ಕೋವಿಡ್(Covid) ಆತಂಕದ ನಡುವೆಯು ಮುಂಬರುವ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)(IPL) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆಯೋಜನೆಗೆ ತೆರೆಮರೆಯಲ್ಲಿ ಸಿದ್ಧತೆ(Preparation) ನಡೆಯುತ್ತಿದೆ. ಸದ್ಯದಲ್ಲೇ ನಡೆಯಲಿರುವ ಮಹಾ ಹರಾಜಿನ ಬಳಿಕ ಐಪಿಎಲ್ ಟೂರ್ನಿಗೆ ವೇಳಾಪಟ್ಟಿ ನಿಗದಿಯಾಗಲಿದೆ.ಫೆ12 ಮತ್ತು 13ರಂದು ಮೆಗಾ ಹರಾಜು(Mega Action) ಪ್ರಕ್ರಿಯೆ ನಡೆಯಲಿದ್ದು, ಅದೃಷ್ಟ ಲಕ್ಷ್ಮೀ ಯಾರಿಗೆಲ್ಲ ಒಲಿಯಲಿದ್ದಾಳೆಂಬುದು ಕುತೂಹಲ ಮೂಡಿಸಿದೆ. ಇದರ ಮಧ್ಯೆ ಈ ಹಿಂದಿನ ಆವೃತ್ತಿಗಳಲ್ಲಿ ಮಿಂಚು ಹರಿಸಿರುವ ಕೆಲ ಪ್ಲೇಯರ್ಸ್(Players) ತಮ್ಮ ಹೆಸರು ಹರಾಜು ಪ್ರಕ್ರಿಯೆಗಾಗಿ ನೋಂದಣಿ ಮಾಡಿಕೊಂಡಿಲ್ಲ.. ಹೀಗಾಗಿ ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ... ಆಗಿದ್ರೆ ಯಾವ ಯಾವ ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಹೆಸರು ನೊಂದಾವಣೆ ಮಾಡಿಕೊಂಡಿಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..
1214 ಆಟಗಾರರಿಂದ ಮೆಗಾ ಹರಾಜಿಗೆ ಹೆಸರು ನೋಂದಾವಣಿ
ಇನ್ನು ಐಪಿಎಲ್ ಮೆಗಾ ಹರಾಜಿನಲ್ಲಿ 1214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 270 ಕ್ಯಾಪ್ಡ್, 903 ಅನ್ಕ್ಯಾಪ್ಡ್ ಮತ್ತು 41 ಅಸೋಸಿಯೇಟ್ ದೇಶಗಳ ಆಟಗಾರರು ಸೇರಿದ್ದಾರೆ. ಎಲ್ಲಾ ಆಟಗಾರರ ಪಟ್ಟಿಯನ್ನು 10 ತಂಡದ ಫ್ರಾಂಚೈಸಿಗಳಿಗೆ ಕಳುಹಿಸಲಾಗಿದೆ.
ಆದರೆ ಇದರ ನಡುವೆ ಕೆಲವೊಂದಷ್ಟು ಸ್ಟಾರ್ ಆಟಗಾರರು ಐಪಿಎಲ್ ಹರಾಜಿನಲ್ಲಿ ಭಾಗಿಯಾಗಲು ಹೆಸರು ನೋಂದಾವಣಿ ಮಾಡಿಕೊಂಡಿಲ್ಲ..ಸೀಸನ್ನಲ್ಲಿ ಆಡುತ್ತಿಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ತರಿಸಲಿದೆ. ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್, ಜೊಫ್ರಾ ಆರ್ಚರ್, ಜೋ ರೂಟ್ ಮತ್ತು ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್, ವಿಂಡೀಸ್ ಟಿ20 ದೈತ್ಯ ಕ್ರಿಸ್ಗೇಲ್ ಈ ಬಾರಿಯ ಐಪಿಎಲ್ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.
1)ಸ್ಯಾಮ್ ಕರ್ರನ್: ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರ್ರನ್ ಬೆನ್ನು ನೋವಿನ ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಸ್ಯಾಮ್ ಕರ್ರನ್ ಈಗಾಗಲೇ ದುಬೈನಲ್ಲಿ ನಡೆದ ಟಿ-20 ವಿಶ್ವಕಪ್ ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದ್ದರು. ಇದೀಗ 2022ರ ಐಪಿಎಲ್ನಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಫುಟ್ಬಾಲ್ ಕ್ಷೇತ್ರದ ದಿಗ್ಗಜ ಸುಭಾಷ್ ಭೌಮಿಕ್ ಇನ್ನಿಲ್ಲ!
2)ಬೆನ್ ಸ್ಟೋಕ್ಸ್: ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಇಂಗ್ಲಿಷ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಈ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್ 2021 ರಲ್ಲಿ ಗಾಯದ ಕಾರಣ ಇಡೀ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಸ್ಟೋಕ್ಸ್ ಈಗ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡಲಿದ್ದಾರೆ. ಈ ಕಾರಣ ಬೆನ್ ಸ್ಟೋಕ್ ಐಪಿ ಎಲ್ ನಿಂದ ದೂರ ಇದ್ದಾರೆ
3)ಜೋ ರೂಟ್: ಇಂಗ್ಲೆಂಡ್ನ ಟೆಸ್ಟ್ ನಾಯಕ ಜೋ ರೂಟ್ ಕೂಡ ಟೆಸ್ಟ್ ಕ್ರಿಕೆಟ್ನತ್ತ ಗಮನ ಹರಿಸಲು ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿಲ್ಲ. ಆಶಸ್ನಲ್ಲಿ ಹೀನಾಯ ಸೋಲಿನ ನಂತರ ಇಂಗ್ಲೆಂಡ್ ಆಟಗಾರರ ಸಂಪೂರ್ಣ ಗಮನ ಟೆಸ್ಟ್ ಕ್ರಿಕೆಟ್ಗೆ ಮರಳುವತ್ತ ನೆಟ್ಟಿದೆ.
4)ಮಿಚೆಲ್ ಸ್ಟಾರ್ಕ್: ಈ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತೆ ಐಪಿಎಲ್ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು, ಆದ್ರೀಗ ಸ್ಟಾರ್ಕ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 2014 ರ ಐಪಿಎಲ್ ಹರಾಜಿನಲ್ಲಿದ್ದ ಸ್ಟಾರ್ಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು. ಆರ್ಸಿಬಿ ಪರ 2 ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಸ್ಟಾರ್ ಐಪಿಎಲ್ನಲ್ಲಿ ಭಾಗವಹಿಸಿರಲಿಲ್ಲ. ಈ ಸೀಸನ್ ಕೂಡ ಭಾಗಿಯಾಗದಿರಲು ಸ್ಟಾರ್ಕ್ ನಿರ್ಧರಿಸಿದ್ದಾರೆ.
5)ಜೋಫ್ರಾ ಆರ್ಚರ್: ಇಂಗ್ಲೆಂಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆರ್ಚರ್ ಮೊಣಕೈ ಗಾಯದಿಂದ ತೊಂದರೆಗೀಡಾಗಿದ್ದಾರೆ ಮತ್ತು ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಜೋಫ್ರಾ ಅವರು ಕ್ರಿಕೆಟ್ ಕ್ಷೇತ್ರದಿಂದ ಬಹಳ ಸಮಯದಿಂದ ದೂರವಿದ್ದು, ಅವರು ಸಂಪೂರ್ಣ ಫಿಟ್ ಆಗಲು ಇನ್ನೂ ಸಮಯ ಹಿಡಿಯುತ್ತದೆ. ಇದರಿಂದಾಗಿ ಅವರು IPL 2022 ರಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಪಾಕಿಸ್ತಾನವೇ ಮೊದಲ ಎದುರಾಳಿ; ಇಲ್ಲಿದೆ ವೇಳಾಪಟ್ಟಿ
6)ಕ್ರಿಸ್ ಗೇಲ್: ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಜನಪ್ರಿಯ ಆಟಗಾರ ಈ ಬಾರಿ ಅವರು ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೆಗಾ ಹರಾಜಿನ ಮೊದಲು ಗೇಲ್ ತಮ್ಮ ಹೆಸರನ್ನು ಹಿಂತೆಗೆದುಕೊಂಡಿರುವುದು ಯೂನಿವರ್ಸಲ್ ಬಾಸ್ ಯುಗವು ಅಂತ್ಯಗೊಳ್ಳುತ್ತಿರುವುದು ಸೂಚಿಸುತ್ತಿದೆ ಕಳೆದ ಕೆಲವು ಐಪಿಎಲ್ಗಳಲ್ಲಿ ಗೇಲ್ ಅವರ ಫಾರ್ಮ್ ಕೂಡ ಉತ್ತಮವಾಗಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಅವರು ರನ್ ಗಳಿಸಲು ಪರದಾಡುತ್ತಿರುವುದು ಕಾಣಬಹುದು. ಗೇಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ ಮತ್ತು ಪಂದ್ಯಾವಳಿಯಲ್ಲಿ ಅನೇಕ ಸ್ಮರಣೀಯ ಮತ್ತು ನಂಬಲಾಗದ ಇನ್ನಿಂಗ್ಸ್ಗಳನ್ನು ಆಡಿದ್ದಾರೆ
7)ಪ್ಯಾಟ್ ಕಮಿನ್ಸ್: ಕಳೆದ ಸೀಸನ್ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾಗಿದ್ದ ಪ್ಯಾಟ್ ಕಮಿನ್ಸ್ ಇದೀಗ ಮುಂದಿನ ಐಪಿಎಲ್ ಸೀಸನ್ಗೆ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ