ಟೀಂ ಇಂಡಿಯಾ ವೇಗಿಯ ದಾಖಲೆ ಮುರಿಯುವ ತವಕದಲ್ಲಿ ಭಾರತದ ಸ್ಪಿನ್ನರ್

ಏಕದಿನ ಕ್ರಿಕೆಟ್​ನ ಅತೀ ವೇಗದ ವಿಕೆಟ್ ಕಬಳಿಕೆ ದಾಖಲೆ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಹೆಸರಿನಲ್ಲಿದೆ. ಅಫ್ಘಾನ್ ಗೂಗ್ಲಿ ಮಾಂತ್ರಿಕ ಕೇವಲ 44 ಪಂದ್ಯಗಳಿಂದ ನೂರು ವಿಕೆಟ್​ಗಳನ್ನು ಪಡೆದಿದ್ದರು.

zahir | news18-kannada
Updated:August 14, 2019, 6:53 PM IST
ಟೀಂ ಇಂಡಿಯಾ ವೇಗಿಯ ದಾಖಲೆ ಮುರಿಯುವ ತವಕದಲ್ಲಿ ಭಾರತದ ಸ್ಪಿನ್ನರ್
Team india
  • Share this:
ಭಾರತ ತಂಡದ ಯುವ ಸ್ಪಿನ್ನರ್ ಕುಲ್​ದೀಪ್ ಯಾದವ್ ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಆತಿಥೇಯ ವೆಸ್ಟ್​ ಇಂಡೀಸ್ ವಿರುದ್ಧ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ಕುಲ್​ದೀಪ್ ಯಾದವ್ 4 ವಿಕೆಟ್ ಕಬಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಅತೀ ವೇಗವಾಗಿ 100 ವಿಕೆಟ್​ ಪಡೆದ ಸಾಧನೆ ಮರೆಯಲಿದ್ದಾರೆ.

ಇಂತಹದೊಂದು ದಾಖಲೆ ಸದ್ಯ ಭಾರತದ ವೇಗಿ ಮೊಹಮ್ಮದ್ ಶಮಿ ಹೆಸರಿನಲ್ಲಿದ್ದು, 56 ಪಂದ್ಯಗಳಿಂದ 100 ವಿಕೆಟ್ ಪಡೆದಿದ್ದರು. ಸದ್ಯ ಕುಲ್​ದೀಪ್ 53 ಪಂದ್ಯಗಳಿಂದ 96 ವಿಕೆಟ್ ಉರುಳಿಸಿದ್ದಾರೆ. ಈ ಪಟ್ಟಿಗೆ 4 ವಿಕೆಟ್ ಸೇರಿದರೆ ವೇಗವಾಗಿ ವಿಕೆಟ್ ಸೆಂಚುರಿ ಬಾರಿಸಿದ ದಾಖಲೆ ಕುಲ್​ದೀಪ್ ಪಾಲಾಗಲಿದೆ.

ಇನ್ನು ಏಕದಿನ ಕ್ರಿಕೆಟ್​ನ ಅತೀ ವೇಗದ ವಿಕೆಟ್ ಕಬಳಿಕೆ ದಾಖಲೆ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಹೆಸರಿನಲ್ಲಿದೆ. ಅಫ್ಘಾನ್ ಗೂಗ್ಲಿ ಮಾಂತ್ರಿಕ ಕೇವಲ 44 ಪಂದ್ಯಗಳಿಂದ ನೂರು ವಿಕೆಟ್​ಗಳನ್ನು ಪಡೆದಿದ್ದರು. ಸದ್ಯ ಬುಧವಾರ ನಡೆಯಲಿರುವ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಕುಲ್​ದೀಪ್ ಇದ್ದು, ಈ ಪಂದ್ಯದ ಮೂಲಕ ಶ್ರೇಷ್ಠ ಸಾಧನೆ ಬರೆಯಲು ಕಾತುರರಾಗಿದ್ದಾರೆ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ