ಮಹಾನಗರ ಬೆಂಗಳೂರಿನಲ್ಲಿ ಸಾಕಷ್ಟು ಏರಿಯಾಗಳಿಗೆ ಮತ್ತು ಅವುಗಳ ಹೆಸರುಗಳಿಗೆ ಒಂದೊಂದು ಇತಿಹಾಸವಿದೆ. ಸಾಕಷ್ಟು ಏರಿಯಾಗಳಿಗೆ ಖ್ಯಾತ ಕವಿಗಳ, ಸಾಹಿತಿಗಳು, ನಟರ ಹೆಸರನ್ನು ಇಟ್ಟಿದ್ದಾರೆ. ಅವರ ಸಾಧನೆಗೆ ಗೌರವ ಸೂಚಕವಾಗಿ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಆದರೆ ಬೆಂಗಳೂರಿನಲ್ಲೊಂದು ಲಿಟಲ್ ಬ್ರೆಜಿಲ್ ಎಂದು ಕರೆಯುವ ಏರಿಯಾ ಇದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು! ಅದಕ್ಕೂ ಒಂದು ಇತಿಹಾಸವಿದೆ.
ಬೆಂಗಳೂರಿನ ಹಲ್ಸೂರು ಬಲಿ
ಗೌತಮಪುರ ಎಂಬ ಏರಿಯಾವಿದೆ. ಬ್ರಿಟಿಷರ ಈ ಏರಿಯಾವನ್ನು ಗಂಟ್ರೂಪ್ಸ್ ಎಂದು ಕರೆಯುತ್ತಿದ್ದರು. 1800ರಲ್ಲಿ ಶ್ರೀರಂಗ ಪಟ್ಟಣದಿಂದ ಬಂದ ಬ್ರಿಟಿಷರು ಗಂಟ್ರೂಪ್ಸ್ ಕಾಲನಿಯಲ್ಲಿ ನೆಲೆಸುತ್ತಾರೆ. ಅವರ ನಿವೃತ್ತಿ ಕಾಲದಲ್ಲಿ ಫುಟ್ಬಾಲ್ ಆಡುತ್ತಾ ಸಮಯ ಕಳೆಯುತ್ತಾರೆ. ಅವರ ಜೊತೆಗಿದ್ದ ಸೇನಾಧಿಕಾರಿಗಳು, ಸಹಾಯಕರು ಕೂಡ ಇಲ್ಲಿನ ಸುತ್ತಮುತ್ತಲಿನ ಏರಿಯಾದಲ್ಲಿ ಉಳಿದುಕೊಳ್ಳುತ್ತಾರೆ. ನಂತರ ಬ್ರಿಟಿಷರೊಂದಿಗೆ ಫುಟ್ಬಾಲ್ ಆಡುತ್ತಾ ಫುಟ್ಬಾಲ್ ಕಲಿಯುತ್ತಾರೆ.
ಮತ್ತೊಂದು ವಿಶೇಷವೆಂದರೆ ಈ ಏರಿಯಾದಲ್ಲಿ ಬ್ರೆಜಿಲ್ನ ಅಂತರಾಷ್ಟ್ರೀಯ ಪುಟ್ಬಾಲ್ ದಂತ ಕಥೆ ಪೀಲೆ ಅವರ ಪ್ರತಿಮೆ ಕೂಡ ಇದೆ. ಹಾಗಾಗಿ ಈ ಏರಿಯಾವನ್ನು ಲಿಟಲ್ ಬ್ರೆಜಿಲ್ ಎಂದು ಕರೆಯುತ್ತಾರೆ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತರ ಈ ಪ್ರದೇಶ ಗೌತಮಪುರ ಎಂದು ಬದಲಾಗುತ್ತದೆ.
ಇನ್ನು ಬ್ರಿಟಿಷರು ಹೇಳಿಕೊಟ್ಟ ಫುಟ್ಬಾಲ್ ಆಟದಿಂದಾಗಿ ಸಾಕಷ್ಟು ಫುಟ್ಬಾಲ್ ತಾರೆಯರು ಗೌತಮಪುರ ಕಾಲನಿಯಲ್ಲಿ ಹುಟ್ಟಿ, ಸಾಧನೆಯನ್ನು ಮಾಡಿದ್ದಾರೆ. ಖ್ಯಾತ ಫುಟ್ಬಾಲ್ ಆಟಗಾರ ಸತ್ತಾರ್ ಬಷೀರ್ ಕೂಡ ಗೌತಮ ಪುರದವರು. 1948ರಲ್ಲಿ ಬಷೀರ್ ಒಲಂಪಿಕ್ ಫುಟ್ಬಾಲ್ ಟೀಂ ನಲ್ಲಿ ಆಡಿದ್ದರು. ಅಂತೆಯೇ ಮತ್ತೋರ್ವ ಫುಟ್ಬಾಲ್ ಆಟಗಾರ ಕಣ್ಣನ್ ಕೂಡ ಈ ಏರಿಯಾದವರು. ಇವರು ಏಷ್ಯಾನ್ ಪೀಲೆ ಎಂದು ಖ್ಯಾತಿ ಗಳಿಸಿದ್ದಾರೆ.
ಫುಟ್ಬಾಲ್ ದಂತೆಕಥೆ ಪೀಲೆ:
ಪೀಲೆ ಅವರು 23 ಅಕ್ಟೋಬರ್ 1940ರಂದು ಬ್ರೆಜಿಲ್ನ ಮಿನಾಸ್ ಗೆರೈಸ್ನಲ್ಲಿ ಹುಟ್ಟುತ್ತಾರೆ. ಇವರ ಮೂಲ ಹೆಸರು ಎಡ್ಸನ್ ಅರಾಂಟೆಸ್ ಡು ನಾಸ್ಸಿಮೆಂಟೊ. ಫುಟ್ಬಾಲ್ನಲ್ಲಿ ಇವರು ಮಾಡಿದ ಸಾಧನೆಯಿಂದಾಗಿ ದಂತಕಥೆಯಾಗಿದ್ದಾರೆ. ಫಾರ್ವರ್ಡ್ ಆಟಗಾರರಾಗಿದ್ದ ಪೀಲೆ ಫುಟ್ಬಾಲ್ ಇತಿಹಾಸದಲ್ಲಿ 694 ಲೀಗ್ ಪಂದ್ಯವನ್ನು ಆಡಿದ್ದಾರೆ. ಅದರಲ್ಲಿ 650 ಗೋಲ್ ಹೊಡೆದಿದ್ದಾರೆ. ಮಾತ್ರವಲ್ಲದೆ. 1363 ಪದ್ಯಗಳಲ್ಲಿ ಪಿಲೇ ಮತ್ತು ತಂಡದವರು 1282 ಗೋಲು ಬಾರಿಸಿ ಗಿನ್ನೆಸ್ ದಾಖಲೆಯನ್ನು ಸಾಧನೆ ಮಾಡಿದ್ದರು. 1958, 1962 ಮತ್ತು 1970ರಲ್ಲಿ ನಡೆದ ಫಿಫಾ ಫುಟ್ಬಾಲ್ನಲ್ಲಿ ಪೀಲೆ ಮತ್ತು ತಂಡ ಜಯಗಳಿಸಿದ್ದರು.
iPhone SE: ಅತಿ ಕಡಿಮೆ ಬೆಲೆಗೆ ಸಿಗಲಿಗೆ ಐಫೋನ್ ಎಸ್ಇ; ಹೇಗೆ ಖರೀದಿಸಬಹುದು ಗೊತ್ತಾ? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ