ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ರಾಯಲ್ ಲಂಡನ್ ಕಪ್ 2021ರ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ಆಟಗಾರರ ಶ್ರೇಯಸ್ ಅಯ್ಯರ್ ಲಂಕಾಷೈರ್ ಕ್ಲಬ್ ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಏಕದಿನ ಟೂರ್ನಿಯು ಜುಲೈ 15 ರಿಂದ ಆರಂಭವಾಗಲಿದ್ದು, ಅಯ್ಯರ್ ಒಂದು ತಿಂಗಳುಗಳ ಕಾಲ ತಂಡ ಜೊತೆಯಿರಲಿದ್ದಾರೆ.
ಭಾರತದ ಪರವಾಗಿ 21 ಏಕದಿನ ಮತ್ತು 29 ಟಿ20 ಪಂದ್ಯಗಳನ್ನಾಡಿರುವ ಅಯ್ಯರ್ ಇದೇ ಮೊದಲ ಬಾರಿಗೆ ಕ್ಲಬ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ನ ಪ್ರತಿಷ್ಠಿತ ಕ್ಲಬ್ ಪರ ಆಡುತ್ತಿರುವ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಅಯ್ಯರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಫಾರೂಖ್ ಎಂಜಿನಿಯರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ದಿನೇಶ್ ಮೊಂಗಿಯಾ ಮತ್ತು ಮುರಳಿ ಕಾರ್ತಿಕ್ ಇಂಗ್ಲೆಂಡ್ ಕ್ಲಬ್ ಪರ ಆಡಿದ್ದರು.
ಹೊಸ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಯಸ್ ಅಯ್ಯರ್ "ಲಂಕಾಷೈರ್ ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್‌ನೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿರುವ ಪೌರಾಣಿಕ ಹೆಸರು. ಫಾರುಖ್ ಎಂಜಿನಿಯರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಂಕಾಷೈರ್ ಪರ ಆಡಿದ್ದಾರೆ. ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ವಿಶ್ವ ದರ್ಜೆಯ ಅಂತರರಾಷ್ಟ್ರೀಯ ಕ್ರೀಡಾಂಗಣವಾಗಿದೆ. ನನ್ನ ತಂಡದ ಸದಸ್ಯರು ಮತ್ತು ಕ್ಲಬ್ ಬೆಂಬಲಿಗರನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ. " ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ