• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ಸೂಪರ್​ ಮ್ಯಾನ್​ನಂತೆ ಕ್ಯಾಚ್ ಹಿಡಿದು ಪ್ರೇಕ್ಷಕರ ನಿಬ್ಬೆರಗಾಗಿಸಿದ ಲೋಗನ್..!

ಸೂಪರ್​ ಮ್ಯಾನ್​ನಂತೆ ಕ್ಯಾಚ್ ಹಿಡಿದು ಪ್ರೇಕ್ಷಕರ ನಿಬ್ಬೆರಗಾಗಿಸಿದ ಲೋಗನ್..!

Logan van Beek

Logan van Beek

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಲಿಂಗ್ಟನ್ 20 ಓವರ್‌ಗಳಲ್ಲಿ ಓಪನರ್ ಫಿನ್ ಅಲೆನ್ (75) ಅವರ ಅದ್ಭುತ ಅರ್ಧಶತಕ ಮತ್ತು ಡೆವೊನ್ ಕಾನ್ವೇ (45) ಅವರ 117 ರನ್‌ಗಳ ಜೊತೆಯಾಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

 • Share this:

  ಕ್ರಿಕೆಟ್ ಮೈದಾನ ಹಲವು ಅದ್ಭುತಗಳಿಗೆ ಅನೇಕ ಬಾರಿ ಸಾಕ್ಷಿಯಾಗಿವೆ. ಅದರಲ್ಲೂ ಕೆಲವೊಂದು ಫೀಲ್ಡಿಂಗ್​ಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಅಂತಹದೊಂದು ಕ್ಯಾಚ್ ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಲೀಗ್​ನಲ್ಲೂ ಮೂಡಿಬಂದಿದೆ. ಹೀಗೆ ಎಲ್ಲರ ಹುಬ್ಬೇರುವಂತೆ ಚೆಂಡನ್ನು ಹಿಡಿರುವ ಆಟಗಾರನ ಹೆಸರು ಲೋಗನ್ ವ್ಯಾನ್ ಬೀಕ್.


  ವೆಲ್ಲಿಂಗ್ಟನ್ ಫೈರ್​ಬರ್ಡ್ಸ್​ ಹಾಗೂ ನಾರ್ಥನ್ ನೈಟ್ಸ್​ ನಡುವೆ ನಡೆದ ಈ ಪಂದ್ಯವು ಅದ್ಭುತ ಕ್ಯಾಚ್​ಗೆ ಸಾಕ್ಷಿಯಾಯಿತು. ವೆಲ್ಲಿಂಗ್ಟನ್ ತಂಡದ ನಾಯಕ ಮೈಕೆಲ್ ಬ್ರೇಸ್​ವೆಲ್ ಅವರ ಎಸೆತವನ್ನು ಬ್ರೆಂಟ್ ಹ್ಯಾಂಪ್ಟನ್ ಭರ್ಜರಿಯಾಗಿ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟಲಿದೆ ಅನ್ನುವಷ್ಟರಲ್ಲಿ ಮಿಂಚಿನಂತೆ ಓಡಿಬಂದ ಲೋಗನ್ ವ್ಯಾನ್ ಬೀಕ್ ಅದ್ಭುತವಾಗಿ ಡೈವ್ ಹೊಡೆದರು. ಅಷ್ಟೇ ಅಲ್ಲದೆ ಚೆಂಡನ್ನು ತಮ್ಮ ಕೈಯಲ್ಲಿ ಬಂಧಿಸಿದರು. ಸೂಪರ್ ಸ್ಮ್ಯಾಶ್​ನ ಸೂಪರ್ ಕ್ಯಾಚ್ ನೋಡಿ ಸಹ ಆಟಗಾರರು ಸೇರಿದಂತೆ ಎಲ್ಲರೂ ಆಶ್ಚರ್ಯಚಕಿತರಾದರು.  ಇನ್ನು ಈ ಅದ್ಭುತ ಕ್ಯಾಚ್​ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಇಂಗ್ಲೆಂಡ್​ ತಂಡದ ಆಲ್​ರೌಂಡರ್ ಬೆನ್ ಸ್ಟೋಕ್ಸ್ ನಂಬಲಾಸಾಧ್ಯ ಕ್ಯಾಚ್ ಎಂದು ಬಣ್ಣಿಸಿದ್ದಾರೆ.


  ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಲಿಂಗ್ಟನ್ 20 ಓವರ್‌ಗಳಲ್ಲಿ ಓಪನರ್ ಫಿನ್ ಅಲೆನ್ (75) ಅವರ ಅದ್ಭುತ ಅರ್ಧಶತಕ ಮತ್ತು ಡೆವೊನ್ ಕಾನ್ವೇ (45) ಅವರ 117 ರನ್‌ಗಳ ಜೊತೆಯಾಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ನಾರ್ಥನ್ ನೈಟ್ಸ್ 15.2 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಆದರು.

  Published by:zahir
  First published: