ಬೆಂಗಳೂರು (ಸೆ. 03): ತಿರುವನಂತ ಪುರಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೂರನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ಭರ್ಜರಿ ಗೆಲುವು ಸಾಧಿಸಿದೆ. ಮನೀಶ್ ಪಾಂಡೆ ಹಾಗೂ ಶಿವಂ ದುಬೆ ಸ್ಫೋಟಕ ಆಟದ ನೆರವಿನಿಂದ 4 ವಿಕೆಟ್ಗಳ ಜಯ ಸಾಧಿಸಿದ್ದು, ಸರಣಿ ವಶ ಪಡಿಸಿಕೊಂಡಿದೆ.
ಮಳೆ ಬಂದ ಕಾರಣ 30 ಓವರ್ಗೆ ಪಂದ್ಯವನ್ನು ನಿಗದಿ ಪಡಿಸಲಾಯಿತು. ಆಫ್ರಿಕಾ, ಭಾರತಕ್ಕೆ ಗೆಲ್ಲಲು 208 ರನ್ಗಳ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನಟ್ಟಿದ ಭಾರತ ಎ ಆರಂಭದಲ್ಲೇ ಆಘಾತ ಅನುಭವಿಸಿತು. 25 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರುತುರಾಜ್ ಗಾಯಕ್ವಾಡ್ 1 ರನ್ಗೆ ಔಟ್ ಆದರೆ, ರಿಕಿ ಭುಯ್ ಸೊನ್ನೆ ಸುತ್ತಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕ್ರುನಾಲ್ ಪಾಂಡ್ಯ ಆಟ 13 ರನ್ಗೆ ಅಂತ್ಯವಾಯಿತು.
![Manish Pandey, Shivam Dube lead India A to four-wicket win over South Africa A]()
ಮನೀಶ್ ಪಾಂಡೆ ಬ್ಯಾಟಿಂಗ್ ವೈಖರಿ
ಬಳಿಕ ನಾಯಕ ಮನೀಶ್ ಪಾಂಡೆ ಜೊತೆಯಾದ ಇಶಾನ್ ಕಿಶನ್ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆದರೆ ಕಿಶನ್ 41 ಎಸೆತಗಳಲ್ಲಿ 40 ರನ್ ಬಾರಿಸಿ ಔಟ್ ಆಗಿದ್ದು ಹಾಗೂ ಬಂದ ಬೆನ್ನಲ್ಲೆ ನಿತೀಶ್ ರಾಣ(13) ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು. ಈ ಸಂದರ್ಭ ಕುಗ್ಗದೆ ಪಾಂಡೆ ಹಾಗೂ ಶಿವಂ ದುಬೆ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು.
ಕ್ರೀಸ್ ಕಚ್ಚಿ ನಿಂತಿದ್ದ ವಿಂಡೀಸ್ ಆಟಗಾರನನ್ನು ಕೊಹ್ಲಿ ಪೆವಿಲಿಯನ್ಗೆ ಅಟ್ಟಿದ್ದು ಈಗ ವೈರಲ್!
ಅದತಂತೆ ಅತ್ಯುತ್ತಮ ಆಟ ಪ್ರದರ್ಶಿಸಿದ ಪಾಂಡೆ ಅರ್ಧಶತಕ ಸಿಡಿಸಿ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದರು. ದುಬೆ ಕೂಡ ಪಾಂಡೆಗೆ ಭರ್ಜರಿ ಸಾತ್ ನೀಡಿದರು. ಇವರಿಬ್ಬರ ಬಿರುಸಿನ ಆಟದ ನೆರವಿನಿಂದ ಭಾರತ ಎ 27.5 ಓವರ್ನಲ್ಲೇ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕುವ ಮೂಲಕ ಗೆಲುವಿನ ನಗೆ ಬೀರಿತು. ಪಾಂಡೆ 59 ಎಸೆತಗಳಲ್ಲಿ (3 ಬೌಂಡರಿ, 5 ಸಿಕ್ಸರ್) 81 ರನ್ ಗಳಿಸಿ ಔಟ್ ಆದರೆ, ದುಬೆ 28 ಎಸೆತಗಳಲ್ಲಿ (2 ಬೌಂಡರಿ, 3 ಸಿಕ್ಸರ್) ಅಜೇಯ 45 ರನ್ ಬಾರಿಸಿದರು.
4 ವಿಕೆಟ್ಗಳ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಅಲ್ಲದೆ ಸರಣಿ ವಶ ಪಡಿಸಿಕೊಂಡಿದೆ.
ಇದಕ್ಕೂ ಮೊದಲು ಟಾಸ್ ಗೆದ್ದ ಬ್ಯಾಟಿಂಗ್ಗೆ ಇಳಿದ ಹರಿಣಗಳಿಗೆ ಆರಂಭದಲ್ಲೇ ದೀಪಕ್ ಚಹಾರ್ ಶಾಕ್ ನೀಡಿದರು. ರೀಜಾ ಹೆಂಡ್ರಿಕ್ಸ್ರನ್ನು 9 ರನ್ಗೆ ಪೆವಿಲಿಯನ್ಗೆ ಅಟ್ಟಿದರು. ಬಳಿಕ ಮಲನ್ ಹಾಗೂ ಮ್ಯಾಥ್ಯೂ ಬ್ರೀಥ್ಕ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮಲನ್ 37 ರನ್ ಗಳಿಸಿದರೆ, ಮ್ಯಾಥ್ಯೂ 36 ರನ್ ಬಾರಿಸಿದರು.
ಬಳಿಕ ಬಂದ ಬ್ಯಾಟ್ಸ್ಮನ್ಗಳ ಪೈಕಿ ನಾಯಕ ತೆಂಬ ಬವುಮಾ 27 ರನ್ ಕಲೆಹಾಕಿದರೆ, ಹೆನ್ರಿಚ್ ಕ್ಲಾಸೆನ್ 21 ಎಸೆತಗಳಲ್ಲಿ 4 ಸಿಕ್ಸ್ ಸಿಡಿಸಿ 44 ರನ್ ಚಚ್ಚಿದರು. ಪರಿಣಾಮ ಆಫ್ರಿಕಾ ಎ ನಿಗದಿತ 30 ಓವರ್ಗೆ 207 ರನ್ ಗಳಿಸಿತು. ಭಾರತ ಪರ ದೀಪಕ್ ಚಹಾರ್ ಹಾಗೂ ಕ್ರುನಾಲ್ ಪಾಂಡ್ಯ ತಲಾ 2 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.