HOME » NEWS » Sports » CRICKET MAX BRYANT PRODUCES SPECTACULAR NICHOLAS POORAN LIKE SAVE IN BBL 2020 ZP

BBL 10: ಅದ್ಭುತ ಅತ್ಯಾದ್ಭುತ...ಮ್ಯಾಕ್ಸ್ ಫೀಲ್ಡಿಂಗ್​​ಗೆ ನಿಬ್ಬೆರಗಾದ ಪ್ರೇಕ್ಷಕರು..!

ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಮೆಲ್ಬೋರ್ನ್ ಸ್ಟಾರ್ಸ್ ಅನ್ನು ಡಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ 17 ರನ್​ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 115 ರನ್ ಗಳಿಸಿತು. ಮಳೆ ಬಂದ ಕಾರಣ ಮೆಲ್ಬೋರ್ನ್ ಸ್ಟಾರ್ಸ್​​ಗೆ 10 ಓವರ್‌ಗಳಲ್ಲಿ 129 ರನ್ ಗಳಿಸುವ ಟಾರ್ಗೆಟ್ ನೀಡಲಾಯಿತು.

news18-kannada
Updated:January 8, 2021, 10:40 PM IST
BBL 10: ಅದ್ಭುತ ಅತ್ಯಾದ್ಭುತ...ಮ್ಯಾಕ್ಸ್ ಫೀಲ್ಡಿಂಗ್​​ಗೆ ನಿಬ್ಬೆರಗಾದ ಪ್ರೇಕ್ಷಕರು..!
max bryant
  • Share this:
ಆಸ್ಟ್ರೇಲಿಯಾದಲ್ಲಿ ಒಂದೆಡೆ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ನಡೆಯುತ್ತಿದ್ದರೆ, ಮತ್ತೊಂದೆಡೆ ಭರ್ಜರಿಯಾಗಿ ಬಿಗ್ ಬ್ಯಾಷ್ ಸೀಸನ್​ 10 ಜರುಗುತ್ತಿದೆ. ಬ್ಯಾಟಿಂಗ್-ಬೌಲಿಂಗ್ ನಡುವೆ ಬಿಬಿಎಲ್ 10 ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಿರುವುದು ವಿಶೇಷ. ಲೀಗ್‌ನ 32 ನೇ ಪಂದ್ಯದಲ್ಲೂ ಅಂತಹದೊಂದು ಉತ್ತಮ ಕ್ಷೇತ್ರರಕ್ಷಣೆ ಕಂಡುಬಂತು. ಈ ಪಂದ್ಯದಲ್ಲಿ, ಬ್ರಿಸ್ಬೇನ್ ಹೀಟ್‌ನ ಆಟಗಾರ ಮ್ಯಾಕ್ಸ್ ಬ್ರ್ಯಾಂಟ್ ಫೀಲ್ಡಿಂಗ್ ಅದ್ಭುತವಾಗಿ ಚೆಂಡನ್ನು ತಡೆದು ಎಲ್ಲರ ಗಮನ ಸೆಳೆದರು.

ಮೆಲ್ಬೋರ್ನ್ ಸ್ಟಾರ್ಸ್ ಇನ್ನಿಂಗ್ಸ್​ನ 9ನೇ ಓವರ್​ನಲ್ಲಿ ನಿಕ್ ಲಾರ್ಕಿನ್ ಭರ್ಜರಿಯಾಗಿ ಹೊಡೆದಿದ್ದರು. ಚೆಂಡು ಮಿಡ್‌ವಿಕೆಟ್‌ ಮೇಲಿಂದ ಇನ್ನೇನು ಸಿಕ್ಸ್ ಆಗಿ ಪರಿವರ್ತನೆ ಆಗಲಿದೆ ಅನ್ನುವಷ್ಟರಲ್ಲಿ ಬ್ರ್ಯಾಂಟ್ ಅದ್ಭುತವಾಗಿ ಡೈವ್ ಮಾಡಿ ಚೆಂಡನ್ನು ತಡೆದರು. ಗಾಳಿಯಲ್ಲಿ ಹಾರಿ ಬೌಂಡರಿ ಲೈನ್ ದಾಟಿ ಬಾಲ್​ನ್ನು ಹೊರ ಎಸೆದರು. ಬ್ರ್ಯಾಂಟ್ ಅವರ ಈ ಅದ್ಭುತ ಫೀಲ್ಡಿಂಗ್ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿತು.

ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಐಪಿಎಲ್ ಸೀಸನ್ 13ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ನಿಕೋಲಸ್ ಪೂರನ್ ಮಾಡಿದ ಅದ್ಭುತ ಫೀಲ್ಡಿಂಗ್​ಗೆ ಬ್ರ್ಯಾಂಟ್ ಅವರ ಕ್ಷೇತ್ರರಕ್ಷಣೆಯನ್ನು ಹೋಲಿಸಲಾಗುತ್ತಿದೆ.ಇನ್ನು ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಮೆಲ್ಬೋರ್ನ್ ಸ್ಟಾರ್ಸ್ ಅನ್ನು ಡಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ 17 ರನ್​ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 115 ರನ್ ಗಳಿಸಿತು. ಮಳೆ ಬಂದ ಕಾರಣ ಮೆಲ್ಬೋರ್ನ್ ಸ್ಟಾರ್ಸ್​​ಗೆ 10 ಓವರ್‌ಗಳಲ್ಲಿ 129 ರನ್ ಗಳಿಸುವ ಟಾರ್ಗೆಟ್ ನೀಡಲಾಯಿತು. ಆದರೆ ಮ್ಯಾಕ್ಸ್‌ವೆಲ್ ನಾಯಕತ್ವದ ಮೆಲ್ಬೋರ್ನ್​ ಸ್ಟಾರ್ಸ್ 10 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 111 ರನ್ ಗಳಿಸಲು ಮಾತ್ರ ಶಕ್ತವಾಯಿತು.
Published by: zahir
First published: January 8, 2021, 10:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories