ಏಕದಿನ ಸರಣಿ ಗೆದ್ದ ಸಂಭ್ರಮ; ಶ್ರೀಲಂಕಾ ಆಟಗಾರ ಮೈದಾನದಲ್ಲಿ ಬೈಕ್ ಓಡಿಸಿ ಆಗಿದ್ದೇನು ನೋಡಿ?

ಮೆಂಡೀಸ್ ಬೈಕ್ ಓಡಿಸಿ, ಸ್ಕಿಡ್ ಆಗಿ ಕೆಳಗೆ ಬಿದ್ದಿರುವ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಬೈಕ್​​ನಿಂದ ಸ್ಕಿಡ್ ಆಗಿ ಬಿದ್ದ ಕುಸಲ್ ಮೆಂಡೀಸ್

ಬೈಕ್​​ನಿಂದ ಸ್ಕಿಡ್ ಆಗಿ ಬಿದ್ದ ಕುಸಲ್ ಮೆಂಡೀಸ್

  • News18
  • Last Updated :
  • Share this:
ಬೆಂಗಳೂರು (ಆ. 01): ವಿಶ್ವಕಪ್​ನಲ್ಲಿ ಕಳೆ ಪ್ರದರ್ಶನ ನೀಡಿದ ಶ್ರೀಲಂಕಾ, ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ.

ನಿನ್ನೆ ಕೊಲಂಬೋದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 122 ರನ್​ಗಳ ಜಯ ಸಾಧಿಸಿ 3-0 ಯಿಂದ ಸರಣಿ ವಶ ಪಡಿಸಿಕೊಂಡಿತು. ಸುಮಾರು ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಮೊದಲ ಸರಣಿ ಗೆದ್ದ ಲಂಕಾ ಆಟಗಾರರು ಸಂಭ್ರದಲ್ಲಿ ಮುಳಿಗಿ ಹೋಗಿದ್ದರು. ಇದೇವೇಳೆ ಲಂಕಾ ಆಟಗಾರ ಕುಸಲ್ ಮೆಂಡೀಸ್ ಮೈದಾನದಲ್ಲೇ ಬೈಕ್ ಓಡಿಸಿ ಪಚೀತಿಗೆ ಒಳಗಾದ ಘಟನೆ ನಡೆದಿದೆ.

ತನ್ನ ಸಹಪಾಠಿ ಜೊತೆ ಮೈದಾನದಲ್ಲಿ ವೇಗವಾಗಿ ಮೆಂಡೀಸ್ ಬೈಕ್ ಓಡಿಸಿದ್ದು, ಆಯತಪ್ಪಿ ಒಮ್ಮೆಲೆ ಸ್ಕಿಡ್ ಆಗಿದೆ. ಇಬ್ಬರೂ ಬೈಕ್​ನಿಂದ ಕೆಳಗೆ ಬಿದ್ದಿದ್ದಾರೆ. ಇದೇವೇಳೆ ಮೈದಾನದಲ್ಲಿದ್ದ ಸೆಕ್ಯೂರಿಟಿ ಇವರ ಸಹಾಯಕ್ಕೆ ಬಂದಿದ್ದಾರೆ.

ರೋಹಿತ್ ಹೆಂಡತಿ ಜೊತೆ ವಿರಾಟ್ ಸುತ್ತಾಟ; ವೈರಲ್ ಆಗುತ್ತಿದೆ ಫೋಟೋ

 ಇಬ್ಬರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೆಂಡೀಸ್ ಬೈಕ್ ಓಡಿಸಿ, ಸ್ಕಿಡ್ ಆಗಿ ಕೆಳಗೆ ಬಿದ್ದಿರುವ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕುಸಲ್ ಮೆಂಡೀಸ್ ಈ ಪಂದ್ಯದಲ್ಲಿ 58 ಎಸೆತಗಳಲ್ಲಿ 54 ರನ್ ಕಲೆಹಾಕಿದ್ದರು.
First published: