HOME » NEWS » Sports » CRICKET MAN OF THE MATCH IN BHOPALS CRICKET TOURNAMENT WINS FIVE LITRES OF PETROL AS PRIZE ZP

ದುಬಾರಿ ದುನಿಯಾದಲ್ಲಿ ಬದಲಾದ ಅವಾರ್ಡ್: ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ 5 ಲೀಟರ್ ಪೆಟ್ರೋಲ್..!

ಈ ವೈರಲ್ ಫೋಟೋಗೂ ಹಾಸ್ಯಭರಿತ ಕಮೆಂಟ್​ಗಳು ಕೂಡ ವ್ಯಕ್ತವಾಗುತ್ತಿದ್ದು, ಈ ವರ್ಷದ ಅತ್ಯಂತ ದುಬಾರಿ ಮ್ಯಾನ್ ಆಫ್ ದ ಮ್ಯಾಚ್ ಪಡೆದ ಆಟಗಾರ ಎಂದು ಹಲವರು ಕಮೆಂಟಿಸಿದ್ದಾರೆ.

news18-kannada
Updated:March 2, 2021, 9:31 PM IST
ದುಬಾರಿ ದುನಿಯಾದಲ್ಲಿ ಬದಲಾದ ಅವಾರ್ಡ್: ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ 5 ಲೀಟರ್ ಪೆಟ್ರೋಲ್..!
ವೈರಲ್ ಫೋಟೋ
  • Share this:
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಗಗನಕ್ಕೇರಿರುವುದು ಗೊತ್ತೇ ಇದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಮೀಮ್ಸ್​​ಗಳನ್ನು ನೀವು ನೋಡಿರುತ್ತೀರಿ. ಇದರ ಹೊರತಾಗಿಯೂ ಇದೀಗ ಕ್ರಿಕೆಟ್​ಗೆ ಸಂಬಂಧಿಸಿದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಹೌದು, ಭೋಪಾಲ್‌ನಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್​ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಆಗಿ 5 ಲೀಟರ್ ಪೆಟ್ರೋಲ್ ನೀಡಲಾಗಿತ್ತು. ಅದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸ್ಥಳೀಯ ಕ್ರಿಕೆಟಿಗ ಸಲಾವುದ್ದೀನ್ ಅಬ್ಬಾಸ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ 5 ಲೀಟರ್ ಪೆಟ್ರೋಲ್ ನೀಡಲಾಗಿದ್ದು, ಇದರ ಬೆನ್ನಲ್ಲೇ ಈ ಫೋಟೋ ಫೇಸ್​ಬುಕ್ ಹಾಗೂ ಟ್ವಿಟರ್​ನಲ್ಲಿ ಸದ್ದು ಮಾಡಲಾರಂಭಿಸಿದೆ.ಇನ್ನು ಈ ವೈರಲ್ ಫೋಟೋಗೂ ಹಾಸ್ಯಭರಿತ ಕಮೆಂಟ್​ಗಳು ಕೂಡ ವ್ಯಕ್ತವಾಗುತ್ತಿದ್ದು, ಈ ವರ್ಷದ ಅತ್ಯಂತ ದುಬಾರಿ ಮ್ಯಾನ್ ಆಫ್ ದ ಮ್ಯಾಚ್ ಪಡೆದ ಆಟಗಾರ. ಅಲ್ಲದೆ, ಈ ಪೆಟ್ರೋಲ್ ಪ್ರಶಸ್ತಿ ಐಪಿಎಲ್​ನಲ್ಲೂ ಮುಂದುವರೆಯಲಿದೆ ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಒಟ್ಟಿನಲ್ಲಿ ದುಬಾರಿ ದುನಿಯಾದಲ್ಲಿ ಕಾಲಕ್ಕೆ ತಕ್ಕಂತೆ ಪ್ರಶಸ್ತಿಗಳು ಕೂಡ ಬದಲಾಗುತ್ತಿರುವುದು ಮಾತ್ರ ಹಾಸ್ಯಸ್ಪದ.
Published by: zahir
First published: March 2, 2021, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories