VIDEO: 1 ಎಸೆತದಲ್ಲಿ ಗೆಲ್ಲಲು ಬೇಕು 6 ರನ್: ಬ್ಯಾಟ್ಸ್​ಮನ್​ ಬಾಲ್ ಮುಟ್ಟದೆ ಪಂದ್ಯ ಗೆಲ್ಲಿಸಿಕೊಟ್ಟ; ಹೇಗೆ ಗೊತ್ತಾ?

ಸದ್ಯ ಈ ಹಳೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವರು ಇದೊಂದು ಮ್ಯಾಚ್ ಫಿಕ್ಸಿಂಗ್​ ಪಂದ್ಯವೆಂದರೆ ಇನ್ನೂ ಕೆಲವರು ಒಂದೂ ಬಾಲ್ ಟಚ್ ಮಾಡದ ಬ್ಯಾಟ್ಸ್​ಮನ್​ ಅನ್ನು ಹಾಡಿಹೊಗಳಿದ್ದಾರೆ.

news18-kannada
Updated:March 16, 2020, 3:12 PM IST
VIDEO: 1 ಎಸೆತದಲ್ಲಿ ಗೆಲ್ಲಲು ಬೇಕು 6 ರನ್: ಬ್ಯಾಟ್ಸ್​ಮನ್​ ಬಾಲ್ ಮುಟ್ಟದೆ ಪಂದ್ಯ ಗೆಲ್ಲಿಸಿಕೊಟ್ಟ; ಹೇಗೆ ಗೊತ್ತಾ?
ಫೋಟೋ: ಸ್ಕ್ರೀನ್​ಶಾಟ್.
  • Share this:
ಬೆಂಗಳೂರು (ಮಾ. 16): ಕ್ರಿಕೆಟ್ ಇತಿಹಾಸದಲ್ಲಿ ಅದೆಷ್ಟೊ ಅಚ್ಚರಿಯ ವಿಷಯಗಳು ನಡೆಯುತ್ತಲೇ ಇರುತ್ತವೆ. ಕೊನೆಯ ಒಂದು ಎಸೆತದಲ್ಲಿ ಗೆಲ್ಲಲು 6 ರನ್ ಬೇಕಿದ್ದಾದ ಬ್ಯಾಟ್ಸ್​ಮನ್​​ ಅದ್ಭುತ ಸಿಕ್ಸ್​ ಸಿಡಿಸಿ ಗೆಲುವು ಸಾಧಿಸಿರುವ ಘಟನೆಗಳು ನಡೆದಿವೆ. ಆದರೆ, ಇಲ್ಲಿ ಅಚ್ಚರಿ ಎಂಬಂತೆ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್ ಬೇಕಿದ್ದಾಗ ಆ ಒಂದು ಎಸೆತ ಪೂರ್ಣಗೊಳ್ಳದೆ ಪಂದ್ಯ ಗೆದ್ದ ಅಪರೂಪದ ಘಟನೆ ನಡೆದಿದೆ.

ಮಹಾರಾಷ್ಟ್ರದಲ್ಲಿ ನಡೆದ ಆದರ್ಶ್​ ಕ್ರಿಕೆಟ್ ಕ್ಷಬ್ ಪಂದ್ಯಾವಳಿಯಲ್ಲಿ ಈ ರೋಚಕ ಘಟನೆ ನಡೆದಿದೆ. 5 ಓವರ್​ಗಳ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಆಂಧ್ರ ಪ್ರದೇಶದ ಜುನಿ ದೊಂಬಿ ತಂಡ 75 ರನ್ ಕಲೆಹಾಕಿತ್ತು.

76 ರನ್​ಗಳ ಗುರಿ ಬೆನ್ನತ್ತಿದ ಮಹಾರಾಷ್ಟ್ರ ತಂಡ 4.5 ಓವರ್​​​ನಲ್ಲಿ 70 ರನ್ ಬಾರಿಸಿತು. ಈ ಮೂಲಕ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್​ಗಳ ಅವಶ್ಯಕತೆಯಿತ್ತು. ಬ್ಯಾಟ್ಸ್​ಮನ್​ ಸಿಕ್ಸ್​ ಸಿಡಿಸಿದರೆ ಮಾತ್ರ ಗೆಲುವು ಮಹಾರಷ್ಟ್ರದ ಪಾಲಾಗುತ್ತದೆ.

IPL ಆರಂಭ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಿದೆ RCB?; ವೈರಲ್ ಆಗುತ್ತಿದೆ ಹೊಸ ಜೆರ್ಸಿ!

ಆದರೆ, ಬ್ಯಾಟ್ಸ್​ಮನ್​ ಬಾಲ್ ಟಚ್ ಮಾಡಲೇ ಇಲ್ಲ. ಆದರೂ, ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ. ಅದು ಕೂಡ ಬಾಕಿ ಇದ್ದ ಆ ಒಂದು ಬಾಲ್ ಉಳಿಸಿ. ಕೊನೆಯ ಒಂದು ಬಾಲ್ ಎಸೆಯಬೇಕಿದ್ದ ಬೌಲರ್​ ಸತತ ಆರು ವೈಡ್ ಬಾಲ್ ಎಸೆದು ಎದುರಾಳಿ ತಂಡಕ್ಕೆ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ. ಕೊನೆಯ ಓವರ್​ನ ಐದು ಎಸೆತಗಳನ್ನು ಸರಿಯಾಗೆ ಎಸೆದ ಬೌಲರ್​​ ಕೊನೆಯ ಎಸೆತವನ್ನು ಎಸೆಯಲು ಪರದಾಡಿ ತಮ್ಮ ತಂಡದ ಸೋಲಿಗೆ ಕಾರಣನಾದ.





ಸದ್ಯ ಈ ಹಳೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವರು ಇದೊಂದು ಮ್ಯಾಚ್ ಫಿಕ್ಸಿಂಗ್​ ಪಂದ್ಯವೆಂದರೆ ಇನ್ನೂ ಕೆಲವರು ಒಂದೂ ಬಾಲ್ ಟಚ್ ಮಾಡದ ಬ್ಯಾಟ್ಸ್​ಮನ್​ ಅನ್ನು ಹಾಡಿಹೊಗಳಿದ್ದಾರೆ.

ಕೊರೋನಾ ಸೋಂಕಿತರಿಗಾಗಿ ಸ್ವಂತ ಹೊಟೇಲನ್ನೇ ಆಸ್ಪತ್ರೆಯನ್ನಾಗಿಸಿದ ಕ್ರಿಸ್ಟಿಯಾನೋ ರೊನಾಲ್ಡೊ!















Published by: Vinay Bhat
First published: March 16, 2020, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading