Manish Pandey Marriage: ಕನ್ನಡಿಗನ ರಿಸೆಪ್ಷನ್​ನಲ್ಲಿ ಯುವಿ ಭರ್ಜರಿ ಸ್ಟೆಪ್; ವೈರಲ್ ಆಗುತ್ತಿದೆ ವಿಡಿಯೋ

ಮದುವೆಯ ಬಳಿಕ ಒಂದು ದಿನವೂ ವಿಶ್ರಾಂತಿ ಇಲ್ಲದೆ ಬ್ಯುಸಿಯಾಗಿರುವ ಪಾಂಡೆ, ಇಂದು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ.

news18-kannada
Updated:December 4, 2019, 1:50 PM IST
Manish Pandey Marriage: ಕನ್ನಡಿಗನ ರಿಸೆಪ್ಷನ್​ನಲ್ಲಿ ಯುವಿ ಭರ್ಜರಿ ಸ್ಟೆಪ್; ವೈರಲ್ ಆಗುತ್ತಿದೆ ವಿಡಿಯೋ
ಯುವರಾಜ್ ಸಿಂಗ್ ನೃತ್ಯ ಮಾಡುತ್ತಿರುವುದು
  • Share this:
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಮನೀಶ್ ಪಾಂಡೆ ಸೋಮವಾರ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ.

ಮದುವೆಯ ಬಳಿಕ ನಿನ್ನೆ ನಡೆದ ರಿಸೆಪ್ಷನ್​ನಲ್ಲಿ ಟೀಂ ಇಂಡಿಯಾದ ಕೆಲ ಮಾಜಿ ಹಾಗೂ ಹಾಲಿ ಆಟಗಾರರು ಪಾಲ್ಗೊಂಡಿದ್ದರು. ಎಲ್ಲರೂ ಸಖತ್ ಎಂಜಾಯ್ ಮಾಡಿದ್ದಾರೆ. ಅದರಲ್ಲು ಈ ಸಂಭ್ರಮಕ್ಕೆ ಹೆಚ್ಚು ಕಿಕ್ ಕೊಟ್ಟಿದ್ದು ಯುವರಾಜ್ ಸಿಂಗ್ ಡ್ಯಾನ್ಸ್.

Manish Pandey Marriage: Yuvraj Singh And Manish Pandey Set Dance Stage On Fire
ಮನೀಶ್ ಪಾಂಡೆ- ಆಶ್ರಿತಾ ಶೆಟ್ಟಿ ಜೊತೆ ಯುವರಾಜ್ ಸಿಂಗ್


IPL 2020: ಇಬ್ಬರು ಸ್ಟಾರ್ ಆಟಗಾರರು ಔಟ್; 2 ಸ್ಫೋಟಕ ಬ್ಯಾಟ್ಸ್​ಮನ್ಸ್​ ಇನ್; ಯಾರು ಗೊತ್ತಾ?

ಮುಂಬೈನ ದಿ ಲೀಲಾ ಹೊಟೇಲ್​ನಲ್ಲಿ ನಡೆದ ಮನೀಶ್ ಹಾಗೂ ಆಶ್ರಿತಾ ರಿಸೆಪ್ಷನ್​ನಲ್ಲಿ ಕನ್ನಡಿಗನ ಜೊತೆ ಭರ್ಜರಿ ಸ್ಟೆಪ್ ಹಾಕಿದ ಯುವಿ ನೆರೆದಿದ್ದವರನ್ನು ರಂಜಿಸಿದರು. ಪಾಂಡೆ ಜೊತೆ ಯುವಿ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 


 
View this post on Instagram
 

Nice dance #yuvrajsingh and #manishpandey #ashritashetty with my team #dholibros Rocking 🤘🤘🤘 performance


A post shared by Vijay Bhatt (@vijaybhatt888) on


ದಕ್ಷಿಣ ಭಾರತದ ಜನಪ್ರಿಯ ನಟಿ ಆಶ್ರಿತಾ, ತುಳು ಮತ್ತು ತಮಿಳು ಸೇರಿದಂತೆ ಈವರೆಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತುಳುವಿನ ತೆಲಿಕೆದ ಬೊಳ್ಳಿ(2012) ಸಿನಿಮಾ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಆಶ್ರಿತಾ ನಂತರದಲ್ಲಿ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ನಟನೆಯ ಉದಯಂ ಎನ್​ಹೆಚ್​​4, ಒರು ಕನ್ನಿಯುಂ ಮೂನು ಕಲಾವನಿಕಳುಂ, ಇಂದ್ರಜಿತ್ ಹಾಗೂ ನಾನ್​ ದಾನ್​​ ಶಿವ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕೋಚ್ ಸುಧೀಂದ್ರ ಶಿಂಧೆ ಬಂಧನ

ಮನೀಶ್ ಪಾಂಡೆ 23 ಅಂತರಾಷ್ಟ್ರೀಯ ಏಕದಿನ ಹಾಗೂ 32 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕ ಬಾರಿಸಿರುವ ಪಾಂಡೆ ದೇಶೀಯ ಕ್ರಿಕೆಟ್​ನಲ್ಲಿ ರನ್​ ಮಳೆಯೆ ಸುರಿಸಿದ್ದಾರೆ.

ಮದುವೆಯ ಬಳಿಕ ಒಂದು ದಿನವೂ ವಿಶ್ರಾಂತಿ ಇಲ್ಲದೆ ಬ್ಯುಸಿಯಾಗಿರುವ ಪಾಂಡೆ, ಇಂದು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ.

 

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading