Babar Azam: ಪಾಕ್ ತಂಡದ ನಾಯಕ ಬಾಬರ್​ ವಿರುದ್ಧ ಎಫ್​ಐಆರ್​..!

ಬಾಬರ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ 10 ವರ್ಷಗಳಿಂದ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಅಲ್ಲದೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿದ್ದರು ಎಂದು ಸಂತ್ರಸ್ತೆ ಮುಖ್ತಾರ್‌ ಆರೋಪಿಸಿದ್ದಾರೆ.

babar azam

babar azam

  • Share this:
    ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಿಸುವಂತೆ ತನಿಖಾ ಸಂಸ್ಥೆ ಪೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಲಾಹೋರ್ ಕೋರ್ಟ್​ ಆದೇಶಿಸಿದೆ. ಹಮ್ಜಾ ಮುಖ್ತಾರ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಹಮೀದ್ ಹುಸೇನ್ ಅವರು ಈ ಆದೇಶ ನೀಡಿದ್ದಾರೆ.

    ಪಾಕ್ ತಂಡದ ನಾಯಕನ ವಿರುದ್ಧ ದೂರು ದಾಖಲಿಸಿದ ನಂತರ ತನಗೆ ವಾಟ್ಸ್‌ಆಪ್‌ನಲ್ಲಿ ಬೆದರಿಗೆ ಸಂದೇಶಗಳು ಬರುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹಮೀಜಾ ಅವರು ಸೈಬರ್ ಅಪರಾಧ ಇಲಾಖೆಗೆ ದೂರು ನೀಡಿದ್ದಾರೆ. ಅಲ್ಲದೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ನಂಬರ್​ಗಳಲ್ಲಿ ಒಂದು ಬಾಬರ್ ಅಜಂ ಅವರದು ಎಂದು ತಿಳಿದುಬಂದಿದೆ.

    ವಾಟ್ಸ್‌ಆ್ಯಪ್‌ನಲ್ಲಿ ವಿವಿಧ ಸಂಖ್ಯೆಗಳಿಂದ ನಿರಂತರವಾಗಿ ಬೆದರಿಕೆ ಸಂದೇಶಗಳು ಬರುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಆಕ್ಷೇಪಾರ್ಹ ಚಿತ್ರಗಳು ಮತ್ತು ವೀಡಿಯೊಗಳನ್ನು ಹೊಂದಿದ್ದಾರೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಹಮೀಜಾ ಆರೋಪಿಸಿದ್ದಾರೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹಮೀಜಾ ಈ ಹಿಂದೆ ಬಾಬರ್ ವಿರುದ್ಧ ದೈಹಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದರು.

    ಅಲ್ಲದೆ ಬಾಬರ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ 10 ವರ್ಷಗಳಿಂದ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಅಲ್ಲದೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿದ್ದರು ಎಂದು ಸಂತ್ರಸ್ತೆ ಮುಖ್ತಾರ್‌ ಆರೋಪಿಸಿದ್ದಾರೆ. ಈ ಪ್ರಕರಣದ ಬಳಿಕ ನನಗೆ ಜೀವ ಬೆದರಿಕೆ ಇದೆ ಎಂದು ನ್ಯಾಯಾಲಯದ ಮೊರೆಹೋಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬರ್ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ತನಿಖಾ ಸಂಸ್ಥೆ ಪೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಲಾಹೋರ್ ಕೋರ್ಟ್​ ಆದೇಶಿಸಿದೆ.
    Published by:zahir
    First published: