Lanka Premier league 2020: ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ಅಬ್ಬರಿಸಿದ ಭಾರತೀಯ ಆಟಗಾರ: ಇಲ್ಲಿದೆ ರೋಚಕ ವಿಡಿಯೋ

Munaf Patel: ಮುನಾಫ್ ಪಟೇಲ್ ಲಂಕಾ ಪ್ರೀಮಿಯರ್ ಲೀಗ್​ನ ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ವಿಕೆಟ್ ಕಿತ್ತ ಸಾಧನೆ ಮಾಡಿದರು. ಅಲ್ಲದೆ 2017 ರ ಬಳಿಕ ಟಿ-20 ಕ್ರಿಕೆಟ್​ನಲ್ಲಿ ಮುನಾಫ್ ಕಿತ್ತ ಮೊದಲ ವಿಕೆಟ್ ಇದಾಗಿದೆ.

Munaf Patel

Munaf Patel

  • Share this:
    ಸಿಂಹಳೀಯರ ನಾಡಲ್ಲಿ ಲಂಕಾ ಪ್ರೀಮಿಯರ್ ಲೀಗ್ 2020ಕ್ಕೆ ಕ್ವಿಕ್ ಸ್ಟಾರ್ಟ್​ ಸಿಕ್ಕಿದ್ದು, ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ವಿಶೇಷ ಎಂದರೆ ಭಾರತೀಯ ಮಾಜಿ ಆಟಗಾರರು ಕೂಡ ಇದರಲ್ಲಿ ಪಾಲ್ಗೊಂಡು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಎಲ್​ಪಿಎಲ್​ನ ಕ್ಯಾಂಡಿ ಟಸ್ಕರ್ಸ್​ ತಂಡದ ಪರ ಆಡುತ್ತಿರುವ ಭಾರತ ತಂಡದ ಮಾಜಿ ವೇಗಿ ಮುನಾಫ್ ಪಟೇಲ್ ಕಣಕ್ಕಿಳಿದ ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ಪ್ರಮುಖ ವಿಕೆಟ್ ಕಿತ್ತು ಮಿಂಚಿದ್ದಾರೆ.

    ಸೋಮವಾರ ನಡೆದ ಗಲ್ಲೆ ಗ್ಲೆಡಿಯೇಟರ್ಸ್​ ವಿರುದ್ಧದ ಪಂದ್ಯದಲ್ಲಿ ಕ್ಯಾಂಡಿ ಟಸ್ಕರ್ಸ್​ ತಂಡ 25 ರನ್​ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಟಸ್ಟರ್ಸ್​ ತಂಡ ಕುಸಲ್ ಮೆಂಡಿಸ್ ಅವರ 49 ಹಾಗೂ ಬ್ರೆಂಡನ್ ಟೇಲ್ ಅವರ ಅಜೇಯ 51 ರನ್​ಗಳ ನೆರವಿನಿಂದ 20 ಓವರ್​ಗೆ 196 ರನ್ ಚಚ್ಚಿತು.

    IND vs AUS: ಧೋನಿ ಅಲ್ಲ: 350+ ಟಾರ್ಗೆಟ್ ಇದ್ದು ಗೆಲ್ಲಬೇಕಾದ್ರೆ ಭಾರತಕ್ಕೆ ಈ ಬ್ಯಾಟ್ಸ್​ಮನ್​ ಬೇಕೆಬೇಕು

    ಟಾರ್ಗೆಟ್ ಬೆನ್ನಟ್ಟಲು ಬಂದ ಗಲ್ಲೆ ತಂಡ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿತು. 37 ವರ್ಷ ಪ್ರಾಯದ ಮುನಾಫ್ ಪಟೇಲ್ ಬೌಲಿಂಗ್​ನ 4ನೇ ಎಸೆತದಲ್ಲಿ ಹಜಾತುಲ್ಲ ಜಜಾಯ್ ಮೆಂಡಿಸ್​ಗೆ ಕ್ಯಾಚಿತ್ತು ಔಟ್ ಆದರು.

    ಈ ಮೂಲಕ ಮುನಾಫ್ ಲಂಕಾ ಪ್ರೀಮಿಯರ್ ಲೀಗ್​ನ ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ವಿಕೆಟ್ ಕಿತ್ತ ಸಾಧನೆ ಮಾಡಿದರು. ಅಲ್ಲದೆ 2017 ರ ಬಳಿಕ ಟಿ-20 ಕ್ರಿಕೆಟ್​ನಲ್ಲಿ ಮುನಾಫ್ ಕಿತ್ತ ಮೊದಲ ವಿಕೆಟ್ ಇದಾಗಿದೆ.





    2011 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ವೇಗಿ ಮುನಾಫ್ ಪಟೇಲ್ ಬಳಿಕ ತಂಡದಿಂದ ಹೊರಬಿದ್ದಿದ್ದರು. ಇದಾಗ್ಯೂ ಅವರು 2016ರವರೆಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು. ನಿವೃತ್ತಿಯ ಬಳಿಕ 2018ರಲ್ಲಿ ದುಬೈನಲ್ಲಿ ನಡೆದ ಟಿ1-0 ಲೀಗ್‌ನ ಭಾಗವಾಗಿದ್ದರು. ಇದೀಗ ಮತ್ತೆ ಸ್ಪರ್ಧಾತ್ಮಕ ಲೀಗ್ ಕ್ರಿಕೆಟ್​ನತ್ತ ಮುನಾಫ್ ಪಟೇಲ್ ಮುಖ ಮಾಡಿದ್ದಾರೆ. ಎಲ್​ಪಿಎಲ್​ನ ಕ್ಯಾಂಡಿ ಟಸ್ಕರ್ಸ್​ ಪರ ಟೀ. ಇಂಡಿಯಾ ಮಾಜಿ ವೇಗಿ ಕಣಕ್ಕಿಳಿದಿದ್ದಾರೆ.

    ಪೆರೆರಾ ಪರಾಕ್ರಮ:

    ಇನ್ನೂ ದಂಬುಲಾ ವೀಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಜಫ್ನಾ ಸ್ಟಾಲಿಯನ್ಸ್​ ತಂಡದ ನಾಯಕ ಶ್ರೀಲಂಕಾದ ಆಲ್​ರೌಂಡರ್​ ತಿಸರಾ ಪೆರೆರಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದು ದಾಖಲೆಯೊಂದನ್ನು ನಿರ್ಮಿಸಿದರು.

    55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!

    ಕೇವಲ 44 ಎಸೆತಗಳಲ್ಲಿ 97 ರನ್​ ಸಿಡಿಸುವ ಮೂಲಕ ಈ ಕ್ರಮಾಂದಲ್ಲಿ ಗರಷ್ಠ ರನ್​ ಸಿಡಿಸಿದ ಶ್ರೀಲಂಕಾದ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದಿದ್ದಾರೆ. ಪೆರೆರಾ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್ಸ್​ ಮತ್ತು 8 ಬೌಂಡರಿ ಸೇರಿದ್ದವು. ಅಲ್ಲದೆ ಟಿ-20 ಕ್ರಿಕೆಟ್​ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್​ ಸಿಡಿಸಿದ ವಿಶ್ವದ 2ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಮೊದಲ ಸ್ಥಾನದಲ್ಲಿ ವಿಂಡೀಸ್​ ಸ್ಫೋಟಕ ಆಲ್​ರೌಂಡರ್​ ರಸೆಲ್ ಇದ್ದಾರೆ. ಈ ಪಂದ್ಯದಲ್ಲಿ ಜಫ್ನಾ ಸ್ಟಾಲಿಯನ್ಸ್ ತಂಡ 66 ರನ್​ಗಳ ಜಯ ಸಾಧಿಸಿತು.
    Published by:Vinay Bhat
    First published: