Hardik Pandya: ನಮ್ಮ ಕುಟುಂಬದತ್ತ ನೋಡಿ: ಕೊಹ್ಲಿಗೆ ಪರೋಕ್ಷ ಸಂದೇಶ ರವಾನಿಸಿದ ಪಾಂಡ್ಯ

Hardik Pandya, Virat Kohli

Hardik Pandya, Virat Kohli

ಅಂತಹ ಆಟಗಾರರು ಯಾರಿದ್ದಾರೆ ಎಂಬ ಪ್ರಶ್ನೆಗಳು ಸಹ ಹುಟ್ಟಿಕೊಂಡಿದೆ. ಏಕೆಂದರೆ 2019ರ ವಿಶ್ವಕಪ್ ತಂಡದಲ್ಲಿ ಆಲ್​ರೌಂಡರ್​ ಆಗಿ ಕಾಣಿಸಿಕೊಂಡ ವಿಜಯ್ ಶಂಕರ್ ಸಂಪೂರ್ಣವಾಗಿ ವಿಫಲರಾಗಿದ್ದರು.

  • Share this:

    ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ವಶಪಡಿಸಿಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2 ಜಯ ಸಾಧಿಸುವ ಮೂಲಕ ಫಿಂಚ್ ಪಡೆ ಕೊಹ್ಲಿ ಬಳಗಕ್ಕೆ ಶಾಕ್ ನೀಡಿದ್ದಾರೆ. ಈ ಎರಡು ಸೋಲುಗಳ ಬೆನ್ನಲ್ಲೇ ಟೀಮ್ ಇಂಡಿಯಾ ಆಲ್​ರೌಂಡರ್​ಗಳ ಚರ್ಚೆಗಳು ಶುರುವಾಗಿದೆ. ಏಕೆಂದರೆ ತಂಡದಲ್ಲಿ 6ನೇ ಬೌಲರ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅತ್ತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇದ್ದರೂ ಬೌಲಿಂಗ್ ಮಾಡಲು ಸಂಪೂರ್ಣ ಫಿಟ್ ಆಗಿಲ್ಲ. ಇದಾಗ್ಯೂ ಮತ್ತೋರ್ವ ಆಲ್​ರೌಂಡರ್​ನ್ನು ಆಡಿಸುವುದರ ಮೂಲಕ ವಿರಾಟ್ ಕೊಹ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.


    ಆದರೆ ಅಂತಹ ಆಟಗಾರರು ಯಾರಿದ್ದಾರೆ ಎಂಬ ಪ್ರಶ್ನೆಗಳು ಸಹ ಹುಟ್ಟಿಕೊಂಡಿದೆ. ಏಕೆಂದರೆ 2019ರ ವಿಶ್ವಕಪ್ ತಂಡದಲ್ಲಿ ಆಲ್​ರೌಂಡರ್​ ಆಗಿ ಕಾಣಿಸಿಕೊಂಡ ವಿಜಯ್ ಶಂಕರ್ ಸಂಪೂರ್ಣವಾಗಿ ವಿಫಲರಾಗಿದ್ದರು. ಇದಾಗ್ಯೂ ಮತ್ತೋರ್ವ ಆಲ್​ರೌಂಡರ್ ಪ್ರಯೋಗಕ್ಕೆ ಟೀಮ್ ಇಂಡಿಯಾ ಮುಂದಾಗಲಿಲ್ಲ.


    ಇದೇ ಈಗ ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಗುತ್ತಿದೆ. ಐವರು ಬೌಲರ್​ಗಳೊಂದಿಗೆ ಕಣಕ್ಕಿಳಿಯುತ್ತಿರುವ ಭಾರತ ತಂಡಕ್ಕೆ ಪಾರ್ಟ್​ ಟೈಮ್ ಬೌಲರ್ ಅವಶ್ಯಕತೆಯಿದೆ. ಈ ಬಗ್ಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ಹೌದು, ಐದು ಬೌಲರ್​ಗಳೊಂದಿಗೆ ಆಡುವುದು ಕಷ್ಟವಾಗುತ್ತದೆ. ಹೀಗಾಗಿ ಅಂತಹ ಆಟಗಾರನೊಬ್ಬನನ್ನು ಕಂಡುಕೊಳ್ಳಬೇಕಿದೆ. ಅಂತಹ ಒಬ್ಬ ಆಟಗಾರ ನಮ್ಮ ಕುಟುಂಬದಲ್ಲಿ ಆಡಲು ಕಾಯುತ್ತಿದ್ದಾರೆ ಎಂದು ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಣ್ಣ ಕೃಣಾಲ್‌ ಪಾಂಡ್ಯರನ್ನು ಯಾಕೆ ಪರಿಗಣಿಸಬಾರದು ಎಂಬ ಸಂದೇಶವನ್ನು ರವಾನಿಸಿದ್ದಾರೆ.


    ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ನವದೀಪ್ ಸೈನಿ ದುಬಾರಿಯಾಗಿದ್ದರು. ಹೀಗಾಗಿ ಅನಿವಾರ್ಯವಾಗಿ ಹಾರ್ದಿಕ್ ಪಾಂಡ್ಯ ಬಾಲ್ ಮಾಡಬೇಕಾಯಿತು. ಕೇವಲ ನಾಲ್ಕು ಓವರ್ ಬೌಲಿಂಗ್ ಮಾಡಿದ ಪಾಂಡ್ಯ ಒಂದು ವಿಕೆಟ್ ಕಬಳಿಸಿದರು. ಅಷ್ಟೇ ಅಲ್ಲದೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಂದ ಕೂಡ ಕೊಹ್ಲಿ ಒಂದು ಓವರ್ ಬೌಲಿಂಗ್ ಮಾಡಿಸಿದ್ದರು.


    ಇದನ್ನೂ ಓದಿ:  ನಾನು ಬ್ಯಾಟಿಂಗ್ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ..!

    Published by:zahir
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು