈಸ್ವಾಲ್ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ 10ನೇ ಓವರ್​ ವೇಳೆಗೆ ತಂಡದ ಮೊತ್ತ 91 ಕ್ಕೇರಿತು. ಈ ವೇಳೆ ರಾಹುಲ್ ಚಹರ್ ಎಸೆದ ಗೂಗ್ಲಿಗೆ ಜೈಸ್ವಾಲ್​ (32) ಸುಲಭ ಕ್ಯಾಚ್ ನೀಡಿದರು. ಈ ಹಂತದಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಸ್ಯಾಮ್ಸನ್-ಶಿವಂ ದುಬೆ ಅರ್ಧಶತಕಗಳ ಜೊತೆಯಾಟವಾಡಿದರು. ಅಲ್ಲದೆ 16 ಓವರ್​ನಲ್ಲಿ ತಂಡದ ಮೊತ್ತವನ್ನು 140 ಕ್ಕೆ ತಂದು ನಿಲ್ಲಿಸಿದರು.

  ಕೊನೆಯ ನಾಲ್ಕು ಓವರ್​ನಲ್ಲಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದ ರಾಜಸ್ಥಾನ್​ ರಾಯಲ್ಸ್​ಗೆ ಆಘಾತ ನೀಡುವಲ್ಲಿ ಮುಂಬೈ ಬೌಲರುಗಳು ಯಶಸ್ವಿಯಾದರು. 27 ಎಸೆತಗಳಲ್ಲಿ 42 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್​ರನ್ನು ಕ್ಲೀನ್ ಬೌಲ್ಡ್ ಮಾಡಿ ಟ್ರೆಂಟ್ ಬೌಲ್ಟ್ ಮುಂಬೈಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಬುಮ್ರಾ ಶಿವಂ ದುಬೆ (35) ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್​ಗೆ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು.

  ಸತತ ಎರಡು ವಿಕೆಟ್ ಬಿದ್ದ ಬಳಿಕ ಹಿಡಿತ ಸಾಧಿಸಿದ ಮುಂಬೈ ಬೌಲರುಗಳು ಅಂತಿಮ ಓವರ್​ಗಳಲ್ಲಿ ಭರ್ಜರಿ ಕಂಬ್ಯಾಕ್​ ಮಾಡಿದರು. ಅದರಂತೆ 19ನೇ ಓವರ್​ನಲ್ಲಿ ಬುಮ್ರಾ ನೀಡಿದ್ದು ಕೇವಲ 4 ರನ್​ಗಳು ಮಾತ್ರ. ಕೌಲ್ಟರ್ ನೈಲ್ ಎಸೆದ ಕೊನೆಯ ಓವರ್​ನಲ್ಲಿ 12 ರನ್​ ಕಲೆಹಾಕುವ ಮೂಲಕ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತು. ಮುಂಬೈ ಪರ 4 ಓವರ್​ನಲ್ಲಿ 33 ರನ್​ ನೀಡಿ 2 ವಿಕೆಟ್ ಪಡೆದ ರಾಹುಲ್ ಚಹರ್ ಯಶಸ್ವಿ ಬೌಲರ್ ಎನಿಸಿಕೊಂಡರು.

  ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಡೇವಿಡ್ ಮಿಲ್ಲರ್, ರಾಹುಲ್ ತೆವಾಠಿಯಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕತ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್  ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ರಾಹುಲ್ ಚಾಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
  Published by:zahir
  First published: