‘ವಿಶ್ವಕಪ್​ನಲ್ಲಿ ಪಾಂಡ್ಯಗೆ ನಾನು ಬಾಲ್ ಎಸೆಯಲ್ಲ’; ಹಾರ್ದಿಕ್​ಗೆ ಹೆದರಿದ ಶ್ರೀಲಂಕಾ ಬೌಲರ್

ರೋಹಿತ್​ ಶರ್ಮಾ ಕೂಡ ಪಾಂಡ್ಯ ಆಟದ ವೈಖರಿಯನ್ನು ಹೊಗಳಿದ್ದಾರೆ. ನಮ್ಮ ತಂಡ ಗೆಲ್ಲಲು ಪಾಂಡ್ಯ ಆಟ ತುಂಬಾನೇ ಸಹಕಾರಿಯಾಯಿತು ಎಂದಿದ್ದರು.

Rajesh Duggumane | news18
Updated:May 2, 2019, 3:17 PM IST
‘ವಿಶ್ವಕಪ್​ನಲ್ಲಿ ಪಾಂಡ್ಯಗೆ ನಾನು ಬಾಲ್ ಎಸೆಯಲ್ಲ’; ಹಾರ್ದಿಕ್​ಗೆ ಹೆದರಿದ ಶ್ರೀಲಂಕಾ ಬೌಲರ್
ಈ ಹಿಂದೆ ವೆಲ್ಲಿಂಗ್ಟನ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ವಿಶೇಷ ದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 45 ರನ್ ಗಳನ್ನು ಸಿಡಿಸಿದ ಪಾಂಡ್ಯ ಎಬಿ ಡಿವಿಲಿಯರ್ಸ್​ ಅವರ ರೆಕಾರ್ಡ್ ಸರಿಗಟ್ಟಿದ್ದರು​.
  • News18
  • Last Updated: May 2, 2019, 3:17 PM IST
  • Share this:
ಆರ್​ಸಿಬಿ ವಿರುದ್ಧದ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್​ ಗೆಲುವಿನ ನಗೆ ಬೀರಿತ್ತು. 19ನೇ ಓವರ್​ನಲ್ಲಿ ಪವನ್​ ನೇಗಿ ಬೌಲಿಂಗ್​ನಲ್ಲಿ 25 ರನ್​ ಸಿಡಿಸಿದ್ದರು ಹಾರ್ದಿಕ್​ ಪಾಂಡ್ಯ. ಈ ಮೂಲಕ ಮುಂಬೈ ಇಂಡಿಯನ್ಸ್​ ಗೆಲುವಿಗೆ ಕಾರಣರಾಗಿದ್ದರು. ಇವರ ಅಬ್ಬರದ ಬ್ಯಾಟಿಂಗ್ ನೋಡಿ ಅನೇಕರು ದಂಗಾಗಿದ್ದಾರೆ. ಅವರಿಗೆ ಬಾಲ್​ ಎಸೆಯಲು ಅನೇಕರು ಭಯ ಬೀಳುತ್ತಾರಂತೆ! ಈ ಸಾಲಿನಲ್ಲಿ ಶ್ರೀಲಂಕಾ ನಾಯಕ​ ಹಾಗೂ ವೇಗಿ ಲಸಿತ್​ ಮಲಿಂಗಾ ಕೂಡ ಇದ್ದಾರೆ!

ಹೌದು, ಈ ವಿಚಾರವನ್ನು ಸ್ವತಃ ಲಸಿತ್​ ಮಲಿಂಗಾ ಒಪ್ಪಿಕೊಂಡಿದ್ದಾರೆ. ಪಾಂಡ್ಯಾ ಹಾಗೂ ಲಸಿತ್​ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಆಟವಾಡುತ್ತಿದ್ದಾರೆ. ಮೊನ್ನೆ ಆರ್​ಸಿಬಿ ಮ್ಯಾಚ್​ನಲ್ಲಿ ಮಲಿಂಗಾಗೆ ಮ್ಯಾನ್​ ಆಫ್​ ದಿ ಮ್ಯಾಚ್​ ನೀಡಲಾಗಿತ್ತು. ಈ ವೇಳೆ ಅವರು ಈ ವಿಚಾರ ಹೇಳಿದ್ದಾರೆ. ವಿಶ್ವಕಪ್​ನಲ್ಲಿ ನಾನು ಹಾರ್ದಿಕ್​ಗೆ ಬೌಲಿಂಗ್​ ಹಾಕುವುದಿಲ್ಲ. ನನಗೆ ಭಯ ಎಂದು ಹೇಳಿಕೊಂಡಿದ್ದಾರೆ.

“ಹಾರ್ದಿಕ್​ ಪಾಂಡ್ಯಾಗೆ ಬೌಲಿಂಗ್​ ಮಾಡಲು ನನಗೆ ಭಯವಾಗುತ್ತದೆ. ವಿಶ್ವಕಪ್​ನಲ್ಲಿ ಹಾರ್ದಿಕ್​ಗೆ ಬಾಲ್​ ಹಾಕಲು ನನಗೆ ಭಯವಾಗುತ್ತದೆ. ಹಾಗಾಗಿ ಹಾರ್ದಿಕ್​ಗೆ ಬಾಲ್​ ಎಸೆಯಲು ನಾನು ಇಷ್ಟಪಡುವುದಿಲ್ಲ,” ಎಂದಿದ್ದಾರೆ ಲಸಿತ್​ ಮಲಿಂಗಾ. ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಲಸಿತ್​ ಮಲಿಂಗಾ ಮುನ್ನಡೆಸುತ್ತಿದ್ದಾರೆ.

ರೋಹಿತ್​ ಶರ್ಮಾ ಕೂಡ ಪಾಂಡ್ಯ ಆಟದ ವೈಖರಿಯನ್ನು ಹೊಗಳಿದ್ದಾರೆ. "ನಮ್ಮ ತಂಡ ಗೆಲ್ಲಲು ಪಾಂಡ್ಯ ಆಟ ತುಂಬಾನೇ ಸಹಕಾರಿಯಾಯಿತು. ಅವರು ನಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದರು," ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಪಾಂಡ್ಯ, ರಾಹುಲ್​ಗೆ ಬಿಗ್​ ರಿಲೀಫ್​: ಮಧ್ಯಂತರ ಅಮಾನತ್ತು ಆದೇಶ ಹಿಂಪಡೆದ ಬಿಸಿಸಿಐ

First published:April 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading