ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಹ ಆಟಗಾರನನ್ನೇ ತುಳಿದ್ರಾ ದಿನೇಶ್ ಕಾರ್ತಿಕ್?

ಟೀಂ ಇಂಡಿಯಾ ಪರ 8 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಮನೋಜ್, ರಣಜಿಯಲ್ಲಿ ಕೊಲ್ಕತ್ತಾ ತಂಡವನ್ನು ಪ್ರತಿನಿಧಿಸುತ್ತಾರೆ.

zahir | news18
Updated:April 16, 2019, 7:38 PM IST
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಹ ಆಟಗಾರನನ್ನೇ ತುಳಿದ್ರಾ ದಿನೇಶ್ ಕಾರ್ತಿಕ್?
@Saikat Das /SPORTZPICS for BCCI
zahir | news18
Updated: April 16, 2019, 7:38 PM IST
ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲು ತಮ್ಮದೇ ತಂಡದ ಆಟಗಾರನನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ತುಳಿದ್ರಾ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ  ಹೊಡಿ ಬಡಿ ದಾಂಡಿಗ ಶುಭ್​ಮನ್ ಗಿಲ್ ಅವರ ಬ್ಯಾಟಿಂಗ್ ಆರ್ಡರ್​ ಅನ್ನು ದಿನೇಶ್ ಕಾರ್ತಿಕ್ ಬದಲಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕ್ರಿಕೆಟಿಗ ಮನೋಜ್ ತಿವಾರಿ, ಡಿಕೆ ವಿರುದ್ಧ ಇಂತಹದೊಂದು ಪರೋಕ್ಷ ಆರೋಪ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಟಾಪ್ ಆರ್ಡರ್​ನಲ್ಲಿ ಆಡಿದ್ದ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ಚೆನ್ನೈ ವಿರುದ್ಧ ಫಾರ್ಮ್​ನಲ್ಲಿರುವ ಶುಭ್​ಮನ್ ಗಿಲ್​ರನ್ನು ಕೆಳ ಕ್ರಮಾಂಕದಲ್ಲಿ ಆಡಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಾಜಿ ಕೆಕೆಆರ್ ಆಟಗಾರ ತಿವಾರಿ, ದಿನೇಶ್ ಕಾರ್ತಿಕ್ ನಾಳೆ(ಸೋಮವಾರ) ವಿಶ್ವಕಪ್ ತಂಡದ ಆಯ್ಕೆ ಇರುವುದರಿಂದ ಗಿಲ್​ ರನ್ನು ಕೆಳ ಕ್ರಮಾಂಕಕ್ಕೆ ಇಳಿಸಿ, ತಾವೇ ಮೊದಲು ಬ್ಯಾಟಿಂಗ್​ ಮಾಡಿದ್ದಾರೆ. ಇದನ್ನು ಯಾರಾದರೂ ತಂಡದ ಆಟ ಎಂದು ಕರೆಯುತ್ತಾರಾ? ಕೆಲವೊಮ್ಮೆ ಎಲ್ಲವೂ ಸ್ಪಷ್ಟವಾಗುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.

ಇದರಿಂದ ಈಗ ದಿನೇಶ್ ಕಾರ್ತಿಕ್ ಅವರ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಕೆಕೆಆರ್​ ನಾಯಕ ತಾನು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರನನ್ನು ತುಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಮನೋಜ್ ತಿವಾರಿ ಈ ಹಿಂದೆ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕಳಪೆ ಫಾರ್ಮ್​ನಿಂದ ತಂಡದಿಂದ ಹೊರ ಬಿದ್ದಿದ್ದರು. ಬಳಿಕ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ ಆಯ್ಕೆಯಾದರೂ ಉತ್ತಮ ಪ್ರದರ್ಶನ ಹೊರ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಯಾವ ಫ್ರಾಂಚೈಸಿ ಮನೋಜ್ ತಿವಾರಿಯ ಖರೀದಿಗೆ ಆಸಕ್ತಿವಹಿಸಿರಲಿಲ್ಲ. ಹೀಗಾಗಿ ಸುಖಾಸುಮ್ಮನೆ ಆರೋಪದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಟೀಂ ಇಂಡಿಯಾ ಪರ 8 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಮನೋಜ್, ರಣಜಿಯಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಾರೆ. ಐಪಿಎಲ್​ನಲ್ಲಿ 98 ಪಂದ್ಯಗಳನ್ನು ಆಡಿರುವ ಮನೋಜ್ ತಿವಾರಿ, 1695 ರನ್​ಗಳಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳ ಒಳಗೊಂಡಿವೆ. ಕೆಲ ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರ ಹರ್ಷಲ್ ಪಟೇಲ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಈ ವೇಳೆ ಇವರ ಜಾಗಕ್ಕೆ ಮನೋಜ್ ತಿವಾರಿ ಆಯ್ಕೆಯಾಗಲಿದ್ದಾರೆ ಎಂದು ಎನ್ನಲಾಗಿತ್ತು. ಆದರೆ ಡೆಲ್ಲಿ ಆಯ್ಕೆ ಸಮಿತಿಯು ಮನೋಜ್​ರನ್ನು  ಕೈ ಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡಿದ್ದರು. ಈ ಬಗ್ಗೆ ಸಹ ಟ್ವೀಟ್ ಮಾಡಿ ಮನೋಜ್ ತಿವಾರಿ ಬೇಸರ ವ್ಯಕ್ತಪಡಿಸಿದ್ದರು.



ಇದನ್ನೂ ಓದಿ: ಮೊಬೈಲ್​ನಲ್ಲಿ ಕ್ರಿಕೆಟ್​ ಆಡಿ ಐಷಾರಾಮಿ ಮನೆ ಗೆದ್ದ ಹುಡುಗ!

ಮನೋಜ್ ತಿವಾರಿಯ ಆರೋಪದಲ್ಲಿ ಹುರುಳಿದೆಯೋ, ಇಲ್ಲವೊ, ಆದರೆ ದಿನೇಶ್ ಕಾರ್ತಿಕ್ ಸ್ಪೋಟಕ ಆಟಗಾರ ರಿಷಭ್ ಪಂತ್​ರನ್ನು ಹಿಂದಿಕ್ಕಿ ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ ಎರಡನೇ ವಿಕೆಟ್ ಕೀಪರ್​ ಆಗಿ ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ: ICC World Cup 2019: ವಿಶ್ವಕಪ್​​ಗೆ ಟೀಂ ಇಂಡಿಯಾ ಪ್ರಕಟ; 15 ಆಟಗಾರರ ಹೆಸರು ಇಲ್ಲಿದೆ ನೋಡಿ!
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626