• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • UAE ಇಂಟರ್‌ನ್ಯಾಷನಲ್‌ ಲೀಗ್ ಟಿ20 ಆರಂಭಿಕ ಪಂದ್ಯಕ್ಕೆ ಸಿದ್ಧತೆ; Mi Emirates ತಂಡದ ಆಟಗಾರರ ಘೋಷಣೆ

UAE ಇಂಟರ್‌ನ್ಯಾಷನಲ್‌ ಲೀಗ್ ಟಿ20 ಆರಂಭಿಕ ಪಂದ್ಯಕ್ಕೆ ಸಿದ್ಧತೆ; Mi Emirates ತಂಡದ ಆಟಗಾರರ ಘೋಷಣೆ

Mi ಎಮಿರೇಟ್ಸ್‌Mi ಎಮಿರೇಟ್ಸ್‌

Mi ಎಮಿರೇಟ್ಸ್‌Mi ಎಮಿರೇಟ್ಸ್‌

ಕಳೆದ ವಾರವಷ್ಟೇ ಎಂಐ ಎಮಿರೇಟ್ಸ್‌ (Mi ಎಮಿರೇಟ್ಸ್‌) ತಂಡದ ಹೆಸರು ಹಾಗೂ ಬ್ರ್ಯಾಂಡ್‌ ಲೋಗೋವನ್ನು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

 • Share this:

  ಮುಂಬೈ (ಆಗಸ್ಟ್ 12, 2022): ಯುಎಇ ಇಂಟರ್‌ನ್ಯಾಷನಲ್ ಲೀಗ್ ಟಿ20 (UAE International League) ಆರಂಭಿಕ ಪಂದ್ಯಕ್ಕೆ Mi ಎಮಿರೇಟ್ಸ್‌ (Mi Emirates) ತನ್ನ ತಂಡದ ಆಟಗಾರರನ್ನು ಘೋಷಿಸಿದೆ. ಅಬು ಧಾಬಿಯಲ್ಲಿ ತಂಡ ನೆಲೆಯೂರಲಿದ್ದು, ಮುಂಬೈ ಇಂಡಿಯನ್ಸ್‌ನ (Mumbai Indiance) ಹಾಲಿ ಮತ್ತು ಮಾಜಿ ಆಟಗಾರರು ಇರಲಿದೆ. ಕೀರನ್‌ ಪೊಲ್ಲಾರ್ಡ್‌ (kieron pollard), ಡ್ವಾಯ್ನೆ ಬ್ರಾವೋ (Dwayne Bravo, ), ನಿಕೊಲಾಸ್ ಪೂರನ್, ಟ್ರೆಂಟ್ ಬೋಲ್ಟ್‌ ತಂಡದಲ್ಲಿ ಇರಲಿದ್ದಾರೆ. ಮುಂದಿನ ದಿನಗಳಲ್ಲಿ ಯುಎಇ ಸ್ಥಳೀಯ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ.


  "ನಮ್ಮ ಒನ್ ಫ್ಯಾಮಿಲಿ ಭಾಗವಾಗಲಿರುವ 14 ಆಟಗಾರರ ಬಗ್ಗೆ ನನಗೆ ಹೆಮ್ಮೆಯಿದೆ. ಇವರು Mi ಎಮಿರೇಟ್ಸ್‌ ಅನ್ನು ಪ್ರತಿನಿಧಿಸಲಿದ್ದಾರೆ. ನಮ್ಮ ಪ್ರಮಖ ಆಟಗಾರರಾಗಿ ಕಿರನ್ ಪೊಲ್ಲಾರ್ಡ್‌ Mi ಎಮಿರೇಟ್ಸ್‌ನಲ್ಲಿ ಮುಂದುವರಿಯಲಿದ್ದಾರೆ. ಅಲ್ಲದೆ, ಡ್ವಾಯ್ನೆ ಬ್ರವೋ, ಟ್ರೆಂಟ್ ಬೋಲ್ಟ್‌ ಮತ್ತು ನಿಕೊಲಾಸ್‌ ಪೂರನ್ ಕೂಡ ಜೊತೆಯಾಗಲಿದ್ದಾರೆ. ಎಲ್ಲ ಆಟಗಾರರಿಗೂ Mi ಎಮಿರೇಟ್ಸ್‌ಗೆ ಸ್ವಾಗತ. ಅನುಭವಿ ಆಟಗಾರರು ಮತ್ತು ಯುವ ಆಟಗಾರರ ಮಧ್ಯೆ ಎಂಐ ಸಮತೋಲನ ಕಾಯ್ದುಕೊಳ್ಳಲಿದೆ. ಇದನ್ನು ನಮ್ಮ ಅಭಿಮಾನಿಗಳೂ ನಿರೀಕ್ಷಿಸುತ್ತಾರೆ" ಎಂದು ರಿಲಾಯನ್ಸ್‌ ಜಿಯೋ ಮುಖ್ಯಸ್ಥ ಆಕಾಶ್‌ ಎಂ ಅಂಬಾನಿ ಹೇಳಿದ್ದಾರೆ.


  ಆಟಗಾರರ ವಿವರಗಳು

  ಕ್ರ.ಸಂ.ಆಟಗಾರರ ಹೆಸರುರಾಷ್ಟ್ರೀಯತೆ
  1ಕೀರನ್‌ ಪೊಲ್ಲಾರ್ಡ್ವೆಸ್ಟ್‌ ಇಂಡೀಸ್‌
  2ಡ್ವಾಯ್ನೆ ಬ್ರಾವೋವೆಸ್ಟ್‌ ಇಂಡೀಸ್‌
  3ನಿಕೊಲಾಸ್‌ ಪೂರನ್ವೆಸ್ಟ್‌ ಇಂಡೀಸ್‌
  4ಟ್ರೆಂಟ್ ಬೋಲ್ಟ್‌ನ್ಯೂಜಿಲ್ಯಾಂಡ್
  5ಆಂಡ್ರೆ ಫ್ಲೆಚರ್ವೆಸ್ಟ್‌ ಇಂಡೀಸ್‌
  6ಇಮ್ರಾನ್‌ ತಾಹಿರ್ದಕ್ಷಿಣ ಆಫ್ರಿಕಾ
  7ಸಮಿತ್‌ ಪಟೇಲ್ಇಂಗ್ಲೆಂಡ್
  8ವಿಲ್‌ ಸ್ಮೀದ್ಇಂಗ್ಲೆಂಡ್
  9ಜೋರ್ಡನ್‌ ಥಾಂಪ್ಸನ್‌ಇಂಗ್ಲೆಂಡ್
  10ನಜಿಬುಲ್ಲಾ ಝದ್ರನ್ಅಫ್ಘಾನಿಸ್ತಾನ
  11ಝಹೀರ್ ಖಾನ್‌ಅಫ್ಘಾನಿಸ್ತಾನ
  12ಫಜಲ್‌ಹಖ್‌ ಫರೂಖಿಅಫ್ಘಾನಿಸ್ತಾನ
  13ಬ್ರ್ಯಾಡ್ಲೆ ವೀಲ್ಸ್ಕಾಟ್ಲೆಂಡ್
  14ಬಾಸ್‌ ಡೆ ಲೀಡೆನೆದರ್ಲೆಂಡ್ಸ್‌


  ಕಳೆದ ವಾರವಷ್ಟೇ ಎಂಐ ಎಮಿರೇಟ್ಸ್‌ (Mi ಎಮಿರೇಟ್ಸ್‌) ತಂಡದ ಹೆಸರು ಹಾಗೂ ಬ್ರ್ಯಾಂಡ್‌ ಲೋಗೋವನ್ನು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.


  ಇದನ್ನೂ ಓದಿ: Jio Independence Day special plan: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭರ್ಜರಿ ಬೆನಿಫಿಟ್ಸ್​ಗಳೊಂದಿಗೆ 750 ರೂಪಾಯಿಯ ಸ್ಪೆಷಲ್​ ಪ್ಲಾನ್​ ಪರಿಚಯಿಸಿದ ಜಿಯೋ!


  ಕ್ರಿಕೆಟ್ ದಕ್ಷಿಣ ಆಫ್ರಿಕಾದ T20 ಲೀಗ್‌ನ ಮೊದಲ ಆವೃತ್ತಿಗೆ 5 ಆಟಗಾರರನ್ನು ಸಹಿ ಮಾಡುವುದಾಗಿ MI ಕೇಪ್ ಟೌನ್ (Mi Cape Town) ಇಂದು ಪ್ರಕಟಿಸಿದೆ. 'ಎಂಐ ಕೇಪ್ ಟೌನ್'ನಲ್ಲಿ ದಕ್ಷಿಣ ಆಫ್ರಿಕಾದ (South Afric) ಆಟಗಾರ ಕಗಿಸೊ ರಬಾಡ (Kagiso Rabada) ಮತ್ತು ಒಬ್ಬ ಅನ್‌ಕ್ಯಾಪ್ಡ್ ಆಟಗಾರ ಡೆವಾಲ್ಡ್ ಬ್ರೆವಿಸ್ ಭಾಗವಹಿಸಲಿದ್ದಾರೆ. ಇದಲ್ಲದೇ ಅಫ್ಘಾನಿಸ್ತಾನದ ರಶೀದ್ ಖಾನ್ (Rashid Khan) ಮತ್ತು ಇಂಗ್ಲೆಂಡ್‌ನ ಸ್ಯಾಮ್ ಕರ್ರಾನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಸೇರಿಸಲಾಗಿದೆ. ಅಂದರೆ, 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 5 ಆಟಗಾರರನ್ನು ಸೇರಿಸಲಾಗಿದೆ.


  ಇದನ್ನೂ ಓದಿ: Independence Day 2022: ಭಾರತದ 75ನೇ ಸ್ವಾತಂತ್ರ್ಯ ದಿನ, ನಿಮಗೆ ಗೊತ್ತಿರದ ಕೆಲವು ಸಂಗತಿಗಳು ಇಲ್ಲಿವೆ ನೋಡಿ


  ಈ ಬಗ್ಗೆ ಮಾತನಾಡಿದ ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, "MI ಕೇಪ್ ಟೌನ್" ಅನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನೇರ ಆಟಗಾರರ ಸಹಿಯೊಂದಿಗೆ, ನಾವು MI ಫಿಲಾಸಫಿಯನ್ನು ನಿರ್ಮಿಸುವತ್ತ ಮೊದಲ ಹೆಜ್ಜೆ ಇಟ್ಟಿದ್ದೇವೆ - ಅದರ ಸುತ್ತಲೂ ತಂಡವನ್ನು ನಿರ್ಮಿಸಲಾಗುವುದು. ರಶೀದ್, ರಬಾಡ, ಲಿಯಾಮ್, ಸ್ಯಾಮ್ ಅವರನ್ನು # OneFamily ಗೆ ಸ್ವಾಗತಿಸಲು ನಾನು ಸಂತೋಷಪಡುತ್ತೇನೆ. ಡೆವಾಲ್ಡ್ ನಮ್ಮೊಂದಿಗೆ ಇರುತ್ತಾನೆ. MI ಕೇಪ್ ಟೌನ್, ಇತರ ಎರಡು ತಂಡಗಳಂತೆ ನಿರ್ಭೀತ ಕ್ರಿಕೆಟ್ ಆಡುತ್ತದೆ ಎಂದು ನನಗೆ ಖಾತ್ರಿಯಿದೆ.

  Published by:Harshith AS
  First published: