India vs South Africa: ಮಳೆಯದ್ದೇ ಆಟ; ಭಾರತ-ಆಫ್ರಿಕಾ ಮೊದಲ ಏಕದಿನ ಪಂದ್ಯ ರದ್ದು!

India vs South Africa, 1st ODI: ಸದ್ಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ, ಸರಣಿ ವಶಪಡಿಸಿಕೊಳ್ಳ ಬೇಕಾದರೆ ಉಳಿದಿರುವ ಎರಡೂ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾಗಿದೆ.

ಧರ್ಮಶಾಲ ಕ್ರೀಡಾಂಗಣ.

ಧರ್ಮಶಾಲ ಕ್ರೀಡಾಂಗಣ.

 • Share this:
  ಧರ್ಮಶಾಲ (ಮಾ. 12): ಇಲ್ಲಿನ ಹಿಮಾಚಲಾ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಮಳೆಗೆ ಆಯಿತಿಯಾಗಿದೆ.

  ಎಷ್ಟುಹೊತ್ತು ಕಾದರು ಟಾಸ್ ಪ್ರಕ್ರಿಯೆಗೂ ಅವಕಾಶ ಕೊಡದ ಮಳೆರಾಯ, ಅಂತಿಮವಾಗಿ ಒಂದೂ ಎಸೆತ ಕಾಣದೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು.

     IPL 2020: ಐಪಿಎಲ್ ನಡೆಸದಂತೆ ಬಿಸಿಸಿಐಗೆ ವಿದೇಶಾಂಗ ಇಲಾಖೆ ಸಲಹೆ; ಪ್ರೇಕ್ಷಕರಿಲ್ಲದೇ ನಡೆಯುತ್ತ ಪಂದ್ಯ?

  ನಿನ್ನೆಯಿಂದಲೇ ಧರ್ಮಶಾಳದಲ್ಲಿ ತುಂತುರು ಮಳೆಯಾಗುತ್ತಿರುವ ಕಾರಣ ಇಂದುಕೂಡ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದರ ನಡುವೆ ಕೊರೊನಾ ವೈರಸ್‌ ಭೀತಿಯಿದ್ದರೂ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಮಳೆ ನಡುವೆಯೂ ಕೊಡೆ ಹಿಡಿದು ಪಂದ್ಯ ವೀಕ್ಷಣೆಗೆ ಕಾಯುತ್ತಿದ್ದರು. ಆದರೆ, ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಯಿತು.

  ಮುಂದಿನ ಎರಡನೇ ಏಕದಿನ ಪಂದ್ಯ ಮಾರ್ಚ್​ 15 ಭಾನುವಾರದಂದು ಲಕ್ನೋದಲ್ಲಿ ನಡೆಯಲಿದೆ.

  ಸತತ ಸೋಲಿನಿಂದ ಕಂಗೆಟ್ಟಿರುವ ಕೊಹ್ಲಿ ಪಡೆಗೆ ಈ ಏಕದಿನ ಸರಣಿ ತುಂಬಾನೇ ಮುಖ್ಯವಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ಪ್ರವಾಸದ ವೇಳೆ, ಕೊಹ್ಲಿ ಮತ್ತು ತಂಡ ಆರಂಭದಲ್ಲಿ ನಡೆದ ಟಿ-20 ಸರಣಿಯಲ್ಲಿ ಮಿಂಚಿದ್ದು ಬಿಟ್ಟರೆ ನಂತರ ನಡೆದ ಏಕದಿನ ಹಾಗೂ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತಕ್ಕೆ ಗುರಿಯಾಗಿತ್ತು.

  IPL 2020: ಕೊರೋನಾ ಭೀತಿಯ ನಡುವೆಯೂ ಈ ಬಾರಿ ಐಪಿಎಲ್ ಖಚಿತ?; ಆದ್ರೆ ಭಾರತದಲ್ಲಲ್ಲ, ಮತ್ತೆಲ್ಲಿ?

  ಸದ್ಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ, ಸರಣಿ ವಶಪಡಿಸಿಕೊಳ್ಳ ಬೇಕಾದರೆ ಉಳಿದಿರುವ ಎರಡೂ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾಗಿದೆ.

  First published: