ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕರ್ನಾಟಕದ ಟೀಂ ಇಂಡಿಯಾ ಆಟಗಾರನಿಗೆ ಸಿಸಿಬಿ ನೋಟಿಸ್!

ಕೆಪಿಎಲ್​ನಲ್ಲಿ ಶಿವಮೊಗ್ಗ ಲಯನ್ಸ್​​ ತಂಡದ ನಾಯಕನಾಗಿದ್ದ ಮಿಥುನ್, ಟೀಂ ಇಂಡಿಯಾ ಪರ 5 ಏಕದಿನ ಹಾಗೂ 4 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಅಂತರಾಷ್ಟ್ರೀಯ ಏಕದಿನದಲ್ಲಿ 3 ವಿಕೆಟ್ ಹಾಗೂ ಟೆಸ್ಟ್​ನಲ್ಲಿ 9 ಪಡೆದಿದ್ದಾರೆ.

Vinay Bhat | news18-kannada
Updated:November 28, 2019, 9:56 AM IST
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕರ್ನಾಟಕದ ಟೀಂ ಇಂಡಿಯಾ ಆಟಗಾರನಿಗೆ ಸಿಸಿಬಿ ನೋಟಿಸ್!
ಕರ್ನಾಟಕ ಪ್ರಿಮಿಯರ್ ​ಲೀಗ್
  • Share this:
ಬೆಂಗಳೂರು (ನ. 28): ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೆ ಟ್ರ್ಯಾಪ್‌ ಮೂಲಕ ಕೆಲವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಈ ವಿಚಾರವಾಗಿ ಎಲ್ಲಾ ತಂಡಗಳಿಗೂ ನೋಟಿಸ್ ನೀಡಲಾಗಿತ್ತು.

ಹೀಗಿರುವಾಗ ಸಿಸಿಬಿ ತಂಡ ಅಂತರಾಷ್ಟ್ರೀಯ ಆಟಗಾರ ಅಭಿಮನ್ಯು ಮಿಥನ್​ಗೆ ನೋಟಿಸ್ ಜಾರಿ ಮಾಡಿದೆ. ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಕೇಸಿನಡಿಯಲ್ಲಿ ಮಿಥನ್​ಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

KPL Match Fixing: CCB Police Issued notice to Team India Player Abhimanyu Mithun
ಅಭಿಮನ್ಯು ಮಿಥುನ್


MS Dhoni: ಬ್ಲೂ ಜೆರ್ಸಿಯಲ್ಲಿ ಯಾವಾಗ ಕಣಕ್ಕೆ?; ಕೊನೆಗೂ ಮೌನ ಮುರಿದ ಎಂಎಸ್ ಧೋನಿ

ಕೆಪಿಎಲ್​ನಲ್ಲಿ ಶಿವಮೊಗ್ಗ ಲಯನ್ಸ್​​ ತಂಡದ ನಾಯಕನಾಗಿದ್ದ ಮಿಥುನ್, ಟೀಂ ಇಂಡಿಯಾ ಪರ 5 ಏಕದಿನ ಹಾಗೂ 4 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಅಂತರಾಷ್ಟ್ರೀಯ ಏಕದಿನದಲ್ಲಿ 3 ವಿಕೆಟ್ ಹಾಗೂ ಟೆಸ್ಟ್​ನಲ್ಲಿ 9  ಪಡೆದಿದ್ದಾರೆ.

ರಾಜ್ಯದ ಪ್ರಮುಖ ವೇಗದ ಬೌಲರ್ ಆಗಿರುವ ಅಭಿಮನ್ಯು ಮಿಥುನ್​ಗೂ ಕೆಪಿಎಲ್ ಫಿಕ್ಸಿಂಗ್ ಬಿಸಿ ತಟ್ಟಿದೆ. ನೋಟಿಸ್ ನೀಡಿದ ಹಿನ್ನೆಲೆ ಇಂದು ಅಭಿಮನ್ಯು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೆ ಫಿಕ್ಸಿಂಗ್ ನಡೆಸಿದ ಆರೋಪದಡಿ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ವಾಕ್ ತಾರ್​ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ತಮಿಳುನಾಡು ಪ್ರಿಮಿಯರ್ ಲೀಗ್​ನ ಚಂದ್ರಶೇಖರ್ ಎಂಬ ಆಟಗಾರ ಬೆಟ್ಟಿಂಗ್ ವಿಚಾರ ಎಲ್ಲಿ ಹೊರಬರುತ್ತದೆ ಎಂದು ಹೆದರಿ ಸೂಸೈಡ್ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಿದ್ದಿತ್ತು.Syed Mushtaq Ali: ಪಂಬಾಬ್ ಪರ ಆಡಿ ಕರ್ನಾಟಕವನ್ನು ಸೆಮಿ ಫೈನಲ್​ಗೇರಿಸಿದ ಆರ್​ಸಿಬಿ ಆಟಗಾರ!

ಅಲ್ಲದೆ ಟ್ರ್ಯಾಪ್‌ ಮೂಲಕ ಕೆಲವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. 7 ಮಂದಿಯನ್ನು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಬಹಳಷ್ಟು ಆಟಗಾರರಿಗೆ ಹನಿ ಟ್ರ್ಯಾಪಿಂಗ್ ನಡೆಸಲಾಗಿದೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ನಾವು ಬಂಧಿಸುತ್ತೇವೆ. ಸಾಕ್ಷಿಗಳು ಸಿಕ್ಕಕೂಡಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.

First published: November 28, 2019, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading