ನಮ್ಮನ್ನು ನಾವು ಆರೋಗ್ಯವಾಗಿರಿಸಿಕೊಳ್ಳೋಣ; ಸ್ಕಿಪ್ಪಿಂಗ್​ ಮಾಡುವ ವಿಡಿಯೋ ಹಂಚಿಕೊಂಡ ಸಚಿನ್​ ತೆಂಡೂಲ್ಕರ್​​

Sachin Tendulkar: ಇನ್​​ಸ್ಟಾಗ್ರಾಂ ಖಾತೆಯಲ್ಲಿ ಸ್ಕಿಪ್ಪಿಂಗ್ ವಿಡಿಯೋ ಹಂಚಿಕೊಂಡ ಸಚಿನ್​​ ತೆಂಡೂಲ್ಕರ್​ ‘ಲಾಕ್​ಡೌನ್​​ ಎಲ್ಲರಿಗೂ ಕಷ್ಟವನ್ನು ತಂದೊಡ್ಡಿದೆ. ಆದರೆ ನಾವು ಬಿಟ್ಟುಕೊಡಬಾರದು. ಮುಂದೆ ಸಾಗುತಲಿರೋಣ. ನಮ್ಮನ್ನು ಸದೃಢ ಮತ್ತು ಆರೋಗ್ಯವಾಗಿರಿಸಿಕೊಳ್ಳೋಣ ಎಂದು ಅಡಿಬರಹ ನೀಡಿದ್ದಾರೆ.

news18-kannada
Updated:June 8, 2020, 6:20 PM IST
ನಮ್ಮನ್ನು ನಾವು ಆರೋಗ್ಯವಾಗಿರಿಸಿಕೊಳ್ಳೋಣ; ಸ್ಕಿಪ್ಪಿಂಗ್​ ಮಾಡುವ ವಿಡಿಯೋ ಹಂಚಿಕೊಂಡ ಸಚಿನ್​ ತೆಂಡೂಲ್ಕರ್​​
ಸಚಿನ್​ ತೆಂಡೂಲ್ಕರ್
  • Share this:
ಇತ್ತೀಚೆಗೆ ಸಚಿನ್​ ತೆಂಡೂಲ್ಕರ್​ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬ್ಯಾಟ್​​-ಬೌಲ್​​ ಚಾಲೆಂಜ್​ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೀಗ ಸಚಿನ್​ ಸ್ಕಿಪಿಂಗ್​ ಸ್ಕಿಪ್ಪಿಂಗ್​ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್​​ಸ್ಟಾಗ್ರಾಂ ಖಾತೆಯಲ್ಲಿ ಸ್ಕಿಪ್ಪಿಂಗ್ ವಿಡಿಯೋ ಹಂಚಿಕೊಂಡ ಸಚಿನ್​​ ತೆಂಡೂಲ್ಕರ್​ ‘ಲಾಕ್​ಡೌನ್​​ ಎಲ್ಲರಿಗೂ ಕಷ್ಟವನ್ನು ತಂದೊಡ್ಡಿದೆ. ಆದರೆ ನಾವು ಬಿಟ್ಟುಕೊಡಬಾರದು. ಮುಂದೆ ಸಾಗುತಲಿರೋಣ. ನಮ್ಮನ್ನು ಸದೃಢ ಮತ್ತು ಆರೋಗ್ಯವಾಗಿರಿಸಿಕೊಳ್ಳೋಣ ಎಂದು ಅಡಿಬರಹ ನೀಡಿದ್ದಾರೆ. ಜೊತೆಗೆ ಐಡಿಬಿಐ ಫೆಡರಲ್​ ಇನ್ಸೂರೆನ್ಸ್​​​ ಇನ್​​ಸ್ಟಾಗ್ರಾಂ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಅನೇಕರು ಸಚಿನ್​ ವಿಡಿಯೋ ಕಂಡು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಇನ್ನು ಕೆಲವರು ವಿಡಿಯೋ ಶೇರ್​​ ಮಾಡುವ ಮೂಲಕ ನೆಚ್ಚಿನ ಮಾಜಿ ಆಟಗಾರ ಉತ್ಸಾಹ ಕಂಡು ಸಂತಸ ವ್ಯಕ್ತ ಪಡಿಸಿದ್ದಾರೆ.

 
ಕಳೆದ ಬಾರಿ ಸಚಿನ್​​​ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಬ್ಯಾಟ್​-ಬಾಲ್​ ಚಾಲೆಂಜ್​ ಮಾಡಿದ್ದರು. ಅನೇಕರು ಕ್ರಿಕೆಟ್​ ಅಭಿಮಾನಿಗಳು ಇವರ ಚಾಲೆಂಜ್​ ಸ್ವೀಕರಿಸಿದ್ದರು. ಇದೀಗ ಕೊರೋನಾ ಲಾಕ್​ಡೌನ್​​​ ಅವಧಿಯಲ್ಲಿ ಮನೆಯಲ್ಲಿದ್ದುಕೊಂಡು ಜನರಿಗೆ ಉತ್ಸಾಹ ತುಂಬುತ್ತಿದ್ದಾರೆ ಸಚಿನ್​.

ಸಚಿನ್​ ಕೊರೋನಾ ವಿರುದ್ಧ ಕೈ ಜೋಡಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಪಿಎಂ ಕೇರ್ಸ್​ಗೆ ತಮ್ಮ ಕೈಲಾದಷ್ಟು ದೇಣಿಗೆಯನ್ನು ನೀಡಿದ್ದರು. ಅಷ್ಟೇ ಅಲ್ಲದೆ ದಿನಗೂಲಿ ನೌಕರರಿಗೂ ಸಹಾಯ ಮಾಡಿದ್ದರು. ಮುಂಬೈ ಹೈ-ಫೈ ಫೌಂಡೇಶನ್​ ಮೂಲಕ ಸಂಕಷ್ಟದಲ್ಲಿರುವ ದಿನಗೂಲಿ ನೌಕರರಿಗೆ ಮತ್ತು ಶಾಲಾ ಮಕ್ಕಳಿಗೆ  ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು.

Chiranjeevi Sarja: ಚಿರು ಸಾವಿಗೆ ಸಂತಾಪ ಸೂಚಿಸಿದ ಮಾಲಿವುಡ್ ತಾರೆಯರು
First published: June 8, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading