• Home
 • »
 • News
 • »
 • sports
 • »
 • Ranji Trophy Final: ಪೂಜಾರ-ಅರ್ಪಿತ್ ಆಸರೆ; ಉತ್ತಮ ಮೊತ್ತದತ್ತ ಸೌರಾಷ್ಟ್ರ

Ranji Trophy Final: ಪೂಜಾರ-ಅರ್ಪಿತ್ ಆಸರೆ; ಉತ್ತಮ ಮೊತ್ತದತ್ತ ಸೌರಾಷ್ಟ್ರ

ಚೇತೇಶ್ವರ್​ ಪೂಜಾರ

ಚೇತೇಶ್ವರ್​ ಪೂಜಾರ

Saurashtra vs Bengal Final: ಸೌರಾಷ್ಟ್ರ ತಂಡ ಸತತ 2ನೇ ಬಾರಿ ಫೈನಲ್‌ ಪಂದ್ಯ ಆಡುತ್ತಿದೆ. ಇನ್ನೊಂದೆಡೆ ಬೆಂಗಾಲ್ 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದೆ.

 • Share this:

  ರಾಜ್ಕೋಟ್ (ಮಾ. 10): 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡದ ವಿರುದ್ಧ ಸೌರಾಷ್ಟ್ರ 5 ವಿಕೆಟ್ ಕಳೆದುಕೊಂಡಿದೆಯಾದರೂ, ಚೇತೇಶ್ವರ್ ಪೂಜಾರ ಹಾಗೂ ಅರ್ಪಿತ್ ವಾಸವಾಡ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.


  ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಿನ್ನೆ ಆರಂಭವಾಗಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡ ಬ್ಯಾಟಿಂಗ್​ಗೆ ಇಳಿಯಿತು. ಓಪನರ್​ಗಳಾದ ಹರ್ವಿಕ್ ದೇಸಾಯ್ ಹಾಗೂ ಅವಿ ಬರೂತ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 82 ರನ್​ಗಳ ಕಾಣಿಕೆ ನೀಡಿತು.  ಹರ್ವಿಕ್ 111 ಎಸೆತಗಳಲ್ಲಿ 38 ರನ್ ಗಳಿಸಿ ಔಟ್ ಆದರೆ, ಬರೂತ್ 142 ಎಸೆತಗಳಲ್ಲಿ 54 ರನ್​ಗೆ ನಿರ್ಗಮಿಸಿದರು. ವಿಶ್ವರಾಜ್ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ ಇವರೂ 54 ರನ್​ಗೆ ಔಟ್ ಆದರು. ಶೆಲ್ಡನ್ ಜಾಕ್ಸನ್ ಬಂದ ಬೆನ್ನಲ್ಲೆ 14 ರನ್​ಗೆ ಬ್ಯಾಟ್ ಕೆಳಗಿಟ್ಟರೆ, ಚೇತನ್ ಸಕರಿಯಾ ಕೂಡ 4 ರನ್​ಗೆ ಸುತ್ತಾದರು.


  Shafali Verma: ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಶಫಾಲಿಗೆ ಶಾಕ್ ಮೇಲೆ ಶಾಕ್!


  ಹೀಗೆ ಉತ್ತಮ ಆರಂಭ ಪಡೆದುಕೊಂಡಿದ್ದ ಸೌರಾಷ್ಟ್ರ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಸದ್ಯ 5 ವಿಕೆಟ್ ಕಳೆದುಕೊಂಡಿರುವ ಸೌರಾಷ್ಟ್ರ ತಂಡಕ್ಕೆ ಅರ್ಪಿತ್ ವಾಸವಾಡ ಹಾಗೂ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಆಸರೆಯಾಗಿ ನಿಂತಿದ್ದಾರೆ.


  ಸೌರಾಷ್ಟ್ರ ತಂಡದ ಮೊತ್ತ 250ರ ಆಸುಪಾಸಿನಲ್ಲಿದೆ. ಬೆಂಗಾಲ್ ತಂಡದ ಪರ ಆಕಾಶ್ ದೀಪ್ 3 ವಿಕೆಟ್ ಕಿತ್ತಿದ್ದರೆ, ಇಶಾನ್ ಪೋರೆಲ್ ಹಾಗೂ ಶಹ್ಬಾಜ್ ಅಹ್ಮದ್ ತಲಾ 1 ವಿಕೆಟ್ ಪಡೆದರು.


  ಟೀಂ ಇಂಡಿಯಾ ಆಟಗಾರರ ಜೊತೆ ನಾವು ಶೇಕ್​​ಹ್ಯಾಂಡ್​ ಮಾಡಲ್ಲ ಎಂದ ದ. ಆಫ್ರಿಕಾ ಆಟಗಾರರು!


  ಸೌರಾಷ್ಟ್ರ ತಂಡ ಸತತ 2ನೇ ಬಾರಿ ಫೈನಲ್‌ ಪಂದ್ಯ ಆಡುತ್ತಿದೆ. ಇನ್ನೊಂದೆಡೆ ಬೆಂಗಾಲ್ 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದೆ.


  Published by:Vinay Bhat
  First published: