• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Oldest Cricketer: ವಿಶ್ವದ ಅತಿ ಹಿರಿಯ ಕ್ರಿಕೆಟಿಗ ವ್ಯಾಟ್ಕಿನ್ಸ್ ನಿಧನ; ಇಲ್ಲಿದೆ ಟಾಪ್-10 ಪಟ್ಟಿ

Oldest Cricketer: ವಿಶ್ವದ ಅತಿ ಹಿರಿಯ ಕ್ರಿಕೆಟಿಗ ವ್ಯಾಟ್ಕಿನ್ಸ್ ನಿಧನ; ಇಲ್ಲಿದೆ ಟಾಪ್-10 ಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

John Watkins death- ದಕ್ಷಿಣ ಆಫ್ರಿಕಾದ ಜಾನ್ ವ್ಯಾಟ್ಕಿನ್ಸ್ ಮೃತಪಟ್ಟ ಬಳಿಕ 95 ವರ್ಷದ ರಾನ್ ಡ್ರೇಪರ್ ಅವರು ಈಗ ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಆಟಗಾರರೆನಿಸಿದ್ದಾರೆ. ಅತ್ಯಂತ ಹಿರಿಯ ಕ್ರಿಕೆಟಿಗರ ಟಾಪ್-10 ಪಟ್ಟಿಯಲ್ಲಿ ಭಾರತದ ಇಬ್ಬರಿದ್ದಾರೆ.

  • Share this:

ಬದುಕಿರುವ ಟೆಸ್ಟ್ ಕ್ರಿಕೆಟಿಗರಲ್ಲೇ ಅತ್ಯಂತ ಹಿರಿಯರೆನಿಸಿದ್ದ (Oldest Living Test Cricketer) 98 ವರ್ಷದ ಟೆಸ್ಟ್ ಕ್ರಿಕೆಟಿಗ ಜಾನ್ ವ್ಯಾಟ್ಕಿನ್ಸ್ (John Watkins) ಮೃತಪಟ್ಟಿರುವುದಾಗಿ ಕ್ರಿಕೆಟ್ ಸೌಥ್ ಆಫ್ರಿಕಾ ಸಂಸ್ಥೆ ನಿನ್ನೆ ಹೇಳಿಕೆ ನೀಡಿದೆ. ಆಲ್​ರೌಂಡರ್ ಆಗಿದ್ದ ವ್ಯಾಟ್ಕಿನ್ಸ್ ಅವರು ಶುಕ್ರವಾರವೇ (ಸೆ. 3ರಂದು) ಮೃತಪಟ್ಟಿದ್ದಾರೆ. ಹತ್ತು ದಿನಗಳ ಹಿಂದೆ ಅವರಿಗೆ ಕೋವಿಡ್-19 ಸೋಂಕು ತಗುಲಿತ್ತು. ಅದೇ ಕಾರಣಕ್ಕೆ ಅವರು ಅಸುನೀಗಿದ್ದಾರೆನ್ನಲಾಗಿದೆ. 1923, ಏಪ್ರಿಲ್ 10ರಂದು ದಕ್ಷಿಣ ಆಫ್ರಿಕಾದ ಡರ್ಬನ್​ನಲ್ಲಿ ಜನಿಸಿದ ಜಾನ್ ವಾಟ್ಕಿನ್ಸ್ ಅವರು 1949ರಿಂದ 1957ರವರೆಗೆ ಏಳು ವರ್ಷ ಕಾಲ ದಕ್ಷಿಣ ಆಫ್ರಿಕಾ ತಂಡದ ಪರ ಟೆಸ್ಟ್ ಪಂದ್ಯಗಳನ್ನ ಆಡಿದ್ದರು. ಕೆಲ ದೈಹಿಕ ನ್ಯೂನತೆಗಳಿದ್ದರೂ ಅದೆಲ್ಲವನ್ನೂ ದಾಟಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ವೇಗದ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟುಗಾರನಾಗಿ ಅವರು ತಮ್ಮ ತಂಡದ ಪ್ರಮುಖ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಸ್ಲಿಪ್​ನಲ್ಲಿ ಒಳ್ಳೆಯ ಫೀಲ್ಡರ್ ಆಗಿದ್ದರು. ಇವರ ಸ್ವಿಂಗ್ ಬೌಲಿಂಗ್ ಎದುರಾಳಿ ಬ್ಯಾಟ್ಸ್​ಮನ್​ಗಳ ಜಂಘಾಬಲ ಉಡುಗಿಸುತ್ತಿತ್ತು ಎಂದು ಹೇಳುತ್ತಾರೆ.


ಜಾನ್ ವ್ಯಾಟ್ಕಿನ್ಸ್ ಅವರು ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 60 ಪಂದ್ಯಗಳನ್ನ ಆಡಿ 24.80 ರನ್ ಸರಾಸರಿಯಂತೆ 2,158 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 96 ವಿಕೆಟ್ ಪಡೆದಿದ್ದಾರೆ. ಇನ್ನು, ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ಪ 15 ಟೆಸ್ಟ್ ಪಂದ್ಯಗಳನ್ನ ಆಡಿರುವ ಇವರು 23.53 ಸರಾಸರಿಯಂತೆ 612 ರನ್ ಗಳಿಸಿದ್ದಾರೆ. 816 ರನ್ನಿತ್ತು 29 ವಿಕೆಟ್ ಕಿತ್ತಿದ್ದಾರೆ. ಸ್ವಿಂಗ್ ಬೌಲರ್ ಆಗಿದ್ದ ಇವರು ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ಕಟ್ಟಿಹಾಕುವಲ್ಲಿ ನಿಷ್ಣಾತರಾಗಿದ್ದರು. ಇವರ ಬೌಲಿಂಗ್ ಎಕನಾಮಿ, ಅಂದರೆ ಪ್ರತೀ ಓವರ್​ಗೆ ನೀಡುವ ಸರಾಸರಿ ರನ್ 1.74 ಇತ್ತು. ಇದು ವಿಶ್ವದ ಆರನೇ ಅತ್ಯುತ್ತಮ ಎಕನಾಮಿ ಎಂಬ ದಾಖಲೆಯಾಗಿದೆ.


ಇದನ್ನೂ ಓದಿ: Cricket Records- ಓವಲ್ ಪಂದ್ಯದಲ್ಲಿ ಬಂದ ಬುಮ್ರಾ, ಕೊಹ್ಲಿ, ರೋಹಿತ್ ದಾಖಲೆಗಳು


ಈಗ ಜಾನ್ ವಾಟ್ಕಿನ್ಸ್ ನಿಧನದೊಂದಿಗೆ ಜೀವಂತ ಇರುವ ಅತ್ಯಂತ ಹಿರಿಯ ಕ್ರಿಕೆಟಿನೆಂದರೆ 95 ವರ್ಷದ ರಾನ್ ಡ್ರೇಪರ್ (Ron Draper). ಕುತೂಹಲವೆಂದರೆ ವ್ಯಾಟ್ಕಿನ್ಸ್ ಅವರಂತೆ ಡ್ರೇಪರ್ ಕೂಡ ದಕ್ಷಿಣ ಆಫ್ರಿಕಾದವರೇ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ 93 ವರ್ಷದ ಕೆನೆಥ್ ಆರ್ಚರ್ ಅವರಿದ್ದಾರೆ. ಅವರ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗ ನೀಲ್ ಹಾರ್ವೇ ಇದ್ದಾರೆ. ಡ್ರೇಪರ್ ಮತ್ತು ಆರ್ಚರ್ ಅವರು ಆಡಿದ್ದು ಕೇವಲ 2 ಮತ್ತು 5 ಟೆಸ್ಟ್ ಪಂದ್ಯಗಳನ್ನ ಮಾತ್ರ. ನೀಲ್ ಹಾರ್ವೆ ಅವರು 79 ಟೆಸ್ಟ್ ಪಂದ್ಯಗಳನ್ನ ಆಡಿದ ಪ್ರಮುಖ ಕ್ರಿಕೆಟಿಗ. ಇನ್ನು, ಭಾರತದ ದತ್ತಾಜಿರಾವ್ ಗಾಯಕ್ವಾಡ್ (92 ವರ್ಷ) ಹಾಗೂ ಸಿ.ಡಿ. ಗೋಪಿನಾಥ್ (91 ವರ್ಷ) ಅವರು ಈ ಜೀವಂತ ಟೆಸ್ಟ್ ಕ್ರಿಕೆಟಿಗರ ಪಟ್ಟಿಯಲ್ಲಿ ಕ್ರಮವಾಗಿ 4 ಮತ್ತು 10ನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: Ind vs Eng- ಕಳೆದ 54 ವರ್ಷದಲ್ಲೇ ದಾಖಲೆ; 350ಕ್ಕಿಂತ ಹೆಚ್ಚು ರನ್ ಟಾರ್ಗೆಟ್ ಕೊಟ್ಟಾಗೆಲ್ಲಾ ಭಾರತ ಸೋತಿದ್ದಿಲ್ಲ


ಈಗ ಬದುಕಿರುವ ಅತ್ಯಂತ ಹಿರಿಯ ಕ್ರಿಕೆಟಿಗರ ಪಟ್ಟಿ:


1) ರಾನ್ ಡ್ರೇಪರ್, ದ. ಆಫ್ರಿಕಾ: 94 ವರ್ಷ
2) ಕೆನೆಥ್ ಆರ್ಚರ್, ಆಸ್ಟ್ರೇಲಿಯಾ: 93 ವರ್ಷ
3) ನೀಲ್ ಹಾರ್ವೆ, ಆಸ್ಟ್ರೇಲಿಯಾ: 92 ವರ್ಷ
4) ದತ್ತಾಜಿರಾವ್ ಗಾಯಕ್ವಾಡ್, ಭಾರತ: 92 ವರ್ಷ
5) ಎಸ್ ರಾಮಧಿನ್, ವೆ. ಇಂಡೀಸ್: 92 ವರ್ಷ
6) ಎ.ಕೆ ಡೇವಿಡ್​ಸನ್, ಆಸ್ಟ್ರೇಲಿಯಾ: 92 ವರ್ಷ
7) ಜೆ ರುದರ್​ಫೋರ್ಡ್, ಆಸ್ಟ್ರೇಲಿಯಾ: 91 ವರ್ಷ
8) ಟಿ ಮೆಕ್​ಮಹೋನ್, ನ್ಯೂಜಿಲೆಂಡ್: 91 ವರ್ಷ
9) ವಾಜಿರ್ ಮೊಹಮ್ಮದ್, ಪಾಕಿಸ್ತಾನ: 91 ವರ್ಷ
10) ಸಿ.ಡಿ. ಗೋಪಿನಾಥ್, ಭಾರತ: 91 ವರ್ಷ

top videos
    First published: