Presidents Cup: ಚಿನ್ನಕ್ಕೆ ಕೊರಳೊಡ್ಡಿದ ಮೇರಿ ಕೋಮ್

ಕಳೆದ ವರ್ಷ ನಡೆದ ಎಐಬಿಎ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್​ನಲ್ಲಿ ಕೋಮ್ ಆರನೇ ಬಾರಿಗೆ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದರು.

news18
Updated:July 28, 2019, 5:36 PM IST
Presidents Cup: ಚಿನ್ನಕ್ಕೆ ಕೊರಳೊಡ್ಡಿದ ಮೇರಿ ಕೋಮ್
ಮೇರಿ ಕೋಮ್
  • News18
  • Last Updated: July 28, 2019, 5:36 PM IST
  • Share this:
ಹೊಸದಿಲ್ಲಿ (ಜು. 28): ಆರು ಬಾರಿಯ ವಿಶ್ವಚಾಂಪಿಯನ್, ಭಾರತದ ಖ್ಯಾತ ಬಾಕ್ಸಿಂಗ್ ತಾರೆ ಮೇರಿ ಕೋಮ್ ಅವರು ತಮ್ಮ ಖಾತೆಗೆ ಮತ್ತೊಂದು ಚಿನ್ನದ ಪದಕ ಸೇರಿಸಿಕೊಂಡಿದ್ದಾರೆ.

23ನೇ ಪ್ರೆಸಿಡೆಂಟ್ಸ್​​ ಕಪ್​ನ 51 ಕೆಜಿ ವಿಭಾಗದ ಫೈನಲ್​ನಲ್ಲಿ ಇಂಡೋನೇಷ್ಯಾದ ಲಬೂವನ್ ಬಜೊ ಅವರನ್ನು ಸೋಲಿಸಿ 36 ವರ್ಷ ಪ್ರಾಯದ ಕೋಮ್ ಸುಲಭ ಜಯ ಗಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ನಡೆದ ಇಂಡಿಯಾ ಓಪನ್ ಬಾಕ್ಸಿಂಗ್​ನಲ್ಲೂ ಮೇರಿ ಕೋಮ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಮೇ ತಿಂಗಳಲ್ಲಿ ಥಾಯ್ಲೆಂಡ್​​ನಲ್ಲಿ ನಡೆದ ಏಷ್ಯನ್ ಚಾಂಪಿಯನ್​ಶಿಪ್​ನಿಂದ ಹಿಂದೆ ಸರಿದಿದ್ದ ಇವರು ಸದ್ಯ ಪ್ರತಿಷ್ಠಿತ ವಿಶ್ವಚಾಂಪಿಯನ್ ಟೂರ್ನಿಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಕೊಹ್ಲಿ-ರೋಹಿತ್ ಜಗಳದಲ್ಲಿ ಮತ್ತೊಂದು ಟ್ವಿಸ್ಟ್​; ಇನ್ನೂ ನಿಲ್ಲದ ನಾಯಕ-ಉಪ ನಾಯಕನ ಶೀತಲ ಸಮರ

 



ಈ ಬಾರಿಯ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸೆ. 7 ರಿಂದ 21ರ ವರೆಗೆ ನಡೆಯಲಿದೆ. ಕಳೆದ ವರ್ಷ ನಡೆದ ಎಐಬಿಎ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್​ನಲ್ಲಿ ಕೋಮ್ ಆರನೇ ಬಾರಿಗೆ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದರು.

 



First published:July 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ