HOME » NEWS » Sports » CRICKET MARCH 16 2012 SACHIN TENDULKAR CREATE HISTORY 100TH INTERNATIONAL HUNDRED AGAINST BANGLADESH VB

ಸಚಿನ್ ಶತಕದ ಶತಕಕ್ಕೆ ಇಂದು 8 ವರ್ಷ; ಆ ಒಂದು ಐತಿಹಾಸಿಕ ಗಳಿಗೆಗೆ 369 ದಿನ ಕಾದಿದ್ದರು ಕ್ರಿಕೆಟ್ ದೇವರು!

Sachin Tendulkar: 2011ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಾಗ್ಪುರ ಮೈದಾನದಲ್ಲಿ ಸಚಿನ್ 111ರನ್‌ ಗಳಿಸಿದ್ದರು. ಇದು ಸಚಿನ್ ಅವರು ತಮ್ಮ ವೃತ್ತಿ ಜೀವನದಲ್ಲಿ ದಾಖಲಿಸಿದ 99ನೇ ಶತಕವಾಗಿತ್ತು. ಇದಾದ ಸುಮಾರು 369 ದಿನಗಳ ಬಳಿಕ ಸಚಿನ್ ನೂರು ಶತಕಗಳ ದಾಖಲೆಯನ್ನು ನಿರ್ಮಿಸಿದರು.

news18-kannada
Updated:March 16, 2020, 12:09 PM IST
ಸಚಿನ್ ಶತಕದ ಶತಕಕ್ಕೆ ಇಂದು 8 ವರ್ಷ; ಆ ಒಂದು ಐತಿಹಾಸಿಕ ಗಳಿಗೆಗೆ 369 ದಿನ ಕಾದಿದ್ದರು ಕ್ರಿಕೆಟ್ ದೇವರು!
ಇಂದು ಅವರ ಹುಟ್ಟುಹಬ್ಬ ಈ ದಿನದ ನೆನಪಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಶ್ರೇಷ್ಠ 10 ಇನ್ನಿಂಗ್ಸ್ಗಳ ಪಟ್ಟಿ ಇಲ್ಲಿದೆ.
  • Share this:
ಅದು ಮಾರ್ಚ್​ 16. 2012. ಬಾಂಗ್ಲಾದೇಶ VS ಭಾರತ ನಡುವಿನ ಏಕದಿನ ಪಂದ್ಯ. ಬಾಂಗ್ಲಾದೇಶದ ಢಾಕ ಕ್ರಿಕೆಟ್​ ಸ್ಟೇಡಿಯಂನಲ್ಲಿ ಜನ ಕಕ್ಕಿರಿದು ಸೇರಿದ್ದರು. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಉಸಿರನ್ನು ಬಿಗಿ ಹಿಡಿದು ಟಿ.ವಿ ಎದುರು ಕುಳಿತಿದ್ದರು. ಅಂದಹಾಗೆ ಕೋಟ್ಯಾಂತರ ಜನ ಉಸಿರು ಬಿಗಿ ಹಿಡಿದು ಕಾದಿದ್ದು, ಇಡೀ ಢಾಕ ಕ್ರೀಡಾಂಗಣ ಕಾಲಿಡುವುದಕ್ಕೂ ಜಾಗವಿಲ್ಲದಷ್ಟು ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿದ್ದು ಆ ಪಂದ್ಯ ನೋಡಲಿಕ್ಕಲ್ಲ. ಬದಲಾಗಿ ಕ್ರಿಕೆಟ್ ದೇವರ ಶತಕದ ಶತಕವನ್ನು ಕಣ್ತುಂಬಿಕೊಳ್ಳಲು.

March​ 16. 2012: Sachin Tendulkar Create history 100th international hundred against Bangladesh
ಸಚಿನ್ ತೆಂಡೂಲ್ಕರ್.


ಅಂದುಕೊಂಡ ಹಾಗೆ ಕೊನೆಗೂ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟನ್ನು ಮೇಲಕೆತ್ತಿ ಆಕಾಶವನ್ನು ನೋಡಿದ ಆ ಮಹಾನ್ ಕ್ರಿಕೆಟ್ ಐತಿಹಾಸಿಕ ಘಟನೆಗೆ ಇಂದು ಸರಿಯಾಗಿ 8 ವರ್ಷ.

MS Dhoni: ಕೊರೋನಾ ಎಫೆಕ್ಟ್; ಅರ್ಧದಲ್ಲೇ ಅಭ್ಯಾಸ ಬಿಟ್ಟು ಚೆನ್ನೈ ತೊರೆದ ಧೋನಿ

ಢಾಕಾದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳ ಮೈಲುಗಲ್ಲು ತಲುಪಿದ್ದರು. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ ಸಿಡಿಸಿದ ವಿಶ್ವದ ಮೊದಲ ಹಾಗೂ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ತೆಂಡೂಲ್ಕರ್ ಪಾತ್ರರಾಗಿದ್ದರು.

 ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ಸಚಿನ್ ಅವರ ಶತಕದ ಬೆಂಬಲದೊಂದಿಗೆ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 289 ರನ್ ಗಳಿಸಿತ್ತು. 147 ಎಸೆತಗಳನ್ನು ಎದುರಿಸಿದ್ದ ಸಚಿನ್ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 114 ರನ್ ಗಳಿಸಿದ್ದರು.

ಚೊಚ್ಚಲ ರಣಜಿ ಟ್ರೋಫಿ ಗೆದ್ದ ಬೆನ್ನಲ್ಲೆ ನಿಶ್ಚಿತಾರ್ಥ ಮಾಡಿಕೊಂಡ ಉನಾದ್ಕಟ್!

ಇದಕ್ಕೂ ಮುನ್ನ 2011ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಾಗ್ಪುರ ಮೈದಾನದಲ್ಲಿ ಸಚಿನ್ 111ರನ್‌ ಗಳಿಸಿದ್ದರು. ಇದು ಸಚಿನ್ ಅವರು ತಮ್ಮ ವೃತ್ತಿ ಜೀವನದಲ್ಲಿ ದಾಖಲಿಸಿದ 99ನೇ ಶತಕವಾಗಿತ್ತು. ಇದಾದ ಸುಮಾರು 369 ದಿನಗಳ ಬಳಿಕ ಸಚಿನ್ ನೂರು ಶತಕಗಳ ದಾಖಲೆಯನ್ನು ನಿರ್ಮಿಸಿದರು. ಹೀಗೆ ಸುದೀರ್ಘ ಸಮಯ ಕಾಯುವಿಕೆಯ ಬಳಿಕ ಸಚಿನ್ 100ನೇ ಶತಕದ ಮೈಲುಗಲ್ಲು ತಲುಪಿದ್ದರು.

ಈ ಮೈಲುಗಲ್ಲು ಕ್ರಿಕೆಟ್​ ಇತಿಹಾಸದ ಅವಿಸ್ಮರಣೀಯ ಗಳಿಗೆಯಾಗಿದ್ದು ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭದ ಮಾತಲ್ಲ. ಆದರೂ, ದಾಖಲೆಗಳು ಇರುವುದು ಮುರಿಯುವುದಕ್ಕೆ ಎನ್ನುವಂತೆ ಈ ಸರದಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.

Youtube Video
First published: March 16, 2020, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories