IND vs NZ: ಬುಮ್ರಾ ಕಮ್​ಬ್ಯಾಕ್; ಭಾರತೀಯ ಬೌಲರ್​ಗಳ ಮಾರಕ ದಾಳಿ; ನ್ಯೂಜಿಲೆಂಡ್ 8 ವಿಕೆಟ್ ಪತನ

India vs New Zealand: ಮೊದಲ ದಿನ ಬೌಲಿಂಗ್- ಬ್ಯಾಟಿಂಗ್​ನಲ್ಲಿ ಪಾರುಪತ್ಯ ಮೆರೆದಿದ್ದ ನ್ಯೂಜಿಲೆಂಡ್ ತಂಡ ಎರಡನೇ ದಿನ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಹಾದಿ ಹಿಡಿದರು. ಸದ್ಯ 200 ರನ್​ಗೂ ಮುನ್ನವೇ ಕೇನ್ ಪಡೆ 8 ವಿಕೆಟ್ ಕಳೆದುಕೊಂಡಿದೆ.

Vinay Bhat | news18-kannada
Updated:March 1, 2020, 7:57 AM IST
IND vs NZ: ಬುಮ್ರಾ ಕಮ್​ಬ್ಯಾಕ್; ಭಾರತೀಯ ಬೌಲರ್​ಗಳ ಮಾರಕ ದಾಳಿ; ನ್ಯೂಜಿಲೆಂಡ್ 8 ವಿಕೆಟ್ ಪತನ
ಭಾರತ vs ನ್ಯೂಜಿಲೆಂಡ್.
  • Share this:
ಕ್ರೈಸ್ಟ್​ಚರ್ಚ್​ (ಮಾ. 01): ಇಲ್ಲಿನ ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದರೂ ಬೌಲರ್​ಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪರಿಣಾಮ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು ಆಲೌಟ್ ಭೀತಿಯಲ್ಲಿದೆ.

ನಿನ್ನೆ ಮೊದಲ ದಿನ ಟೀಂ ಇಂಡಿಯಾವನ್ನು 242 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು. ಹೀಗೆ ಓಪನರ್​ಗಳು ತಂಡಕ್ಕೆ ಆಧಾರವಾಗಿದ್ದರು.

 


Rranji Trophy Semi Final: ಏಕಾಂಗಿ ಹೋರಾಟ, ಅಜೇಯ ಶತಕ; ಕರ್ನಾಟಕಕ್ಕೆ ಕಂಟಕವಾದ ಮಜುಂದಾರ್

ಆದರೆ, ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್​ಗಳ ದಾಳಿಗೆ ನಲುಗಿ ಹೋಯಿತು. ಇಂದು 3 ರನ್ ಗಳಿಸುವಷ್ಟರಲ್ಲಿ ಕಿವೀಸ್ 30 ರನ್ ಗಳಿಸಿದ್ದ ಟಾಮ್ ಬ್ಲಂಡೆಲ್ ವಿಕೆಟ್ ಕಳೆದುಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ 3 ರನ್ ಗಳಿಸಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ನಿರ್ಗಮಿಸಿದರು.

ಅನುಭವಿ ರಾಸ್ ಟೇಲರ್​(15) ಅವರನ್ನು ಜಡೇಜಾ ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರೆ, ಹೆನ್ರಿ ನಿಕೋಲ್ಸ್ ಆಟ 14 ರನ್​ಗೆ ಅಂತ್ಯವಾಯಿತು. ಈ ನಡುವೆ ಅರ್ಧಶತಕ ಸಿಡಿಸಿದ್ದ ಮತ್ತೊಬ್ಬ ಓಪನರ್ ಟಾಮ್ ಲೇಥಮ್(52) ಶಮಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಹಾಗೂ ಟಿಮ್ ಸೌಥೀ ಸೊನ್ನೆ ಸುತ್ತಿದರೆ, ಕಾಲಿನ್ ಗ್ರ್ಯಾಂಡ್​ಹೋಮ್ ಕೊಂಚಹೊತ್ತು ಬ್ಯಾಟ್ ಬೀಸಿ 26 ರನ್​ಗೆ ನಿರ್ಗಮಿಸಿದರು. ಹೀಗೆ ಮೊದಲ ದಿನ ಬೌಲಿಂಗ್- ಬ್ಯಾಟಿಂಗ್​ನಲ್ಲಿ ಪಾರುಪತ್ಯ ಮೆರೆದಿದ್ದ ನ್ಯೂಜಿಲೆಂಡ್ ತಂಡ ಎರಡನೇ ದಿನ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಹಾದಿ ಹಿಡಿದರು.

IND vs SA: ಮಾರ್ಚ್​ನಲ್ಲಿ ಆಫ್ರಿಕಾ ವಿರುದ್ಧ ಏಕದಿನ ಸರಣಿ; ನಿಟ್ಟುಸಿರು ಬಿಟ್ಟ ಭಾರತ, ಕಾರಣವೇನು?

ಸದ್ಯ 200 ರನ್​ಗೂ ಮುನ್ನವೇ ಕೇನ್ ಪಡೆ 8 ವಿಕೆಟ್ ಕಳೆದುಕೊಂಡಿದೆ. ಭಾರತ ಪರ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತಿದ್ದರೆ, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ.
First published: March 1, 2020, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading