Mayank Agarwal: ಮಯಂಕ್ ಬ್ಯಾಟಿಂಗ್​ನಲ್ಲಿ ತಾಂತ್ರಿಕ ದೋಷ; ವಿದೇಶದ ಪಿಚ್​ಗಳಲ್ಲಿ ಕಷ್ಟ: ಅಜಿತ್ ಅಗರ್ಕರ್

Ajit Agarkar comments on Mayank Agarwal: ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಯಂಕ್ ಅಗರ್ವಾಲ್ 3 ಪಂದ್ಯಗಳಿಂದ ಕೇವಲ 135 ರನ್ ಗಳಿಸಿದ್ಧಾರೆ. ಇದಕ್ಕೆ ಅವರ ಬ್ಯಾಟಿಂಗ್​ನಲ್ಲಿನ ತಾಂತ್ರಿಕ ದೋಷವೇ ಕಾರಣ ಎನ್ನುತ್ತಾರೆ ಅಜಿತ್ ಅಗರ್ಕರ್.

ಮಯಂಕ್ ಅಗರ್ವಾಲ್

ಮಯಂಕ್ ಅಗರ್ವಾಲ್

  • Share this:
    ನವದೆಹಲಿ, ಜ. 13: ಕರ್ನಾಟಕದ ಮಯಂಕ್ ಅಗರ್ವಾಲ್ ಅವರ ಸೌತ್ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಆಡಿದ 6 ಇನ್ನಿಂಗ್ಸ್ ಪೈಕಿ ಒಂದು ಅರ್ಧಶತಕ ಮಾತ್ರ ಗಳಿಸಲು ಶಕ್ಯರಾಗಿದ್ದಾರೆ. ಸರಣಿಯಲ್ಲಿ ಒಟ್ಟಾರೆ 135 ರನ್ ಗಳಿಸಿದ್ದಾರೆ. ಸರಣಿಗೆ ಮುನ್ನ ಮಯಂಕ್ ಅವರಿಂದ ಬಹಳ ನಿರೀಕ್ಷೆಗಳಿದ್ದವು. ಮೊದಲ ಪಂದ್ಯದಲ್ಲಿ 60 ಭಾರಿಸಿ ನಿರೀಕ್ಷೆ ಉಳಿಸಿಕೊಂಡೂ ಇದ್ದರು. ಆ ನಂತರ ಅವರು ಸೌತ್ ಆಫ್ರಿಕಾದ ವೇಗಸ್ನೇಹಿ ವಿಕೆಟ್​ಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರು ಮಯಂಕ್ ಅಗರ್ವಾಲ್ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ದೋಷಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

    “ಸರಣಿಯನ್ನ ಚೆನ್ನಾಗಿ ಆರಂಭಿಸಿದ್ದ ಮಯಂಕ್ ಅಗರ್ವಾಲ್ ಒಳ್ಳೆಯ ಅವಕಾಶ ಕೈಚೆಲ್ಲಿದ್ದಾರೆ. ಕಗಿಸೋ ರಬಡ ಇಂಥ ಅದ್ಭುತ ಲಯದಲ್ಲಿರುವಾಗ, ಅವರು ಬೌಲಿಂಗ್ ಮಾಡುತ್ತಿರುವ ರೀತಿಯನ್ನ ನೋಡಿದಾಗ ಅವರನ್ನ ಎದುರಿಸುವುದು ಅಷ್ಟು ಸುಲಭವಲ್ಲ ಎಂಬುದು ಹೌದು. ಆದರೂ ಕೂಡ ಮಯಂಕ್ ಅವರಿಗೆ ತಾಂತ್ರಿಕ ದೋಷಗಳಿವೆ. ಒಂದೇ ರೀತಿಯಲ್ಲಿ ಅವರು ಔಟಾಗುತ್ತಿದ್ದಾರೆ. ವಿದೇಶದ ವಿಕೆಟ್​ಗಳಲ್ಲಿ ಅವರ ಬ್ಯಾಟಿಂಗ್ ದೌರ್ಬಲ್ಯ ಹೆಚ್ಚು ಬೆಳಕಿಗೆ ಬರುತ್ತಿದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

    ಮಯಂಕ್ ಅಗರ್ವಾಲ್ ಎರಡನೇ ಇನ್ನಿಂಗ್ಸಲ್ಲಿ ಔಟಾಗಿದ್ದು ಅಸಾಮಾನ್ಯ ಎಸೆತಕ್ಕೆ. 5ನೇ ಓವರ್​ನಲ್ಲಿ ಕಗಿಸೊ ರಬಡ ಅವರು ಎಸೆದ ಗುಡ್ ಲೆಂತ್ ಬಾಲು ಆಫ್​ಸ್ಟಂಪ್​ಗೆ ಬಹಳ ಹತ್ತಿರಬೇ ಹಾದುಬಂದಿತ್ತು. ಮಯಂಕ್ ಅಗರ್ವಾಲ್ ಅವರಿಗೆ ಆ ಅಪಾಯಕಾರಿ ಚೆಂಡನ್ನು ಆಡದೇ ವಿಧಿ ಇರಲಿಲ್ಲ. ಅದನ್ನು ಆಡಲು ಹೋಗಿ ಚೆಂಡು ಎಡ್ಜ್ ಆಗಿ ಕೀಪರ್ ಕೈ ಸೇರಿತು. ಅಜಿತ್ ಅಗರ್ಕರ್ ಕೂಡ ಇದನ್ನ ಅಂಗೀಕರಿಸುತ್ತಾರೆ. “ಮಯಂಕ್ ಅಗರ್ವಾಲ್ ತಂಡದ ಮೂರನೇ ಅಥವಾ ನಾಲ್ಕನೇ ಆದ್ಯತೆಯ ಓಪನರ್ ಆಗಿರುವುದರಿಂದ ವಿದೇಶದ ವಿಕೆಟ್​ಗಳಲ್ಲಿ ಹೆಚ್ಚು ಆಡಿಲ್ಲ” ಎಂದು ಅಗರ್ಕರ್ ತಿಳಿಸಿದ್ಧಾರೆ.

    ಇದನ್ನೂ ಓದಿ: IPL 2022: ಶ್ರೀಲಂಕಾ ಅಥವಾ ಸೌತ್ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ

    ಮಯಂಕ್ ಅಗರ್ವಾಲ್ ಭಾರತದಲ್ಲಿ ಆಡಿದ 7 ಪಂದ್ಯಗಳಿಂದ 83.90 ಸರಾಸರಿಯಲ್ಲಿ 839 ರನ್ ಗಳಿಸಿದ್ದಾರೆ. ಆದರೆ, ವಿದೇಶಗಳಲ್ಲಿ ಅವರು ಆಡಿದ 12 ಪಂದ್ಯಗಳಿಂದ ಗಳಿಸಿರುವುದು ಕೇವಲ 590 ರನ್ ಮಾತ್ರ ಇಲ್ಲಿ ಅವರ ರನ್ ಸರಾಸರಿ 25.65 ಮಾತ್ರ.

    ರಿಷಬ್ ಪಂತ್ ಶತಕ:

    ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಬಹಳ ಮುಖ್ಯ ಹಾಗೂ ಕುತೂಹಲಕಾರಿ ಹಂತದಲ್ಲಿದೆ. ಭಾರತದ ಎರಡನೇ ಇನ್ನಿಂಗ್ಸ್ 198 ರನ್​ಗೆ ಅಂತ್ಯವಾಗಿದೆ. ಈ ಮೂಲಕ ಸೌತ್ ಆಫ್ರಿಕಾ ಗೆಲುವಿಗೆ 211 ರನ್ ಗುರಿ ಸಿಕ್ಕಿದೆ.

    ಭಾರತದ ಎರಡನೇ ಇನ್ನಿಂಗ್ಸ್ ಆಟದ ಹೈಲೈಟ್ ಆಗಿದ್ದು ರಿಷಭ್ ಪಂತ್ ಅವರ ಭರ್ಜರಿ ಶತಕ ಹಾಗು ಅವರು ಮತ್ತು ವಿರಾಟ್ ಕೊಹ್ಲಿ ನಡುವಿನ ಅಮೋಘ ಜೊತೆಯಾಟ.

    ಇದನ್ನೂ ಓದಿ: PKL 8: ಪವನ್ ಸೂಪರ್ ರೇಡ್; ಬೆಂಗಳೂರು ಬುಲ್ಸ್​ಗೆ ದಾಖಲೆ ಗೆಲುವು; ಮಣ್ಣುಮುಕ್ಕಿದ ದಬಂಗ್ ಡೆಲ್ಲಿ

    ನಾಯಕ ವಿರಾಟ್ ಕೊಹ್ಲಿ ಇಂದು ಅಕ್ಷರಶಃ ಸಂಯಮ ಮೂರ್ತಿಯಂತೆ ಕಂಡರು. ಮೊದಲ ಇನ್ನಿಂಗ್ಸಲ್ಲಿ 201 ಎಸೆತಗಳಿಂದ 71 ರನ್ ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸಲ್ಲಿ 29 ರನ್ ಗಳಿಸಲು 143 ಬಾಲ್ ಆಡಿದರು.

    ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ 5ನೇ ವಿಕೆಟ್​ಗೆ 94 ಜೊತೆಯಾಟ ಆಡಿದ್ದರಿಂದ ಭಾರತದ ಇನ್ನಿಂಗ್ಸ್ 200 ರನ್ ಗಡಿ ಸಮೀಪ ಬರಲು ಸಾಧ್ಯವಾಯಿತು. ರಿಷಭ್ ಪಂತ್ 139 ಬಾಲ್​ನಲ್ಲಿ ಅಜೇಯ 100 ರನ್ ಗಳಿಸಿದರು. ಇದು ಅವರ 4ನೇ ಟೆಸ್ಟ್ ಶತಕ ಆಗಿದೆ. ವಿದೇಶದ ಪಿಚ್​ಗಳಲ್ಲಿ ಭಾರತದ ವಿಕೆಟ್ ಕೀಪರ್​ಗಳು ಗಳಿಸಿದ 7ನೇ ಶತಕವಾಗಿದೆ. ರಿಷಭ್ ಪಂತ್ ಅವರೊಬ್ಬರೇ ಇದರಲ್ಲಿ 3 ಶತಕಗಳನ್ನ ಭಾರಿಸಿರುವುದು ವಿಶೇಷ.
    Published by:Vijayasarthy SN
    First published: