ಕ್ರೀಡೆ

  • associate partner

ಆರ್​ಸಿಬಿ ತಂಡಕ್ಕೆ 10 ಕೋಟಿಗೆ ಸೇಲ್ ಆದ ಖುಷಿಯಲ್ಲಿ ಕ್ರಿಸ್ ಮೊರೀಸ್ ಏನು ಮಾಡಿದ್ರು ನೋಡಿ!

VIVO IPL 2020 Player Auction List: ನಿರ್ದೇಶಕ ಮೈಕ್ ಹೆಸ್ಸನ್ ಮಾರ್ಗದರ್ಶನದಲ್ಲಿ ಆರ್‌ಸಿಬಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಇನ್ನೊಂದಿಷ್ಟು ಸ್ಟಾರ್ ಆಟಗಾರರನ್ನು ಖರೀದಿ ಮಾಡುವತ್ತ ಆರ್​ಸಿಬಿ ಫ್ರಾಂಚೈಸಿ ಚಿತ್ತ ನೆಟ್ಟಿದೆ.

Vinay Bhat | news18-kannada
Updated:December 19, 2019, 7:30 PM IST
ಆರ್​ಸಿಬಿ ತಂಡಕ್ಕೆ 10 ಕೋಟಿಗೆ ಸೇಲ್ ಆದ ಖುಷಿಯಲ್ಲಿ ಕ್ರಿಸ್ ಮೊರೀಸ್ ಏನು ಮಾಡಿದ್ರು ನೋಡಿ!
ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಆಲ್ರೌಂಡರ್ಸ್: ಹೌದು, ಈ ಬಾರಿ ಆರ್ಸಿಬಿ ತಂಡದ ಆಲ್ರೌಂಡರ್ ವಿಭಾಗವೂ ಬಲಿಷ್ಠವಾಗಿದೆ.
  • Share this:
ಕೋಲ್ಕತ್ತಾದಲ್ಲಿ 13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಕೆಲವು ಆಟಗಾರರು ದೊಡ್ಡ ಮೊತ್ತಕ್ಕೆ ಸೇಲ್ ಆದರೆ, ಇನ್ನೂ ಕೆಲವು ಸ್ಟಾರ್ ಪ್ಲೇಯರ್ಸ್​ನನ್ನು ಯಾವೊಂದು ಫ್ರಾಂಚೈಸಿ ಖರೀದಿ ಮಾಡದೆ ಬಿಟ್ಟಿದೆ.

ಈವರೆಗೆ ನಡೆದ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಆಟಗಾರ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್​. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಸೇರಿಸಿಕೊಂಡಿದ್ದಾರೆ. ನಂತರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

IPL 2020 Player Auction: ಬರೋಬ್ಬರಿ 10 ಕೋಟಿ ಕೊಟ್ಟು ಆಫ್ರಿಕಾದ ಸ್ಟಾರ್ ಆಟಗಾರರನ್ನು ಖರೀದಿಸಿದ ಆರ್​ಸಿಬಿ

 


ಆರ್​ಸಿಬಿ ಕೂಡ ಸದ್ಯ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿ ಮಾಡಿದೆ. ದ. ಆಫ್ರಿಕಾದ ಪ್ರಮುಖ ಆಲ್ರೌಂಡರ್ ಕ್ರಿಸ್ ಮೊರೀಸ್ ಅವರನ್ನು ಬರೋಬ್ಬರಿ 10 ಕೋಟಿ ಕೊಟ್ಟು ಬೆಂಗಳೂರು ಖರೀದಿ ಮಾಡಿದೆ. ಜೊತೆಗೆ ಆ್ಯರೋನ್ ಫಿಂಚ್ 4 ಕೋಟಿ 40 ಲಕ್ಷಕ್ಕೆ ಆರ್​ಸಿಬಿ ಪಾಲಾಗಿದ್ದಾರೆ.

ಕ್ರಿಸ್ ಮೊರೀಸ್ ಆರ್​ಸಿಬಿ ತಂಡ ಸೇರಿಕೊಂಡಂತೆ ವಿಡಿಯೋ ಮಾಡಿ ಸಂತಸ ಹಂಚಿಕೊಂಡಿದ್ದಾರೆ. "ರಾಯಲ್ ಚಾಲೆಂಜರ್ಸ್​ ತಂಡ ಸೇರಿಕೊಂಡಿದ್ದಕ್ಕೆ ತುಂಬಾ ಖುಷಿ ಇದೆ. ನಿಮ್ಮೆಲ್ಲರನ್ನು ನೋಡಲು ಕಾತುನಾಗಿದ್ದೇನೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಆಡಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.

IPL 2020 Player Auction Live: 7 ಕೋಟಿ 75 ಲಕ್ಷಕ್ಕೆ ಈ ತಂಡದ ಪಾಲಾದ ಹೆಟ್ಮೇರ್!

 ಈ ವಿಡಿಯೋವನ್ನು ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ನಿರ್ದೇಶಕ ಮೈಕ್ ಹೆಸ್ಸನ್ ಮಾರ್ಗದರ್ಶನದಲ್ಲಿ ಆರ್‌ಸಿಬಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಇನ್ನೊಂದಿಷ್ಟು ಸ್ಟಾರ್ ಆಟಗಾರರನ್ನು ಖರೀದಿ ಮಾಡುವತ್ತ ಆರ್​ಸಿಬಿ ಫ್ರಾಂಚೈಸಿ ಚಿತ್ತ ನೆಟ್ಟಿದೆ.

ಕ್ರಿಸ್ ಲಿನ್ 2 ಕೋಟಿಗೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ. ಈಯಾನ್ ಮಾರ್ಗನ್ 5 ಕೋಟಿ 25 ಲಕ್ಷಕ್ಕೆ ಕೆಕೆಆರ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕರ್ನಾಟಕದ ರಾಬಿನ್ ಉತ್ತಪ್ಪ 3 ಕೋಟಿಗೆ ರಾಜಸ್ಥಾನ್ ರಾಯಲ್ಸ್​ ತಂಡದ ಪಾಲಾಗಿದ್ದಾರೆ.

 ಹನುಮಾ ವಿಹಾರಿ ಹಾಗೂ ಚೇತೇಶ್ವರ್ ಪೂಜಾರ ಸೇಲ್ ಆಗದೆ ಉಳಿದಿದ್ದಾರೆ. ಸ್ಟಾರ್ ಆಟಗಾರ ಜೇಸನ್ ರಾಯ್ 1.50 ಕೋಟಿಗೆ ಡೆಲ್ಲಿ ತಂಡ ಸೇರಿಸಿಕೊಂಡಿದೆ. ಆಸೀಸ್​ನ ಮತ್ತೊಬ್ಬ ಸ್ಟಾರ್ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕ್ರಿಸ್ ವೋಕ್ಸ್​ 1.50 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ.  ಯೂಸುಫ್ ಪಠಾಣ್ ಹಾಗೂ ಕಾಲಿನ್ ಗ್ರ್ಯಾಂಡ್​​ಹೋಮ್​ ಸೇಲ್ ಆಗದೆ ಉಳಿದಿದ್ದಾರೆ.

Published by: Vinay Bhat
First published: December 19, 2019, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading