Video: ಭಾರತದ ಗೆಲುವನ್ನು ಕಸಿದುಕೊಂಡ ಆ ಒಂದು ರನೌಟ್..!

IND vs NZ : ಒಂದು ಹಂತದಲ್ಲಿ ಕಿವೀಸ್ ಕೈಯಲ್ಲಿದ್ದ ಪಂದ್ಯವನ್ನು ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳಾದ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜ ಭಾರತದ ಕಡೆ ವಾಲುವಂತೆ ಮಾಡಿದ್ದರು. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಈ ಜೋಡಿ 7ನೇ ವಿಕೆಟ್​ಗೆ 116 ರನ್​ಗಳ ಜೊತೆಯಾಟ ಆಡಿದ್ದರು.

zahir | news18
Updated:July 10, 2019, 9:36 PM IST
Video: ಭಾರತದ ಗೆಲುವನ್ನು ಕಸಿದುಕೊಂಡ ಆ ಒಂದು ರನೌಟ್..!
ಧೋನಿ
zahir | news18
Updated: July 10, 2019, 9:36 PM IST
ವಿಶ್ವಕಪ್ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದಿದೆ. ಕೇನ್​ ವಿಲಿಯಮ್ಸನ್​ ಪಡೆ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತುವಲ್ಲಿ ಎಡವಿದ ಭಾರತೀಯ ಬ್ಯಾಟ್ಸ್​ಮನ್​ಗಳು 18 ರನ್​ಗಳಿಂದ ಸೋಲೊಪ್ಪಿಕೊಂಡರು.

ಒಂದು ಹಂತದಲ್ಲಿ ಕಿವೀಸ್ ಕೈಯಲ್ಲಿದ್ದ ಪಂದ್ಯವನ್ನು ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳಾದ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜ ಭಾರತದ ಕಡೆ ವಾಲುವಂತೆ ಮಾಡಿದ್ದರು. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಈ ಜೋಡಿ 7ನೇ ವಿಕೆಟ್​ಗೆ 116 ರನ್​ಗಳ ಜೊತೆಯಾಟ ಆಡಿದ್ದರು.

ಇದನ್ನೂ ಓದಿ: India Vs New Zealand : 4ನೇ ಬಾರಿ ಫೈನಲ್​ಗೇರುವ ಟೀಂ ಇಂಡಿಯಾ ಕನಸು ಭಗ್ನ

ಭಾರತದ ಗೆಲುವಿಗೆ ಮೂರು ಓವರುಗಳಲ್ಲಿ 32 ರನ್​ಗಳ ಅವಶ್ಯಕತೆ ಇದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಜಡೇಜ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಇರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗೆಲುವಿನ ನಿರೀಕ್ಷೆಯನ್ನು ಕಾಯ್ದಿರಿಸಿತ್ತು. ಈ ನಿರೀಕ್ಷೆ ಹುಸಿಯಾಗಲ್ಲ ಎಂಬಂತೆ 48ನೇ ಓವರ್​ನ ಮೊದಲ ಎಸೆತವನ್ನು ಧೋನಿ ಸಿಕ್ಸರ್​ಗೆ ಅಟ್ಟಿದರು.

ಈ ಹಂತದಲ್ಲಿ ಭಾರತಕ್ಕೆ ಗೆಲ್ಲಲು ಬೇಕಾಗಿದ್ದದ್ದು 10 ಎಸೆತಗಳಲ್ಲಿ 25 ರನ್​ಗಳು. ಒಂದೆಡೆ ಧೋನಿ ಮತ್ತೊಂದೆಡೆ ಭುವನೇಶ್ವರ್ ಕುಮಾರ್.  ಬೌಲಿಂಗ್​ನಲ್ಲಿ ಎಸೆಯುತ್ತಿದ್ದದ್ದು ನ್ಯೂಜಿಲೆಂಡ್​ ಪರ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೂಕಿ ಫೆರ್ಗುಸನ್. ಹೀಗಾಗಿ ಭುವಿಗೆ ಸ್ಟ್ರೈಕ್ ನೀಡದೇ ಉಳಿದ ಎಸೆತಗಳನ್ನು ಧೋನಿ ನಿರ್ಧರಿಸಿದ್ದರು. ಅದರಂತೆ ಲೆಗ್​​ ಸೈಡ್​ನಲ್ಲಿ ಬಾರಿಸಿದ ಧೋನಿ ಎರಡು ರನ್​ಗಳ ಓಟಕ್ಕೆ ಮುಂದಾಗಿದ್ದರು. ಆದರೆ ಬೌಂಡರಿ ಲೈನ್​ನಿಂದ ಓಡಿ ಬಂದ ಮಾರ್ಟಿನ್ ಗಪ್ಟಿಲ್ ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ್ದರು.



ಗಪ್ಟಿಲ್ ಎಸೆದ ಚೆಂಡು ನೇರವಾಗಿ ವಿಕೆಟ್​ಗೆ ಬಡಿಯಿತು. ಮಹೇಂದ್ರ ಸಿಂಗ್ ಧೋನಿ ರನೌಟ್​ಗೆ ಬಲಿಯಾದರು. ಈ ಒಂದು ರನೌಟ್​ನೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ವಿಶ್ವಕಪ್​ ಕನಸು ಕಮರಿ ಹೋಯಿತು.

First published:July 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...