Mahendra Singh Dhoni: ನಿವೃತ್ತಿ ಬೆನ್ನಲ್ಲೇ ಅಮೆರಿಕ ಮೂಲಕ ಐಷಾರಾಮಿ ಕಾರೊಂದನ್ನ ಖರೀದಿಸಿದ ಮಾಹಿ!

Dhoni:ಧೋನಿಗೆ ಕ್ರಿಕೆಟ್​ ಎಷ್ಟು ಇಷ್ಟವೋ ಅಷ್ಟೇ ಕಾರು, ಬೈಕ್​ಗಳನ್ನು ಇಷ್ಟಪಡುತ್ತಾರೆ. ತಮ್ಮ ಮನೆಯಲ್ಲಿ ಹಲವಾರು ಕಾರುಗಳನ್ನು ಬೈಕ್​ಗಳ ಕಲೆಕ್ಷನ್​ ಇರಿಸಿದ್ದಾರೆ. ಐಷಾರಾಮಿ ಕಾರು, ಬೈಕ್​ಗಳಿಂದ ಹಿಡಿದು ಆರ್​ಎಕ್ಸ್​100 ಬೈಕ್​ ಕೂಡ  ಧೋನಿ  ಬಳಿಯಿದೆ. ಇದೀಗ ನಿವೃತ್ತಿ ಹೊಂದಿದ್ದ ನಂತರ ಧೋನಿ ಪಾಂಟಿಯಾಕ್​ ಫೈರ್​​ಬರ್ಡ್​ ಟ್ರಾನ್ಸ್​​ ಎಎಮ್​ ಕಾರನ್ನು ಖರೀದಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ

ಮಹೇಂದ್ರ ಸಿಂಗ್​ ಧೋನಿ

 • Share this:
  ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಇದೇ ಆಗಸ್ಟ್​ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿದರು. ಧೋನಿ ಈ ನಿರ್ಧಾರ ಅನೇಕರಿಗೆ ಬೇಸರ ತರಿಸಿತ್ತು. ಇದ್ದಕ್ಕಿದ್ದಂತೆ ಧೋನಿ ಯಾಕೆ ನಿವೃತ್ತಿ ಘೋಷಿಸಿದರು? ಎಂದು ಬೇಸರ ಹೊರಹಾಕಿದರು.

  ಆದರೆ ನಿವೃತ್ತಿ ನಂತರ ಧೋನಿ ಕುಟುಂಬದ ಜೊತೆಗೆ ಕಾಲ ಕಳೆಯಲು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅದರ ಜೊತೆಗೆ ಮುಂಬರುವ ಐಪಿಎಲ್​ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವಲ್ಲಿ ಧೋನಿ ತಮ್ಮಿಷ್ಟದ ಕಾರೊಂದನ್ನು ಖರೀದಿದ್ದಾರೆ.

  ಹೌದು. ಧೋನಿಗೆ ಕ್ರಿಕೆಟ್​ ಎಷ್ಟು ಇಷ್ಟವೋ ಅಷ್ಟೇ ಕಾರು, ಬೈಕ್​ಗಳನ್ನು ಇಷ್ಟಪಡುತ್ತಾರೆ. ತಮ್ಮ ಮನೆಯಲ್ಲಿ ಹಲವಾರು ಕಾರುಗಳನ್ನು ಬೈಕ್​ಗಳ ಕಲೆಕ್ಷನ್​ ಇರಿಸಿದ್ದಾರೆ. ಐಷಾರಾಮಿ ಕಾರು, ಬೈಕ್​ಗಳಿಂದ ಹಿಡಿದು ಆರ್​ಎಕ್ಸ್​100 ಬೈಕ್​ ಕೂಡ  ಧೋನಿ  ಬಳಿಯಿದೆ. ಇದೀಗ ನಿವೃತ್ತಿ ಹೊಂದಿದ್ದ ನಂತರ ಧೋನಿ ಪಾಂಟಿಯಾಕ್​ ಫೈರ್​​ಬರ್ಡ್​ ಟ್ರಾನ್ಸ್​​ ಎಎಮ್​ ಕಾರನ್ನು ಖರೀದಿಸಿದ್ದಾರೆ.


  View this post on Instagram

  Major Mahi missing @mahi7781 !


  A post shared by Sakshi Singh Dhoni (@sakshisingh_r) on


  ಅಮೆರಿಕನ್​ ಮೂಲಕ ಪಾಂಟಿಯಾಕ್​ ಫೈರ್​​ಬರ್ಡ್​​ ಕಾರು ವಿ8 ಎಂಜಿನ್​ ಹೊಂದಿದೆ. 6.6 ಲೀಟರ್​​ ಸಾಮರ್ಥ್ಯ ಈ ಕಾರು ಗರಿಷ್ಠ 365ಬಿಎಸ್​ಪಿ ಟಾರ್ಕ್​ ಉತ್ಪಾದಿಸುತ್ತದೆ. 4 ಗೇರ್​ಗಳನ್ನು ಹೊಂದಿದೆ.

  ಇನ್ನು ಮಾಹಿ ಬಳಿಯಲ್ಲಿ ಪೋರ್ಶೆ ಬಾಕ್ಸರ್​​, ಫೆರಾರಿ 500 ಜಿಟಿಒ, ಆಡಿ ಕ್ಯೂ7, ಮಹೀಂದ್ರಾ ಸ್ಕಾರ್ಪಿಯೋ, ಹಮ್ಮರ್​​, ರೋಲ್ಸ್​ ರಾಯ್​ ಕಾರುಗಳಿವೆ. ಕಳೆದ ವರ್ಷ ನಿಸಾನ್​​ ಜಿಂಗಾ ಮತ್ತು ಜೀಪ್​​ ಖರೀದಿಸಿದ್ದಾರೆ. ಇನ್ನು ಸುಜುಕಿ ಶಾಟ್​​ಗನ್​​, ಯಮಹಾ ಥಂಡರ್​​ಕ್ಯಾಟ್​​​​, ಹಾರ್ಲಿ ಡೆವಿಡ್​ಸನ್​ ಫ್ಯಾಟ್​ಬಾಯ್​​, ಕವಾಸಕಿ ನಿಂಜಾ ಹೆಚ್​2, ಕವಾಸಕಿ ಝೆಡ್​​ಎಕ್ಸ್​​-14 ಆರ್​, ಸುಜುಕಿ ಹಯಾಬುಸ, ಟಿವಿಎಸ್​ ಅಪಾಚೆ ಆರ್​​ 310 ಬೈಕ್​ಗಳಿವೆ.
  Published by:Harshith AS
  First published: