ರಾಷ್ಟ್ರೀಯ ಟೇಬಲ್ ಟೆನೀಸ್ ತಾರೆ ಮನಿಕಾ ಬಾತ್ರಾ (Manika Batra) ತಮ್ಮ ತರಬೇತುದಾರರಾದ ಸೌಮ್ಯದೀಪ್ ರಾಯ್ ಅವರನ್ನು ದೂಷಿಸಿದ್ದು ಮಾರ್ಚ್ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಪಂದ್ಯವನ್ನು ಕೈಬಿಡುವಂತೆ ಸೌಮ್ಯದೀಪ್ ಮನಿಕಾ ಅವರಿಗೆ ಹೇಳಿದ್ದರು. ಟೋಕಿಯೊ ಕ್ರೀಡಾಕೂಟದ ಸಿಂಗಲ್ಸ್ ಸ್ಪರ್ಧೆಯಲ್ಲಿ ರಾಯ್ ಅವರ ಸಹಾಯವನ್ನು ಮನಿಕಾ ನಿರಾಕಸಿದ್ದಕ್ಕೆ ಮುಖ್ಯ ಕಾರಣ ಎಂದು ಟೆನಿಸ್ ಆಟಗಾರ್ತಿ ತಿಳಿಸಿದ್ದಾರೆ.
ಟೇಬಲ್ ಟೆನೀಸ್ ಫೆಡರೇಶನ್ ಆಫ್ ಇಂಡಿಯಾದ ಶೋಕಾಸ್ ನೋಟೀಸ್ಗೆ ಪ್ರತಿಕ್ರಿಯೆ ನೀಡಿರುವ ಮಣಿಕಾ, ರಾಯ್ ಅವರ ಸಹಕಾರವನ್ನು ಮನಿಕಾ ನಿರಾಕರಿಸಿದ್ದರಿಂದಲೇ ಆಟಕ್ಕೆ ಅಪಖ್ಯಾತಿಯುಂಟಾಗಿದೆ ಎಂಬ ಅಂಶವನ್ನು ಬಲವಾಗಿ ನಿರಾಕರಿಸಿದ್ದಾರೆ.
TTFI ಮೂಲಗಳು ತಿಳಿಸಿರುವಂತೆ, ಮ್ಯಾಚ್ ಫಿಕ್ಸಿಂಗ್ನಲ್ಲಿ ಪಾಲ್ಗೊಳ್ಳುವಂತೆ ಆಕೆಯನ್ನು ಕೇಳಿದ್ದಕ್ಕೆಯೇ ಆಕೆಗೆ ಪಂದ್ಯದಲ್ಲಿ ಗಮನಹರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ. ರಾಷ್ಟ್ರೀಯ ತರಬೇತುದಾರರ ಸಹಕಾರವನ್ನು ನಿರಾಕರಿಸಿದ್ದರ ಹಿಂದೆ ಹೆಚ್ಚು ಗಂಭೀರವಾದ ಕಾರಣವಿದ್ದು ತರಬೇತುದಾರರ ಮಧ್ಯಪ್ರವೇಶವನ್ನು ತಪ್ಪಿಸುವ ಅಗತ್ಯತೆ ನನಗಿತ್ತು ಎಂದು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ ಟಿಟಿಎಫ್ಐ ಕಾರ್ಯದರ್ಶಿ ಅರುಣ್ ಬ್ಯಾನರ್ಜಿ ಅವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಆರೋಪಿಸಿದ್ದಾರೆ.
ರಾಷ್ಟ್ರೀಯ ತರಬೇತುದಾರರು ಮಾರ್ಚ್ 2021 ರಲ್ಲಿ ದೋಹಾದಲ್ಲಿ ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ಅವರ ವಿದ್ಯಾರ್ಥಿಗೆ ಅವಕಾಶ ದೊರೆಯುವಂತೆ ಮಾಡಲು ಪಂದ್ಯವನ್ನು ಕೈಬಿಡುವಂತೆ ನನ್ನ ಮೇಲೆ ಒತ್ತಡ ಹೇರಿದರು ಒಟ್ಟಿನಲ್ಲಿ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗುವಂತೆ ನನಗೆ ಹೇಳಿದ್ದಾರೆ ಎಂಬುದಾಗಿ ಮನಿಕಾ ತನ್ನ ತರಬೇತುದಾರರ ವಿರುದ್ಧ ದೂರಿದ್ದಾರೆ. ಈ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಲು ರಾಯ್ ಅವರನ್ನು ಸಂಪರ್ಕಿಸಿದರೂ ರಾಯ್ ಲಭ್ಯವಿರಲಿಲ್ಲ ಎಂಬುದಾಗಿ ಟಿಟಿಎಫ್ಐ ತಿಳಿಸಿದೆ. ಆಟಗಾರನಾಗಿ ಈಗ ತೇರಬೇತುದಾರರಾಗಿರುವ ರಾಯ್ ಅವರನ್ನು ನಡೆಯುತ್ತಿರುವ ರಾಷ್ಟ್ರೀಯ ಕ್ಯಾಂಪ್ನಲ್ಲಿ ಭಾಗವಹಿಸಲು ಕೇಳಿರಲಿಲ್ಲ ಹಾಗೂ ತನ್ನ ಹೇಳಿಕೆಯನ್ನು ನೀಡಬೇಕಾಗಿ ರಾಯ್ ಅವರನ್ನು ಟಿಟಿಎಫ್ಐ ಹೇಳಿತ್ತು.
ಆರೋಪಗಳು ರಾಯ್ ವಿರುದ್ಧವಾಗಿವೆ. ಅವರು ಪ್ರತಿಕ್ರಿಯಿಸಬೇಕಾಗಿದೆ ತದನಂತರ ನಾವು ಮುಂದಿನ ಕ್ರಮವನ್ನು ಜಾರಿಗೊಳಿಸುತ್ತೇವೆ ಎಂದು ಮನಿಕಾ ಅವರು ಶೋಕಾಸ್ ನೋಟೀಸ್ಗೆ ನೀಡಿರುವ ಪ್ರತಿಕ್ರಿಯೆ ಕುರಿತು ಕೇಳಿದಾಗ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ರಾಯ್ ಅವರು ಚಿನ್ನದ ಪದಕ ವಿಜೇತರಾಗಿದ್ದರು ಹಾಗೂ ಅರ್ಜುನ ಪ್ರಶಸ್ತಿ ಪಡೆದ ಆಟಗಾರರು ಎನಿಸಿದ್ದರು. ರಾಯ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಮನಿಕಾ ಮತ್ತು ಸುತೀರ್ಥ ಮುಖರ್ಜಿ ಇಬ್ಬರೂ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು.
ಈ ಘಟನೆಯ ಕುರಿತು ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿರುವ ಮನಿಕಾ ಸೂಕ್ತ ಸಮಯದಲ್ಲಿ ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಲು ನಾನು ಸಿದ್ಧಳಿರುವೆ ಎಂದು ಮನಿಕಾ ತಿಳಿಸಿದ್ದಾರೆ. ರಾಷ್ಟ್ರೀಯ ತರಬೇತುದಾರರಾದ ರಾಯ್ ಅವರು ಮನಿಕಾ ಅವರನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡು 20 ನಿಮಿಷಗಳ ಕಾಲ ಸಂವಹನ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಒಲಿಂಪಿಕ್ಸ್ ಸಮಯದಲ್ಲಿ ಇಂತಹ ತರಬೇತುದಾರರಿಂದ ದೂರವಿರಲು ನಾನು ಪ್ರಯತ್ನಿಸಿದೆ ಏಕೆಂದರೆ ನಾನು ಭಾರತದ ಪರವಾಗಿ ಸ್ಪರ್ಧಿಸುತ್ತಿರುವೆ ಹಾಗಾಗಿ ದೇಶಕ್ಕೆ ಉತ್ತಮ ಸೇವೆಯನ್ನೊದಗಿಸುವ ನಿಟ್ಟಿನಲ್ಲಿ ರಾಯ್ ಅವರನ್ನು ತರಬೇತುದಾರರಾಗಿ ಬೇಡವೆಂದು ನಾನು ನಿರಾಕರಿಸಿದೆ ಎಂದು ಮನಿಕಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ