HOME » NEWS » Sports » CRICKET LIVE SCORE INDIA VS NEW ZEALAND 4TH T20I CRICKET MATCH TEAM INDIA WON THE MATCH IN SUPER OVER VB

India vs New Zealand: ರೋಚಕ ಸೂಪರ್ ಓವರ್​ನಲ್ಲಿ ಮತ್ತೆ ಗೆದ್ದ ಭಾರತ; ಸರಣಿಯಲ್ಲಿ 4-0 ಮುನ್ನಡೆ

India vs New Zealand, 4th T20I Match: ಸೂಪರ್ ಓವರ್​ನಲ್ಲಿ ಗೆಲುವು ಕಾಣುವ ಮೂಲಕ ಕೊಹ್ಲಿ ಪಡೆ ಈಗಾಗಲೇ 4-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Vinay Bhat | news18-kannada
Updated:February 1, 2020, 8:29 AM IST
India vs New Zealand: ರೋಚಕ ಸೂಪರ್ ಓವರ್​ನಲ್ಲಿ ಮತ್ತೆ ಗೆದ್ದ ಭಾರತ; ಸರಣಿಯಲ್ಲಿ 4-0 ಮುನ್ನಡೆ
ಟೀಂ ಇಂಡಿಯಾ
  • Share this:
ವೆಲ್ಲಿಂಗ್ಟನ್ (. 31): ಇಲ್ಲಿನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ರೋಚಕ ಟಿ-20 ಪಂದ್ಯವೂ ಟೈ ಆದ ಪರಿಣಾಮ ಸೂಪರ್ ಓವರ್​ನಲ್ಲಿ ಅಂತ್ಯಕಂಡಿತು. ಸೂಪರ್ ಓವರ್​ನಲ್ಲಿ ಈ ಬಾರಿಯೂ ಭಾರತ ಗೆಲ್ಲುವ ಮೂಲಕ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿತು.

ಭಾರತ ನೀಡಿದ್ದ 166 ರನ್​ಗಳ ಟಾರ್ಗೆಟ್ ಬೆನ್ನಟ್ಟಿ ಅಂತಿಮ ಹಂತದಲ್ಲಿ ಅರ್ಧಶತಕ ಸಿಡಿಸಿದ್ದ ಸೀಫರ್ಟ್​ ಔಟ್ ಆಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 2 ರನ್​ಗಳ ಅವಶ್ಯಕತೆಯಿತ್ತು. ಶಾರ್ದೂಲ್ ಠಾಕೂರ್ ಬೌಲಿಂಗ್​ನಲ್ಲಿ ಸ್ಯಾಂಟ್ನರ್ ಕೇವಲ 1 ರನ್ ಗಳಿಸಲಷ್ಟೆ ಶಕ್ತವಾದರು. ಹೀಗಾಗಿ ಪಂದ್ಯ ಟೈ ಆಯಿತು.

ಬಳಿಕ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 13 ರನ್ ಬಾರಿಸಿತು. ಸೀಫರ್ಟ್​ 8 ರನ್ ಗಳಿಸಿದರು. ಭಾರತ ಪರ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರು.

 14 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಭಾರತ ಪರ ಕಣಕ್ಕಿಳಿದ ಕೆ ಎಲ್ ರಾಹುಲ್ 1 ಸಿಕ್ಸ್​, 1 ಬೌಂಡರಿ- 10 ರನ್ ಬಾರಿಸಿ ಔಟ್ ಆದರು. ಇತ್ತ ವಿರಾಟ್ ಕೊಹ್ಲಿ(6*) ಇನ್ನೂ 1 ಎಸೆತ ಬಾಕಿ ಇರುವಂತೆ ಸೂಪರ್ ಓವರ್​ನಲ್ಲಿ ಗೆಲುವು ಸಾಧಿಸಿಲು ಕಾರಣರಾದರು. ಕಿವೀಸ್ ಪರ ಟಿಮ್ ಸೌಥೀ ಬೌಲಿಂಗ್ ಮಾಡಿದರು.

 ಇಂದಿನ ಪಂದ್ಯಕ್ಕೆ ಕೆಲವು ಬದಲಾವಣೆಯೊಂದಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಿಂದಲೆ ವಿಕೆಟ್ ಕಳೆದುಕೊಂಡು ಸಾಗಿತು. ಓಪನರ್​ಗಳಾಗಿ ಕಣಕ್ಕಿಳಿದ ಕೆ ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ 14 ರನ್ ಕಲೆಹಾಕಿದರಷ್ಟೆ.

ಸ್ಯಾಮ್ಸನ್ 1 ಸಿಕ್ಸ್ ಸಿಡಿಸಿ 8 ರನ್​ಗೆ ನಿರ್ಗಮಿಸಿ ಮತ್ತೆ ನಿರಾಸೆ ಮೂಡಿಸಿದರು. ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 11 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು.

New Zealand vs India: ಸ್ಯಾಂಟ್ನರ್ ಮಿಂಚಿನ ಜಿಗಿತಕ್ಕೆ ಕೊಹ್ಲಿ ಔಟ್; ಇಲ್ಲಿದೆ ರೋಚಕ ವಿಡಿಯೋ

ಶ್ರೇಯಸ್ ಐಯರ್ ಕೂಡ ರಾಹುಲ್​ಗೆ ಸಾಥ್ ನೀಡದೆ ಕೇವಲ 1 ರನ್ ಕಲೆಹಾಕಿದರಷ್ಟೆ. ರಾಹುಲ್ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 39 ರನ್​ಗೆ ಔಟ್ ಆದರು. ಶಿವಂ ದುಬೆ 12 ರನ್​ಗೆ ನಿರ್ಗಮಿಸಿದರು. ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದರು.

ಹೀಗಿರುವಾಗ ಮನೀಶ್ ಪಾಂಡೆ ಜೊತೆಯಾದ ಶಾರ್ದೂಲ್ ಠಾಕೂರ್ ತಂಡಕ್ಕೆ ಕೆಲ ಸಮಯ ಆಸರೆಯಾಗಿ ನಿಂತರು. ಠಾಕೂರ್ 15 ಎಸೆತಗಳಲ್ಲಿ 20 ರನ್ ಬಾರಿಸಿದರು. ಕೊನೆಯಲ್ಲಿ ಮನೀಶ್ ಪಾಂಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ತಂಡದ ಮೊತ್ತ 150ರ ಗಡಿ ದಾಟಿತು.

ಅಂತಿಮವಾಗಿ ಭಾರತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಪಾಂಡೆ 36 ಎಸೆತಗಳಲ್ಲಿ 3 ಬೌಂಡರಿ ಅಜೇಯ 50 ರನ್ ಗಳಿಸಿದರು. ಕಿವೀಸ್ ಪರ ಇಶ್ ಸೋಧಿ 3 ವಿಕೆಟ್ ಪಡೆದರೆ, ಹೇಮಿಶ್ ಬೆನೆಟ್ 2 ಹಾಗೂ ಮಿಚೆಲ್ ಸ್ಯಾಂಟ್ನರ್ ಮತ್ತು ಸ್ಕಾಟ್ ಕುಗೆಲೈಜ್ನ್​, ಟಿಮ್ ಸೌಥೀ ತಲಾ 1 ವಿಕೆಟ್ ಪಡೆದರು.

Man vs Wild: ಬೇರ್​ ಗ್ರಿಲ್ಸ್​ ಜೊತೆ ಕಾಡಿನಲ್ಲಿ ಸುತ್ತಾಟ ನಡೆಸಲಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಯಾರು ಗೊತ್ತಾ?

166 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಮಾರ್ಟಿನ್ ಗಪ್ಟಿಲ್(4) ವಿಕೆಟ್ ಕಳೆದುಕೊಂಡಿತಾದರೂ, 2ನೇ ವಿಕೆಟ್​ಗೆ ಕಾಲಿನ್ ಮನ್ರೊ ಹಾಗೂ ಟಿಮ್ ಸೀಫರ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲು ಬಿರುಸಿನ ಬ್ಯಾಟಿಂಗ್ ನಡೆಸಿದ ಮನ್ರೊ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಈ ಜೋಡಿ 74 ರನ್​ಗಳ ಕಾಣಿಕೆ ನೀಡಿತು.

ಆದರೆ, 12ನೇ ಓವರ್​ನಲ್ಲಿ ಕೊಹ್ಲಿ ಮಾಡಿದ ರನೌಟ್​ಗೆ ಮನ್ರೊ ಪೆವಿಲಿಯನ್ ಸೇರಬೇಕಾಯಿತು. 47 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸ್ ಬಾರಿಸಿದ ಮನ್ರೊ 64 ರನ್​ಗೆ ಔಟ್ ಆದರು. ಇತ್ತ ಬಂದ ಬೆನ್ನಲ್ಲೆ ಟಾಮ್ ಬ್ರೂಸ್ ಸೊನ್ನೆ ಸುತ್ತಿದರು.

ಈ ಸಂದರ್ಭ ಅನುಭವಿ ರಾಸ್ ಟೇಲರ್ ಜೊತೆಯಾದ ಸೀಫರ್ಟ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಅಂತಿಮ ಹಂತದವರೆಗೂ ಈ ಜೋಡಿ ಅತ್ಯುತ್ತಮ ಜೊತೆಯಾಟ ಆಡಿತಾದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲವಾಯಿತು. ಕೊನೆಯ ಓವರ್​ನಲ್ಲಿ ಸೀಫರ್ಟ್​ 39 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ 57 ರನ್ ಬಾರಿಸಿ ನಿರ್ಗಮಿಸಿದರೆ, ಟೇಲರ್ 24 ರನ್ ಗಳಿಸಿ ಔಟ್ ಆದರು.

INDW vs ENGW: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತದ ವನಿತೆಯರು; ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ

ಅಂತಿಮವಾಗಿ ನ್ಯೂಜಿಲೆಂಡ್ ಕೂಡ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್ ಬಾರಿಸುವ ಮೂಲಕ ಪಂದ್ಯ ಟೈ ಆಯಿತು. ಭಾರತ ಪರ ಶಾರ್ದೂಲ್ ಠಾಕೂರ್ 2, ಜಸ್​ಪ್ರೀತ್ ಬುಮ್ರಾ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಕಿತ್ತರು.

ಸೂಪರ್ ಓವರ್​ನಲ್ಲಿ ಗೆಲುವು ಕಾಣುವ ಮೂಲಕ ಕೊಹ್ಲಿ ಪಡೆ ಐದು ಟಿ-20 ಸರಣಿಯಲ್ಲಿ 4-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಅಂತಿಮ ಐದನೇ ಟಿ-20 ಪಂದ್ಯ ಫೆಬ್ರವರಿ 2 ಭಾನುವಾರದಂದು ಮೌಂಟ್ ಮೌಂಗನಿಯಲ್ಲಿ ನಡೆಯಲಿದೆ.
First published: January 31, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories