Ind vs SA 1st ODI Live: ನಿಲ್ಲದ ಮಳೆ; ನಡೆಯುತ್ತಾ 20 ಓವರ್​ಗಳ ಪಂದ್ಯ?

India vs South Africa, First ODI in Dharamsala: ಸತತ ಸೋಲಿನಿಂದ ಕಂಗೆಟ್ಟಿರುವ ಕೊಹ್ಲಿ ಪಡೆಗೆ ಈ ಏಕದಿನ ಸರಣಿ ತುಂಬಾನೇ ಮುಖ್ಯವಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ಪ್ರವಾಸದ ವೇಳೆ, ಕೊಹ್ಲಿ ಮತ್ತು ತಂಡ ಏಕದಿನ ಹಾಗೂ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತಕ್ಕೆ ಗುರಿಯಾಗಿತ್ತು.

ಧರ್ಮಶಾಲ ಕ್ರೀಡಾಂಗಣ.

ಧರ್ಮಶಾಲ ಕ್ರೀಡಾಂಗಣ.

 • Share this:
  ಧರ್ಮಶಾಲ (ಮಾ. 12): ಇಲ್ಲಿನ ಹಿಮಾಚಲಾ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಹೀಗಾಗಿ ಟಾಸ್ ಪ್ರಕ್ರಿಯೆ ಕೂ ಡನಡೆದಿಲ್ಲ.

  ನಿನ್ನೆಯಿಂದಲೇ ಇಲ್ಲಿ ತುಂತುರು ಮಳೆಯಾಗುತ್ತಿರುವ ಕಾರಣ ಇಂದುಕೂಡ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದರ ನಡುವೆ ಕೊರೊನಾ ವೈರಸ್‌ ಭೀತಿಯಿದ್ದರೂ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಮಳೆ ನಡುವೆಯೂ ಕೊಡೆ ಹಿಡಿದು ಪಂದ್ಯ ವೀಕ್ಷಣೆಗೆ ಕಾಯುತ್ತಿದ್ದಾರೆ.

     ಮಹಿಳಾ ಕ್ರಿಕೆಟ್​ ಎಂದರೆ ತಾರತಮ್ಯವೇಕೆ? ಇತಿಹಾಸ ಸೃಷ್ಟಿಸಿ ಭಾರತಕ್ಕೆ ಮರಳಿದವರಿಗೆ ಕನಿಷ್ಟ ಸ್ವಾಗತವೂ ಬೇಡವೇ?

  ಇನ್ನೂ ಕ್ರೀಡಾಂಗಣದಲ್ಲಿ ಡ್ರೈನೇಜ್‌ ಸಿಸ್ಟಮ್‌ ಅಳವಡಿಸಲಾಗಿದೆ. ಮಳೆ ನಿಂತ ಮೇಲೆ ಕೇವಲ 30 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದಾಗಿದೆ. ಈಗಾಗಲೇ ಓವರ್ ಖಡಿತಗೊಳಿಸುವ ನಿಯಮ ಜಾರಿಯಾಗಿದ್ದು, ಕನಿಷ್ಠ 20 ಓವರ್​ಗಳ ಪಂದ್ಯ ನಡೆಯಬಹುದೇ ಎಂಬುದು ಕುತೂಹಲ.

  ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗಿ ಭುವನೇಶ್ವರ್ ಕುಮಾರ್ ಕಮ್​ಬ್ಯಾಕ್ ಮಾಡಿದ್ದು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

  ಓಪನರ್​ ಆಗಿ ಧವನ್ ಜೊತೆ ಪೃಥ್ವಿ ಶಾ ಕಣಕ್ಕಿಳಿಯಬಹುದು. ವಿಕೆಟ್- ಕೀಪರ್ ಜವಾಬ್ದಾರಿ ಕೆ. ಎಲ್ ರಾಹುಲ್ ಅವರೇ ವಹಿಸುವ ಸಾಧ್ಯತೆ ಹೆಚ್ಚಿದೆ.

  ಐಪಿಎಲ್​​ ಅಭಿಮಾನಿಗಳಿಗೆ ಬಿಗ್​ ಶಾಕ್​; ಈಬಾರಿ ಎಬಿಡಿ ಸೇರಿದಂತೆ ವಿದೇಶಿ ಪ್ಲೇಯರ್ಸ್​ ಆಡೋದೆ ಡೌಟ್

  ಭಾರತ ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ (ವಿಕೆಟ್- ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ.

  ಇತ್ತ ಕ್ವಿಂಟನ್ ಡಿಕಾಕ್ ನೇತೃತ್ವದ ದಕ್ಷಿಣ ಆಪ್ರಿಕಾ ತಂಡ ಫಾಫ್ ಡುಪ್ಲೆಸಿಸ್, ತೆಂಬಾ ಬವುಮಾ, ರಾಸಿ ವಾನ್​ ಡರ್​ ದುಸ್ಸೆನ್, ಲುಂಹಿ ನಿಗಿಡಿ, ಅನ್ರಿಚ್ ನೋರ್ಟ್ಜೆ ಸೇರಿ ಬಲಿಷ್ಠ 11 ಆಟಗಾರರನ್ನೇ ಕಣಕ್ಕಿಳಿಸುವ ಅಂದಾಜಿದೆ.

     ದ. ಆಫ್ರಿಕಾ ತಂಡ: ಕ್ವಿಂಟಾನ್ ಡಿ ಕಾಕ್ (ನಾಯಕ), ತೆಂಬಾ ಬವುಮಾ, ರಾಸಿ ವಾನ್ ಡರ್ ದುಸ್ಸೆನ್, ಫಾಫ್ ಡುಪ್ಲೆಸಿಸ್, ಕೈಲ್ ವರಿಯನ್, ಹೆನ್ರಿಚ್​ ಕ್ಲಾಸೆನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್, ಅಂಡಿಲೆ ಫೆಹ್ಲುಕ್ವಾಯೋ, ಲುಂಗಿ ನಿಗಿಡಿ, ಲುಥೋ ಸಿಪಂಲಾ, ಬಿಯೂರನ್ ಹೆಂಡ್ರಿಕ್ಸ್, ಅನ್ರಿಚ್ ನೋರ್ಟ್ಜೆ, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್.

  Asia XI vs World XI: ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ಟೂರ್ನಿ ರದ್ದು..!

  ಸತತ ಸೋಲಿನಿಂದ ಕಂಗೆಟ್ಟಿರುವ ಕೊಹ್ಲಿ ಪಡೆಗೆ ಈ ಏಕದಿನ ಸರಣಿ ತುಂಬಾನೇ ಮುಖ್ಯವಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ಪ್ರವಾಸದ ವೇಳೆ, ಕೊಹ್ಲಿ ಮತ್ತು ತಂಡ ಆರಂಭದಲ್ಲಿ ನಡೆದ ಟಿ-20 ಸರಣಿಯಲ್ಲಿ ಮಿಂಚಿದ್ದು ಬಿಟ್ಟರೆ ನಂತರ ನಡೆದ ಏಕದಿನ ಹಾಗೂ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತಕ್ಕೆ ಗುರಿಯಾಗಿತ್ತು. ಸದ್ಯ ತವರಿನಲ್ಲಿ ಟೀಂ ಇಂಡಿಯಾ ಕಮ್​ಬ್ಯಾಕ್ ಮಾಡುತ್ತಾ ಎಂಬುದು ನೋಡಬೇಕಿದೆ.
  First published: