• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • VIDEO: ಆರು ಬಾಲ್​ಗೆ ಆರು ಸಿಕ್ಸ್: ಸಿಕ್ಸರ್ ಸರದಾರರ ಪಟ್ಟಿಗೆ ಹೊಸ ಆಟಗಾರನ ಎಂಟ್ರಿ

VIDEO: ಆರು ಬಾಲ್​ಗೆ ಆರು ಸಿಕ್ಸ್: ಸಿಕ್ಸರ್ ಸರದಾರರ ಪಟ್ಟಿಗೆ ಹೊಸ ಆಟಗಾರನ ಎಂಟ್ರಿ

Leo Carter

Leo Carter

Leo Carter: 29 ಎಸೆತಗಳನ್ನು ಎದುರಿಸಿ ಕಾರ್ಟರ್ 3 ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 70 ರನ್ ಗಳಿಸಿ ಮಿಂಚಿದರು.

  • Share this:

ಕ್ರೈಸ್ಟ್‌ಚರ್ಚ್: ಸುಮಾರು 12 ವರ್ಷಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ ಯುವರಾಜ್ ಸಿಂಗ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಇನ್ನೂ ಕೂಡ ಮಾಸಿಲ್ಲ. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಯುವಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಸಿಕ್ಸರ್ ಸಿಂಗ್ ಎನಿಸಿಕೊಂಡಿದ್ದರು. ಇದೀಗ ಸಿಕ್ಸರ್​ ಸರದಾರರ ಪಟ್ಟಿಗೆ ನ್ಯೂಜಿಲೆಂಡ್​ ತಂಡ ಯುವ ಆಟಗಾರ ಕೂಡ ಎಂಟ್ರಿ ಕೊಟ್ಟಿದ್ದಾನೆ.

ನ್ಯೂಜಿಲೆಂಡ್ ದೇಶೀಯ ಸೂಪರ್ ಸ್ಮ್ಯಾಶ್ ಟಿ20 ಪಂದ್ಯಾವಳಿಯಲ್ಲಿ ಲಿಯೋ ಕಾರ್ಟರ್ ಲಿಯೋ ಕಾರ್ಟರ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ಮಿಂಚಿದ್ದಾರೆ. 16 ನೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿ ಕಿವೀಸ್ ಪರ ಒಂದೇ ಓವರ್​ನಲ್ಲಿ ಆರು ಸಿಕ್ಸ್ ಬಾರಿಸಿದ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಟಿ 20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕಾರ್ಟರ್ ಪಾತ್ರರಾಗಿದ್ದಾರೆ.ನಾರ್ದರ್ನ್ ಡಿಸ್ಟ್ರಿಕ್ಟ್ ಮತ್ತು ಕ್ಯಾಂಟರ್ಬರಿ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಾರ್ದರ್ನ್ ನಿಗದಿತ ಓವರ್ 219 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನತ್ತಿದ ಕ್ಯಾಂಟರ್ಬರಿ ಏಳು ವಿಕೆಟ್​ಗಳಿಂದ ಗೆದ್ದು ಬೀಗಿರುವುದು ವಿಶೇಷ. 16 ನೇ ಓವರ್‌ನಲ್ಲಿ ಆಂಟನ್ ಡೆವಿಸಿಚ್ ಎಸೆತಗಳನ್ನು ಬ್ಯಾಕ್ ಟು ಬ್ಯಾಕ್ ಸಿಕ್ಸರ್​ಗೆ ಅಟ್ಟುವ ಮೂಲಕ ಕಾರ್ಟರ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿದರು. 29 ಎಸೆತಗಳನ್ನು ಎದುರಿಸಿ ಕಾರ್ಟರ್ 3 ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 70 ರನ್ ಗಳಿಸಿ ಮಿಂಚಿದರು.

Published by:zahir
First published: