ವಿರಾಟ್ ಕೊಹ್ಲಿ, ಬಾಬರ್ ಅಜಂ ಮಧ್ಯೆ ಇರುವ ವ್ಯತ್ಯಾಸ ಬಿಚ್ಚಿಟ್ಟ ಪಾಕಿಸ್ತಾನದ ಬ್ಯಾಟಿಂಗ್ ಕೋಚ್

Pakistan Batting Coach Speaks- ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಉತ್ತಮ ಸಾಧನೆಗೆ ಕಠಿಣ ತರಬೇತಿ, ಧಾರ್ಮಿಕತೆ ಮತ್ತು ಮೊದಲ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ್ದು ಕಾರಣ ಎಂದು ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ಧಾರೆ.

ಬಾಬರ್ ಅಜಂ

ಬಾಬರ್ ಅಜಂ

  • Share this:
ದುಬೈ, ನ. 10: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ (Pakistan Cricket Team Skipper Babar Azam) ಬಗ್ಗೆ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ (Pak Batting Consultant Matthew Hayden) ಬಹಳ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ವರ್ಷದ ಹಿಂದಿನವರೆಗೂ ಬಾಬರ್ ಅಜಂ ಅವರನ್ನ ಪಾಕಿಸ್ತಾನದ ವಿರಾಟ್ ಕೊಹ್ಲಿ ಎನ್ನಲಾಗುತ್ತಿತ್ತು. ಈಗ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ, ಮತ್ತು ತಮ್ಮದೇ ಸ್ಥಾನಮಾನ ಗಿಟ್ಟಿಸಿದ್ದಾರೆ. ಈಗ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರೂ ಆಗಿರುವ ಮ್ಯಾಥ್ಯೂ ಹೇಡನ್ ಅವರು ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿ ಬಗ್ಗೆ ತಮ್ಮದೇ ರೀತಿಯಲ್ಲಿ ತುಲನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ಅವರ ವ್ಯಕ್ತಿತ್ವಗಳು ಬಹಳ ವಿಭಿನ್ನ ಎಂದಿದ್ದಾರೆ ಹೇಡನ್.

“ಬಾಬರ್ ಅಜಂ ಅವರು ನಿಮ್ಮ ಕಣ್ಣಿಗೆ ಹೇಗೆ ಕಾಣುತ್ತಾರೋ ಹಾಗೇ ಅವರ ವ್ಯಕ್ತಿತ್ವ ಇದೆ. ಅವರದ್ದು ಸ್ಥಿರ ಪ್ರದರ್ಶನ. ಹೆಚ್ಚು ಅಬ್ಬರದ ವ್ಯಕ್ತಿತ್ವವಲ್ಲ ಅವರದ್ದು… ನಿಜ ಹೇಳಬೇಕೆಂದರೆ ಬಹಳ ಆಕ್ರಮಣಕಾರಿ ಪ್ರವೃತ್ತಿ, ಬಹಳ ಆಕಾಂಕ್ಷಿ ಹಾಗೂ ಅಬ್ಬರತನ ಹೊಂದಿರುವ ವಿರಾಟ್ ಕೊಹ್ಲಿಯಂಥ ವ್ಯಕ್ತಿತ್ವಕ್ಕಿಂತ ಬಾಬರ್ ಅಜಂ ವಿಭಿನ್ನವಾಗಿದ್ದಾರೆ. ಅವರಲ್ಲಿ ಒಳ್ಳೆಯ ನಿಯಂತ್ರಣ ಇದೆ, ಅದ್ಭುತ ತಾಳ್ಮೆ ಇದೆ” ಎಂದು ಪಾಕಿಸ್ತಾನ ತಂಡದ ಬ್ಯಾಟಿಂಗ್ ಕನ್ಸಲ್ಟೆಂಟ್ ಆಗಿರುವ ಅವರು ಅಭಿಪ್ರಾಯಪಟ್ಟಿದ್ಧಾರೆ.

“ಚೆಂಡಿಗೆ ಅವರು ಯಾವಾಗಲೂ ಸ್ಪಂದಿಸುವ ರೀತಿ ಯಾರಿಗೂ ಕಡಿಮೆ ಇಲ್ಲ. ಚೆಂಡಿನ ಗತಿಯನ್ನ ಬಹಳ ಬೇಗ ಗುರುತಿಸಿ ಆಡಬಲ್ಲರು. ಒಬ್ಬ ಉತ್ತಮ ಆಟಗಾರನ ಪ್ರಮುಖ ಗುಣ ಅದು” ಎಂದು ಪಾಕಿಸ್ತಾನ್ ತಂಡದ ಕ್ಯಾಪ್ಟನ್ ಅನ್ನು ಹೇಡನ್ ಹೊಗಳಿದ್ದಾರೆ.

ಪಾಕಿಸ್ತಾನದ ಯಶಸ್ಸಿಗೆ ಧಾರ್ಮಿಕತೆ ಕಾರಣ:

ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ಗೆದ್ದ ಬಳಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಗ್ರೌಂಡ್​ನಲ್ಲೇ ದೇವರ ಪ್ರಾರ್ಥನೆ ಮಾಡಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಹಿಂದೂಗಳ ಮಧ್ಯೆ ನಮಾಜ್ ಮಾಡಿದ್ದು ಇಷ್ಟ ಆಯಿತು ಎಂದು ಮಾಜಿ ಕ್ರಿಕೆಟಿಗ ವಕಾರ್ ಹೂನಿಸ್ ಹೇಳಿಕೆ ಕೊಟ್ಟು ವಿವಾದಕ್ಕೀಡಾಗಿದ್ದರು. ಇದೀಗ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡ ಇಸ್ಲಾಮ್ ಧರ್ಮದ ಜೊತೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಹೇಳಿದ್ಧಾರೆ. ಅಂದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಧರ್ಮಮುಖಿಯಾಗುವಂಥ ವಾತಾವರಣ ಬೆಳೆಸಲಾಗಿರುವುದು ಸ್ಪಷ್ಟ.

ಇದನ್ನೂ ಓದಿ: NZ vs ENG- ಮಿಚೆಲ್ ಭರ್ಜರಿ ಆಟ; ನ್ಯೂಜಿಲೆಂಡ್ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶ

“ಇಸ್ಲಾಮ್ ಜೊತೆ ಜೋಡಿತವಾಗಿರುವುದು ಹಾಗೂ ಆಧ್ಯಾತ್ಮಿಕತೆಯು ಪಾಕಿಸ್ತಾನ ತಂಡಕ್ಕೆ ದಾರಿ ದೀಪವಾಗಿದೆ. ಎಲ್ಲರನ್ನೂ ಒಗ್ಗೂಡಿಸುವ ಸಾಧನವಾಗಿದೆ” ಎಂದು ಹೇಡನ್ ಹೇಳಿದ್ದಾರೆ. ಧಾರ್ಮಿಕತೆಯ ಜೊತೆಗೆ ಕಠಿಣ ಪರಿಶ್ರಮ ಪಾಕ್ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ವಿರುದ್ಧದ ಗೆಲುವು ಪಾಕಿಸ್ತಾನಕ್ಕೆ ಶಕ್ತಿ:

ಪಾಕಿಸ್ತಾನ್ ತಂಡ ತನ್ನ ಮೊದಲ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ್ದು ಅದಕ್ಕೆ ಆನೆಬಲ ಕೊಟ್ಟಿತು ಎಂಬ ಅಭಿಪ್ರಾಯವನ್ನು ಮ್ಯಾಥ್ಯೂ ಹೇಡನ್ ನೀಡಿದ್ಧಾರೆ.

ಇದನ್ನೂ ಓದಿ: Ravi Shastri- ಗೆಲ್ಲಲು ಯತ್ನಿಸದೆಯೇ ಸೋತೆವು, ಆಟಗಾರರಲ್ಲಿ ಆ ಅಂಶವೇ ಇರಲಿಲ್ಲ: ರವಿಶಾಸ್ತ್ರಿ

“ನಾಳೆ (ಗುರುವಾರ) ರಾತ್ರಿ ನಾವು ಆಡಲಿರುವ ದುಬೈ ಪಿಚ್​ನಲ್ಲೇ ಭಾರತ ವಿರುದ್ಧ ನಮ್ಮ ಮೊದಲ ಪಂದ್ಯ ಆಗಿದ್ದು. ಆ ಪಂದ್ಯ ಎಂದರೆ ಒತ್ತಡ ಅದೆಷ್ಟೋ. ಆ್ಯಷಸ್ ಸರಣಿಯನ್ನ ಅದಕ್ಕೆ ಹೋಲಿಕೆ ಮಾಡಬಹುದು ಅಷ್ಟೇ. ಇಂಥ ಒತ್ತಡದ ಪರಿಸ್ಥಿತಿಯನ್ನ ಪಾಕ್ ಆಟಗಾರರು ಅದ್ಭುತವಾಗಿ ನಿಭಾಯಹಿಸಿದರು. ಈ ದೊಡ್ಡ ಪಂದ್ಯದಲ್ಲಿ ಅವರು ಆತ್ಮವಿಶ್ವಾಸದಿಂದ ಆಡಿದರು.

”ಆ ಆಟ ನಮಗೆ ಮುಂದಿನ ಪಂದ್ಯಗಳಿಗೆ ಒಳ್ಳೆಯ ಬಲ ಕೊಟ್ಟಿತು. ನಾಲ್ಕು ವಾರಗಳ ಪರಿಶ್ರಮಕ್ಕೆ ಒಳ್ಳೆಯ ಫಲಗಳು ಸಿಕ್ಕವು” ಎಂದು ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
Published by:Vijayasarthy SN
First published: