Cricket Tragedy- ಮ್ಯಾನ್ ಆಫ್ ದ ಮ್ಯಾಚ್ ಪಡೆದ ಬಳಿಕ ಗ್ರೌಂಡ್​ನಲ್ಲೇ ಸಾವನ್ನಪ್ಪಿದ ‘ಮಹಾ’ ಕ್ರಿಕೆಟಿಗ

Cricketer’s death on the ground- ಮಹಾರಾಷ್ಟ್ರದಲ್ಲಿ ಕ್ರಿಕೆಟ್ ಆಡುತ್ತಲೇ ಆಟಗಾರ ಸಾವನ್ನಪ್ಪಿರುವ ಮೂರನೇ ಘಟನೆ ಈ ವರ್ಷದಲ್ಲಿ ವರದಿಯಾಗಿದೆ. ಕೊಲ್ಹಾಪುರ ಜಿಲ್ಲೆಯ ಅಮರ್ ಸಾಬ್ಲೆ ಹೃದಯಾಘಾತದಿಂದ ಮೃತಪಟ್ಟ ಕ್ರಿಕೆಟಿಗ.

ಅಮರ್ ಸಾಬ್ಲೆ

ಅಮರ್ ಸಾಬ್ಲೆ

 • Share this:
  ಕೊಲ್ಹಾಪುರ: ಆಟಗಾರರು ಆಟದ ಮೈದಾನದಲ್ಲೇ ಸಾವನ್ನಪ್ಪಿದ ಹಲವು ಘಟನೆಗಳು (Incidents of Cricket Players death on ground) ನಮ್ಮ ಮುಂದಿವೆ. ಅಂಥದ್ದೇ ಒಂದು ಮನಮಿಡಿಯುವ ಘಟನೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ (Kolhapur district) ಜಿಲ್ಲೆಯಲ್ಲಿ ನಡೆದಿದೆ. ಹಾತಕಣಂಗಲೆ ತಾಲೂಕಿನ ಅಂಬಾಪ್ ಗ್ರಾಮದಲ್ಲಿ (Ambap village in Hatkanangle Taluk) ಕ್ರಿಕೆಟ್ ಮೈದಾನದಲ್ಲೇ ಆಟಗಾರನೊಬ್ಬ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. 32 ವರ್ಷದ ಅಮರ್ ಸಾಬ್ಲೆ (Amar Sable) ನಿಧನ ಹೊಂದಿದ ಕ್ರಿಕೆಟಿಗ. ದುರದೃಷ್ಟ ಎಂದರೆ ಕ್ರಿಕೆಟ್ ಪಂದ್ಯದಲ್ಲಿ ಈತ ಆಕರ್ಷಕ ಆಟವಾಗಿ ಪಂದ್ಯ ಶ್ರೇಷ್ಠ ಗೌರವ ಪಡೆದಿದ್ದ. ಮ್ಯಾನ್ ಆಫ್ ದ ಮ್ಯಾಚ್ ಪಡೆದ ಸ್ವಲ್ಪ ಹೊತ್ತಿನ ಬಳಿಕ ಈತನಿಗೆ ಹೃದಯಾಘಾತ ಆಗಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ಘಟನೆಯಿಂದ ಸ್ಥಳೀಯ ಜನರು ಶಾಕ್ ಆಗಿದ್ದಾರೆ.

  ನಿನ್ನೆ ಸೋಮವಾರ ಸಂಜೆ ಮೃತ ಪಟ್ಟ ಅಮರ್ ಸಾಬ್ಲೆ ಕೊಲ್ಹಾಪುರ ಜಿಲ್ಲೆಯ ಹಾತಕಣಂಗಲೆ ತಾಲೂಕಿನ ಅಂಬಾಪವಾಡಿ ಗ್ರಾಮದ ನಿವಾಸಿ ಎನ್ನಲಾಗಿದೆ. ಅಂಬಾಪ ಸ್ಪೋರ್ಟ್ಸ್ ಮತ್ತು ಅಶೋಕ್ ರಾವ್ ಮಾನೆ ಗ್ರೂಪ್ ಜಂಟಿಯಾಗಿ ಆಯೋಜಿಸಿದ್ದ ಅಂಬಾಪ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಅಂಬಾಪ್ ಗ್ರಾಮದ ರಾಜೇಂದ್ರ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದವು.

  ಅಮರ್ ಸಾಬ್ಲೆ ಅಂಬಾಪವಾಡಿ ರಾಜಮಂಗಲ್ ಸ್ಪೋರ್ಟ್ಸ್ ಕ್ಲಬ್ ತಂಡದ ಪರ ಆಡಿ ಆಲ್​ರೌಂಡ್ ಪ್ರದರ್ಶನ ನೀಡಿದ್ದರು. ಮ್ಯಾನ್ ಆಫ್ ದ ಮ್ಯಾಚ್ ಪುರಸ್ಕಾರ ಪಡೆದ ಬಳಿಕ ಅಮರ್​ಗೆ ದಿಢೀರನೇ ಹೃದಯ ಸ್ತಂಭನವಾಗಿದೆ. ನೆಲಕ್ಕೆ ಕುಸಿದುಬಿದ್ದರು. ಆಗ ಟೂರ್ನಿಯ ಆಯೋಜಕರು ಮತ್ತು ಇತರ ಆಟಗಾರರು ಅಮರ್ ಅವರನ್ನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರು. ಅದು ಉಪಯೋಗಕ್ಕೆ ಬರಲಿಲ್ಲ.

  ಅಮರ್ ಅವರನ್ನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಉಸಿರು ನಿಂತುಹೋಗಿತ್ತು. ವೈದ್ಯರು ಸಾವಾಗಿರುವುದನ್ನು ದೃಢಪಡಿಸಿದರು. ಅದೇ ದಿನ ರಾತ್ರಿ ಶವಪರೀಕ್ಷೆ ನಡೆಸಿ ಅಂಬಾಪವಾಡಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

  ಇದನ್ನೂ ಓದಿ: ಭಾರತ ಟಿ20 ಮತ್ತು ಎ ತಂಡಗಳ ಪ್ರಕಟ; ಕೆಕೆಆರ್ ಸ್ಟಾರ್​ಗೆ ಚಾನ್ಸ್; ಟೀಮ್​ನಲ್ಲಿಲ್ಲ ಕೊಹ್ಲಿ ಸೇರಿ ಹಲವರು

  ಅಂಬಾಪವಾಡಿ ಗ್ರಾಮದ ಸುತ್ತಮುತ್ತ ಅಮರ್ ಸಾಬ್ಲೆ ಕ್ರಿಕೆಟಿಗನಾಗಿ ಖ್ಯಾತನಾಮರಾಗಿದ್ದರು. 32 ವರ್ಷದ ಅವರು ಫಿಟ್ ಅಂಡ್ ಫೈನ್ ಕೂಡ ಇದ್ದರು. ಆರೋಗ್ಯದ ಬಗ್ಗೆ ಬಹಳ ಕಾಳಜಿ ಇದ್ದ ಆತ ದಿಢೀರನೇ ಸಾವನ್ನಪ್ಪಿರುವುದು ಸ್ಥಳೀಯರನ್ನ ಆಶ್ಚರ್ಯ ಚಕಿತರನ್ನಾಗಿಸಿದೆ.

  ಮಹಾರಾಷ್ಟ್ರದಲ್ಲಿ ಈ ವರ್ಷ ಇಂಥ ಪ್ರಕರಣ ಮೂರನೆಯದು:

  ಈ ವರ್ಷ ಫೆಬ್ರವರಿಯಲ್ಲಿ ಇದೇ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಕ್ರಿಕೆಟಿಗನೊಬ್ಬ ಆಟ ಆಡುತ್ತಲೇ ಹಾರ್ಟ್ ಅಟ್ಯಾಕ್​ನಿಂದ ಮೃತಪಟ್ಟ ಘಟನೆಯ ನೆನಪು ಇನ್ನೂ ಹಸಿರಾಗಿದೆ. ಜುನ್ನಾರ್ ಸಿಟಿಯ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಈ ಘಟನೆ ನಡೆದಿತ್ತು. ನಾನ್​ಸ್ಟ್ರೈಕರ್ ಕ್ರೀಸ್​ನಲ್ಲಿದ್ದ ಆ ಆಟಗಾರ ದಿಢೀರನೇ ಕುಸಿತು ಪ್ರಜ್ಞೆತಪ್ಪಿ ಸಾವನ್ನಪ್ಪಿದ್ದ. ಸಾಯುವ ಮುನ್ನ ಒಂದು ಕ್ಷಣ ಮೊದಲು ಆತ ಅಂಪೈರ್ ಜೊತೆ ಮತ್ತು ಕ್ರೀಸ್​ನಲ್ಲಿದ್ದ ಸಹ-ಬ್ಯಾಟರ್ ಜೊತೆ ಮಾತನಾಡಿದ್ದ. ಓವರ್ ಮುಗಿಯಲು ಇನ್ನು ಎಷ್ಟು ಬಾಲ್ ಇದೆ ಎಂದು ಕೇಳಿದ್ದ. ಅದಾಗಿ ಕ್ಷಣದ ಬಳಿಕ ಸಾವನ್ನಪ್ಪಿದ್ದ. ಆತನ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ.

  ಇದನ್ನೂ ಓದಿ: Bowling record- ಸ್ಪಿನ್ ಜೋಡಿ ಕಮಾಲ್; 11 ಓವರ್ 7 ರನ್ 10 ವಿಕೆಟ್

  ಜನವರಿಯಲ್ಲಿ ಇನ್ನೊಂದು ಘಟನೆ:

  ಈ ವರ್ಷ ಜನವರಿ ತಿಂಗಳಲ್ಲಿ 25 ವರ್ಷದ ರಮಣ್ ಗಾಯಕ್ವಾಡ್ ಎಂಬ ಕ್ರಿಕೆಟಿಗ ಮೈದಾನದಲ್ಲೇ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದ. ಆತನ ಸಾವಿಗೂ ಕೂಡ ಹೃದಯಾಘಾತವೇ ಕಾರಣ ಎನ್ನಲಾಗಿದೆ.
  Published by:Vijayasarthy SN
  First published: