India vs New Zealand XI: ಪಂತ್ ಸ್ಫೋಟಕ ಆಟ; ಮಯಾಂಕ್ ಭರ್ಜರಿ ಬ್ಯಾಟಿಂಗ್; ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ!

ಮಯಾಂಕ್ ಜೊತೆಯಾದ ರಿಷಭ್ ಪಂತ್ ಭರ್ಜರಿ ಆಟ ಪ್ರದರ್ಶಿಸಿದರು. ಪಂತ್ ಸ್ಫೋಟಕ ಆಟವಾಡಿದರೆ, ಮಯಾಂಕ್ ಇವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ 134 ರನ್​ಗಳ ಜೊತೆಯಾಟ ಆಡಿತು.

ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿತು. ಆದರೆ, ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಆರ್ಭಟಿಸಿದರೆ, ಮಯಾಂಕ್ ಅಗರ್ವಾಲ್ ಭರ್ಜರಿ ಆಟ ಆಡಿದರು.

ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿತು. ಆದರೆ, ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಆರ್ಭಟಿಸಿದರೆ, ಮಯಾಂಕ್ ಅಗರ್ವಾಲ್ ಭರ್ಜರಿ ಆಟ ಆಡಿದರು.

  • Share this:
ಭಾರತ ಹಾಗೂ ನ್ಯೂಜಿಲೆಂಡ್ ಇಲೆವೆನ್ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿತು. ಆದರೆ, ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಆರ್ಭಟಿಸಿದರೆ, ಮಯಾಂಕ್ ಅಗರ್ವಾಲ್ ಭರ್ಜರಿ ಆಟ ಆಡಿದರು.

ಅಭ್ಯಾಸ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಭಾರತ 78.5 ಓವರ್​ನಲ್ಲಿ 263 ರನ್​ಗೆ ಆಲೌಟ್ ಆಯಿತು. ಹನುಮಾ ವಿಹಾರಿ ಅಜೇಯ 101 ರನ್ ಗಳಿಸಿದರೆ, ಚೇತೇಶ್ವರ್ ಪೂಜಾರ 93 ರನ್ ಬಾರಿಸಿದ್ದೇ ಹೆಚ್ಚು. ಅಜಿಂಕ್ಯಾ ರಹಾನೆ 18 ರನ್ ಗಳಿಸಿದರೆ, ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ.

 



IPL 2020: ಐಪಿಎಲ್ ವೇಳಾಪಟ್ಟಿ ಬಿಡುಗಡೆ; ಆರ್​ಸಿಬಿ ಮೊದಲ ಎದುರಾಳಿ ಯಾವುದು ಗೊತ್ತಾ..?

ಬಳಿಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ಇಲೆವೆನ್ 74.2 ಓವರ್​ನಲ್ಲಿ 235 ರನ್​ಗೆ ಆಲೌಟ್ ಆಯಿತು. ಹೆನ್ರಿ ಕೂಪರ್ 40 ರನ್ ಗಳಿಸಿದರು. ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಸೈನಿ, ಬುಮ್ರಾ ಹಾಗೂ ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದರು.

28 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರೆಸಿದ ಪೃಥ್ವಿ ಶಾ(39) ಬೇಗನೆ ಔಟ್ ಆದರೆ, ಶುಭ್ಮನ್ ಗಿಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 8 ರನ್​ಗೆ ನಿರ್ಗಮಿಸಿದರು.

ಈ ಸಂದರ್ಭ ಮಯಾಂಕ್ ಜೊತೆಯಾದ ರಿಷಭ್ ಪಂತ್ ಭರ್ಜರಿ ಆಟ ಪ್ರದರ್ಶಿಸಿದರು. ಪಂತ್ ಸ್ಫೋಟಕ ಆಟವಾಡಿದರೆ, ಮಯಾಂಕ್ ಇವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ 134 ರನ್​ಗಳ ಜೊತೆಯಾಟ ಆಡಿತು. ಪಂತ್ ಕೇವಲ 65 ಎಸೆತಗಳಲ್ಲಿ 4 ಬೌಂಡರಿ- 4 ಸಿಕ್ಸರ್ ಬಾರಿಸಿ 70 ರನ್​ಗೆ ಔಟ್ ಆದರೆ, ಅಗರ್ವಾಲ್ 99 ಎಸೆತಗಳಲ್ಲಿ 81 ರನ್ ಗಳಿಸಿದ್ದಾಗ ನಿವೃತ್ತಿ ಪಡೆದರು.

Virat Kohli: ಅನುಷ್ಕಾ ಜೊತೆ ಸುತ್ತಾಟ ಅಲ್ಲ!; ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಆಡದಿರಲು ಕಾರಣವೇನು ಗೊತ್ತಾ?

ಅಂತಿಮವಾಗಿ ಭಾರತ 48 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಶಿಸಲಾಯಿತು. ವೃದ್ದಿಮಾನ್ ಸಾಹ ಅಜೇಯ 30 ಹಾಗೂ ಆರ್. ಅಶ್ವಿನ್ ಅಜೇಯ 16 ರನ್ ಕಲೆಹಾಕಿದರು.

ಫೆಬ್ರವರಿ 21 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್​ನಲ್ಲಿ  ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ.

First published: