HOME » NEWS » Sports » CRICKET MAUKA MAUKA AD IS BACK WITH FATHERS DAY TWIST FOR INDIA PAKISTAN MATCH

Mauka Mauka Ad: ಮತ್ತೆ ಬಂದ ಮೌಕಾ ಮೌಕ ಜಾಹೀರಾತು: ಪಾಕಿಸ್ತಾನವನ್ನು ಕಾಲೆಳೆದ ವಿಡಿಯೋ ಭಾರೀ ವೈರಲ್

Mauka Mauka Viral Ad: ಟೀಂ ಇಂಡಿಯಾ ವಿರುದ್ಧ ಪಾಕ್ ಇಲ್ಲಿಯವರೆಗೆ ವಿಶ್ವಕಪ್​ನಲ್ಲಿ 6 ಬಾರಿ ಮುಖಾಮುಖಿಯಾಗಿದೆ. ಆರು ಸಲವು ಪಾಕ್ ತಂಡವನ್ನು ಭಾರತ ಮಣ್ಣು ಮುಕ್ಕಿಸಿದೆ. ವರ್ಲ್ಡ್​ಕಪ್​ನಲ್ಲಿ ಇದುವರೆಗೂ ಟೀಂ ಇಂಡಿಯಾದ ವಿರುದ್ದ ಒಂದು ಪಂದ್ಯ ಜಯಿಸಲು ನೆರೆ ರಾಷ್ಟ್ರಕ್ಕೆ ಸಾಧ್ಯವಾಗಿಲ್ಲ

zahir | news18
Updated:June 10, 2019, 5:49 PM IST
Mauka Mauka Ad: ಮತ್ತೆ ಬಂದ ಮೌಕಾ ಮೌಕ ಜಾಹೀರಾತು: ಪಾಕಿಸ್ತಾನವನ್ನು ಕಾಲೆಳೆದ ವಿಡಿಯೋ ಭಾರೀ ವೈರಲ್
.
  • News18
  • Last Updated: June 10, 2019, 5:49 PM IST
  • Share this:
ಮೌಕಾ ಮೌಕ… ಮೌಕಾ ಮೌಕ… ಎಂಬ ಹಾಡು ನಿಮಗೆ ನೆನಪಿರಬಹುದು. 2015ರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಆರಂಭವಾದ ಜಾಹೀರಾತು ಇದೀಗ ಮತ್ತೆ ಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದ ಸಮಯದಲ್ಲಿ ಈ ಜಾಹೀರಾತು ಸಿಕ್ಕಾಪಟ್ಟೆ ಹಿಟ್​ ಆಗಿತ್ತು.

ಇದೀಗ ಜೂನ್ 16 ರಂದು ಮತ್ತೊಮ್ಮೆ ವಿಶ್ವಕಪ್​ನಲ್ಲಿ ಬದ್ಧವೈರಿಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಇದೇ ಸಂದರ್ಭಕ್ಕನುಗುಣವಾಗಿ ಮೌಕಾ ಜಾಹೀರಾತು ಕೂಡ ಎಂಟ್ರಿ ಕೊಟ್ಟಿದೆ.

. ಹೀಗಾಗಿ ಪ್ರತಿ ಬಾರಿಯು ಒಂದು ವಿಜಯೋತ್ಸವ ಆಚರಿಸಲು ಪಾಕ್ ಕ್ರಿಕೆಟ್​ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆ ಒಂದು ಮೌಕ(ಅವಕಾಶ)ಕ್ಕಾಗಿ ಕಾಯುವ ಕಾನ್ಸೆಪ್ಟ್​ನ್ನು ಬಳಸಿ ಸ್ಟಾರ್​ ಸ್ಪೋರ್ಟ್ಸ್​ ಜಾಹೀರಾತನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷ.

ಪ್ರಸ್ತುತ ಜಾಹೀರಾತಿನಲ್ಲಿ ಪಾಕ್ ಕ್ರಿಕೆಟ್​ ಅಭಿಮಾನಿಯಾಗಿ ನಟ ವಿಶಾಲ್ ಮಲ್ಹೋತ್ರ ಕಾಣಿಸಿಕೊಂಡಿದ್ದಾರೆ. ಪೇಪರ್ ಓದುತ್ತಾ ಕೂತಿರುವ ಪಾಕ್ ಬೆಂಬಲಿಗನ ಬಳಿ ಬಾಂಗ್ಲಾದೇಶ ತಂಡದ ಜೆರ್ಸಿ ತೊಟ್ಟಿರುವ ಅಭಿಮಾನಿ ಆಗಮಿಸಿ, ಮೌಕಾ ಮೌಕಾ ಏಳನೇ ಬಾರಿ ಬಂದಿದೆ. ಈ ಬಾರಿ ಗೆಲ್ಲುವಂತೆ ಆಲ್ ದಿ ಬೆಸ್ಟ್ ಹೇಳುತ್ತಾನೆ.

ಈ ಸಂದರ್ಭದಲ್ಲಿ ಪ್ರಯತ್ನಿಸುತ್ತಲೇ ಇರಬೇಕು, ನಿರಂತರ ಯತ್ನಿಸುವವರು ಯಾವತ್ತೂ ಸೋಲುವುದಿಲ್ಲ. ಒಂದು ದಿನ ಖಂಡಿತಾ ಫಲಿತಾಂಶ ಸಿಗಲಿದೆ ಎಂದು ಅಪ್ಪ ಹೇಳುತ್ತಿದ್ದರು ಎಂದು ಪಾಕ್ ಅಭಿಮಾನಿ ಉತ್ತರಿಸುತ್ತಾನೆ. ಇದೇ ಸಂದರ್ಭದಲ್ಲಿ ಮತ್ತೊಂದು ಬದಿಯಿಂದ ಭಾರತೀಯ ಅಭಿಮಾನಿ ನಾನು ಯಾವಾಗ ಹೇಳಿದೆ ಎಂದು ಕೇಳುತ್ತಾನೆ.ಕಾಕತಾಳೀಯ ಎಂಬಂತೆ ಈ ಬಾರಿ ಪಾಕ್-ಇಂಡಿಯಾ ಕ್ರಿಕೆಟ್ ಕದನ ವಿಶ್ವ ಅಪ್ಪಂದಿರ ದಿನದಂದು ಬಂದಿದೆ. ಹೀಗಾಗಿ ಸ್ಟಾರ್​ ಸ್ಟೋರ್ಟ್ಸ್​ ತಂದೆಯ ಸ್ಥಾನದಲ್ಲಿ ಭಾರತವನ್ನರಿಸಿ ಪಾಕ್ ತಂಡವನ್ನು ವಿಡಿಯೋ ಮೂಲಕ ಅಣಕಿಸಿದೆ. ಇಲ್ಲಿ ಪರೋಕ್ಷವಾಗಿ ಪಾಕಿಸ್ತಾನವನ್ನು ಭಾರತಕ್ಕೆ ಹುಟ್ಟಿದ ದೇಶ (ವಿಭಜನೆಯಾದ ದೇಶ) ಎಂದು ಚಿತ್ರಿಸಲಾಗಿದೆ.

Youtube Video


ವಿಭಿನ್ನವಾಗಿ ಕಾಲೆಳೆದಿರುವ ಜಾಹೀರಾತು ವಿಡಿಯೋ ಭಾರೀ ವೈರಲ್ ಆಗಿದ್ದು, ಮತ್ತೊಮ್ಮೆ ಮೌಕಾ ಮೌಕ ಹಾಡು ಎಲ್ಲೆಡೆ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕದನಕ್ಕೆ 5 ದಿನಗಳು ಬಾಕಿ ಇರುವಾಗಲೇ ಕ್ರಿಕೆಟ್ ಜ್ವರವಂತು ತಾರಕಕ್ಕೇರಿದೆ.
First published: June 10, 2019, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories