Lok Sabha Election Result 2019: ದೇಶದಲ್ಲಿ ಮೋದಿ ಎರಡನೇ ಇನ್ನಿಂಗ್ಸ್​; ಕ್ರಿಕೆಟಿಗರಿಂದ ಅಭಿನಂದನೆಗಳ ಮಹಾಪೂರ

2019 Election Result: ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಂತೆಯೆ ಎಲ್​ಕೆ ಆಡ್ವಾಣಿ ಕ್ಷೇತ್ರವಾಗಿದ್ದ ವಡೋದರವದಲ್ಲಿ ಅಮಿತ್​ ಷಾ ಸ್ಪರ್ಧೆ ಬರೋಬ್ಬರಿ 5.43 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Vinay Bhat | news18
Updated:May 23, 2019, 7:24 PM IST
Lok Sabha Election Result 2019: ದೇಶದಲ್ಲಿ ಮೋದಿ ಎರಡನೇ ಇನ್ನಿಂಗ್ಸ್​; ಕ್ರಿಕೆಟಿಗರಿಂದ ಅಭಿನಂದನೆಗಳ ಮಹಾಪೂರ
ನರೇಂದ್ರ ಮೋದಿ ಹಾಗೂ ವಿರೇಂದ್ರ ಸೆಹ್ವಾಗ್
  • News18
  • Last Updated: May 23, 2019, 7:24 PM IST
  • Share this:
ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ಎನ್​ಡಿಎ ಉತ್ತಮ ಪ್ರದರ್ಶನ ನೀಡಿದೆ. ಈ ಮೂಲಕ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ವಿರುದ್ಧ ಗೆಲ್ಲಲು ಮೈತ್ರಿಯ ಮೊರೆ ಹೋಗಿದ್ದ ಕಾಂಗ್ರೆಸ್​-ಜೆಡಿಎಸ್​ಗೆ ಭಾರೀ ಆಘಾತ ಉಂಟಾಗಿದೆ. ಕಾಂಗ್ರೆಸ್​ ಒಂದು ಹಾಗೂ ಜೆಡಿಎಸ್​ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಂತೆಯೆ ಎಲ್​ಕೆ ಆಡ್ವಾಣಿ ಕ್ಷೇತ್ರವಾಗಿದ್ದ ವಡೋದರವದಲ್ಲಿ ಅಮಿತ್​ ಷಾ ಸ್ಪರ್ಧೆ ಮಾಡಿ ಬರೋಬ್ಬರಿ 5.43 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಹಿನ್ನಲೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಅನೇಕರಿಗೆ ಕ್ರಿಕೆಟಿಗರು ಟ್ವಿಟ್ಟರ್​​ನಲ್ಲಿ ಶುಭ ಕೋರಿದ್ದಾರೆ.

ವಿರೇಂದ್ರ ಸೇಹ್ವಾಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ​, ‘ಭಾರತ ಜಯ ಸಾಧಿಸಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಇಂದು ತನ್ನ ಆದೇಶ ನೀಡಿದೆ. ಈ ಗೆಲುವಿನ ನಾಯಕರಾದ ನರೇಂದ್ರ ಮೋದಿಯವರಿಗೆ ಅಭಿನಂದನೆ. ನಿಮ್ಮ ಎರಡನೇ ಇನ್ನಿಂಗ್ಸ್ ಮತ್ತಷ್ಟು ಅದ್ಭುತವಾಗಿರಲಿ, ಭಾರತ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ದಿ ಯುನೈಟರ್ ಇನ್ ಚೀಫ್ ಆಫ್ ಇಂಡಿಯಾ’; ಜಾತಿ, ಧರ್ಮ, ಪ್ರಾದೇಶಿಕತೆಗೆ ಅಂಟಿಕೊಂಡಿದ್ದ ಭಾರತ ಚುನಾವಣೆಗೆ ಮೋದಿಯಿಂದ ಹೊಸ ಭಾಷ್ಯ

 ಇನ್ನು ರವೀಂದ್ರ ಜಡೇಜಾ ಕೂಡಾ ಟ್ವೀಟ್​ ಮಾಡಿದ್ದು, ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ‘ಈ ಅಭೂತಪೂರ್ವ ಗೆಲುವಿಗೆ ಮೋದಿಯವರಿಗೆ ಅಭಿನಂದನೆ. ಈ ಜಯ ಭರವಸೆ, ಸುಭದ್ರತೆ, ಏಳಿಗೆಯ ಚಿಹ್ನೆ ಮಾತ್ರವಲ್ಲ ನಂಬಿಕೆಯಿಲ್ಲದವರ ಮೇಲಿನ ನಂಬಿಕೆಯ ಗೆಲುವು. ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆ. ನಮಗೆಲ್ಲರಿಗೂ ಮಾರ್ಗದರ್ಶಿ ಶಕ್ತಿಯಾಗಿರುವುದಕ್ಕೆ ಧನ್ಯವಾದಗಳು' ಎಂದಿದ್ದಾರೆ.ಅಂತೆಯೆ ಹರ್ಭಜನ್​ ಸಿಂಗ್​ ಕೂಡ ಟ್ವೀಟ್​ ಮಾಡಿದ್ದು, ಇದೆ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಗೌತಮ್​ ಗಂಭೀರ್​ಗೆ ಅಭಿನಂಧನೆ ಸಲ್ಲಿಸಿದ್ದಾರೆ. ಜೊತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಹಾಗೂ ಪ್ರಧಾನಿ ಮೋದಿ ಅವರಿಗೆ ಅಭಿನಂದಿಸಿದ್ದಾರೆ.

  

 First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ